Royal Enfield: ರಾಯಲ್ ಎನ್‌ಫೀಲ್ಡ್ ಅಭಿಮಾನಿಗಳಿಗೆ ಕಹಿಸುದ್ದಿ: ಬುಲೆಟ್ 350 ಈ ಮಾಡೆಲ್ ಸ್ಥಗಿತ!

ರಾಯಲ್ ಎನ್‌ಫೀಲ್ಡ್ (Royal Enfield) ಕಂಪನಿಯು ಭಾರತದಲ್ಲಿ ಬುಲೆಟ್ 350 ಬೈಕಿನ ಮಿಲಿಟರಿ ಸಿಲ್ವರ್ ವೇರಿಯೆಂಟ್ ಅನ್ನು ಸ್ಥಗಿತಗೊಳಿಸಿದೆ. ಕಳೆದ ವರ್ಷದ (2024) ಆರಂಭದಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ನ ಮಿಲಿಟರಿ ಸಿಲ್ವರ್ ರೂಪಾಂತರವನ್ನು 1.79 ಲಕ್ಷ ರೂ.ಗೆ ಬಿಡುಗಡೆ ಮಾಡಿತ್ತು. ಆಗ ಮಿಲಿಟರಿ ಸಿಲ್ವರ್ ಬ್ಲ್ಯಾಕ್ ಮತ್ತು ಮಿಲಿಟರಿ ಸಿಲ್ವರ್ ರೆಡ್ ಬಣ್ಣಗಳನ್ನು ಪರಿಚಯಿಸಿತ್ತು. ಇದು ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕಿಗಿಂತ 6,000 ರೂ.ಗಳಷ್ಟು ದುಬಾರಿಯಾಗಿತ್ತು. ಆದರೆ ಈಗ ಅದೇ ಮಿಲಿಟರಿ ಸಿಲ್ವರ್ ವೇರಿಯೆಂಟ್ ಅನ್ನು ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ.

ರಾಯಲ್ ಎನ್‌ಫೀಲ್ಡ್ ಕಂಪನಿಯು ಮಿಲಿಟರಿ ಸಿಲ್ವರ್ ಬಣ್ಣವನ್ನು ಆಯ್ಕೆಗಳ ಪಟ್ಟಿಯಿಂದ ಕೈಬಿಟ್ಟು ಹೊಸ ಬೆಟಾಲಿಯನ್ ಬ್ಲ್ಯಾಕ್ ಬಣ್ಣವನ್ನು ಬಿಡುಗಡೆಗೊಳಿಸಿದೆ. ಮೂಲಗಳ ಪ್ರಕಾರ ಈ ಮಾಡೆಲ್‌ಗೆ ಸರಿಯಾದ ಬೇಡಿಕೆ ಇಲ್ಲದ ಕಾರಣ ಕಂಪನಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಇದೀಗ ಪರಿಚಯಿಸಿರುವ ಹೊಸ ಬೆಟಾಲಿಯನ್ ಬ್ಲ್ಯಾಕ್ ವೇರಿಯೆಂಟ್ ಹಿಟ್ ಆಗುವ ನಿರೀಕ್ಷೆಯಿದೆ.

royal-enfield-discontinued-bullet-350-military-silver-variant

ಏಕೆಂದರೆ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ದೇಶದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಉತ್ತರ ಭಾರತದಲ್ಲಿ ಬಲವಾದ ಬೇಡಿಕೆ ಹೊಂದಿದೆ. ಇಲ್ಲಿನ ಬಹುತೇಕ ಗ್ರಾಹಕರು ತಮ್ಮ ಬೈಕ್ ಹಳೆಯ ಬುಲೆಟ್‌ನಂತೆ ಕಾಣಬೇಕೆಂದು ಬಯಸುತ್ತಾರೆ. ಇದೀಗ ಪರಿಚಯಿಸಿರುವ ಬೆಟಾಲಿಯನ್ ಬ್ಲ್ಯಾಕ್ ವೇರಿಯೆಂಟ್ ಆ ಅಚಲ ಮಾರುಕಟ್ಟೆ ಬೇಡಿಕೆಯ ಪ್ರತಿಬಿಂಬವಾಗಿದ್ದು, ಉತ್ತಮ ಮಾರಾಟ ಕಾಣುವ ಸಾಧ್ಯತೆ ಇದೆ.

ಗೋಲ್ಡ್ ಹ್ಯಾಂಡೆಡ್ ಪೇಂಟ್ ಮಾಡಿದ ಪಿನ್ ಸ್ಟ್ರಿಪ್‌ಗಳೊಂದಿಗೆ ಬ್ಲಾಕ್ ಬಾಡಿವರ್ಕ್, ಸ್ಕೂಪ್-ಔಟ್ ಸೀಟ್ ಮತ್ತು ಟ್ರೇಡ್ ಮಾರ್ಕ್ ಬುಲೆಟ್ ಟೈಲ್ ಲ್ಯಾಂಪ್ ಅನ್ನು ಹೊಸ ಮಾಡಲ್ ಹೊಂದಿದೆ. ಹಾಗೆಯೇ ಫ್ಯೂಯಲ್ ಟ್ಯಾಂಕ್ ಮೇಲೆ ಕೈಯಿಂದ ಪೇಂಟ್ ಮಾಡಲಾದ ಬೆಳ್ಳಿಯ ಪಟ್ಟೆಗಳು, ಕೈಯಿಂದ ಚಿತ್ರಿಸಲು ಕಲಾವಿದರನ್ನು ನೇಮಿಸಿಕೊಳ್ಳುವ ದೀರ್ಘಕಾಲದ ಪರಂಪರೆಯನ್ನು ರಾಯಲ್ ಎನ್‌ಫೀಲ್ಡ್ ಹೊಂದಿದೆ.

royal-enfield-discontinued-bullet-350-military-silver-variant

ಈ ಪೇಂಟ್ ಪಟ್ಟಿಗಳು ಬೈಕಿನ ದೃಶ್ಯ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಬುಲೆಟ್ 350 ಶ್ರೇಣಿಯು ಬೇಸ್ ಮಿಲಿಟರಿ ರೂಪಾಂತರವು ರೂ.1.73 ಲಕ್ಷದಿಂದ ಪ್ರಾರಂಭವಾಗುತ್ತದೆ. ನಂತರ ಇದರ ಬೆಟಾಲಿಯನ್ ಬ್ಲ್ಯಾಕ್‌ಗೆ ರೂ.1.75 ಲಕ್ಷಗಳವರೆಗೆ ಇದೆ. ಈ ಎರಡೂ ರೂಪಾಂತರಗಳು ಹಿಂಭಾಗದ ಡ್ರಮ್ ಬ್ರೇಕ್‌ನೊಂದಿಗೆ ಬರುತ್ತವೆ. ಆದ್ದರಿಂದ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಹೊಂದಿದೆ.

ಬೆಟಾಲಿಯನ್ ಬ್ಲ್ಯಾಕ್ ಮೇಲೆ ಸ್ಟ್ಯಾಂಡರ್ಡ್ ರೂಪಾಂತರವಿದ್ದು, ಇದರ ಬೆಲೆ ರೂ.1.97 ಲಕ್ಷವಿದೆ. ಇದರ ನಂತರ 2.16 ಲಕ್ಷ ರೂ.ಗಳ ಶ್ರೇಣಿಯಲ್ಲಿ ಅಗ್ರಸ್ಥಾನದಲ್ಲಿರುವ ಬ್ಲ್ಯಾಕ್ ಗೋಲ್ಡ್ ರೂಪಾಂತರವಿದೆ. ಬುಲೆಟ್ ನ ಮೊದಲ ಎರಡು ರೂಪಾಂತರಗಳು ಡ್ಯುಯಲ್-ಚಾನೆಲ್ ಎಬಿಎಸ್‌ನೊಂದಿಗೆ ಬರುತ್ತವೆ. ರಾಯಲ್ ಎನ್‌ಫೀಲ್ಡ್ ಬೆಸ್ಟ್ ಸೆಲ್ಲರ್ - ಕ್ಲಾಸಿಕ್ 350 ನ ಹೋಲಿಸಬಹುದಾದ ರೂಪಾಂತರಗಳಿಗೆ ಸಮಾನವಾದ ಬೆಲೆಯನ್ನು ಹೊಂದಿವೆ.

ಬುಲೆಟ್ 350 ಬೈಕ್ 349 ಸಿಸಿ ಸಿಂಗಲ್ ಸಿಲಿಂಡರ್ ಜೆ-ಸೀರಿಸ್ ಎಂಜಿನ್ ಹೊಂದಿದ್ದು, ಇದು 20.2 ಬಿಹೆಚ್ ಪವರ್ ಮತ್ತು 27 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಕಾಲಾತೀತ ಬಾಡಿವರ್ಕ್ ಅಡಿಯಲ್ಲಿ, ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಡ್ಯುಯಲ್ ಶಾಕ್ ಅಬ್ಸಾರ್ಬಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, January 4, 2025, 13:00 [IST]
English summary
Royal enfield discontinued bullet 350 military silver variant
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+