Simple one: 248 ಕಿ.ಮೀ ಓಡುವ ಬೆಂಗಳೂರಿನ ಸ್ಕೂಟರ್ ಬಿಡುಗಡೆ: ಅದೇ ಬೆಲೆಗೆ ಹೊಸ ಫೀಚರ್ಸ್!
ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗವು ಭಾರೀ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರು ಹೊಸ ಅಪ್‌ಡೇಟ್‌ಗಳೊಂದಿಗೆ ತಮ್ಮ ಇವಿಗಳನ್ನು ಬಿಡುಗಡೆ ಮಾಡುತ್ತಿದ್ದು, ಪೈಪೋಟಿ ಹೆಚ್ಚಾಗುತ್ತಲೇ ಇದೆ. ಓಲಾ ತನ್ನ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಹಾಗೂ ತನ್ನ ಇವಿ ಸ್ಕೂಟರ್‌ಗಳ ಅಪ್‌ಡೇಟ್‌ಗಳನ್ನು ಘೋಷಿಸಿದ ಬೆನ್ನಲ್ಲೇ, ಇದೀಗ ಹೊಸ ಅಪ್‌ಡೇಟ್‌ಗಳೊಂದಿಗೆ ಸಿಂಪಲ್ ಎನರ್ಜಿ (Simple energy) ಕಂಪನಿ ಕೂಡ ತನ್ನ ಸ್ಕೂಟರ್ ಅನ್ನು ನವೀಕರಿಸಿ ಬಿಡುಗಡೆ ಮಾಡಿದೆ. ಈ ಅಪ್‌ಡೇಟ್ ಭಾಗವಾಗಿ ಸ್ಕೂಟರ್ ಹೆಚ್ಚಿನ ರೇಂಜ್ ಹಾಗೂ ಕೆಲವು ಹೊಸ ಟೆಕ್ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.
ಸಿಂಪಲ್ ಎನರ್ಜಿ ತನ್ನ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನವೀಕರಿಸುವ ಮೂಲಕ, ಈಗ ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 248 ಕಿ.ಮೀ ಐಡಿಸಿ ರೇಂಜ್ (ಮೈಲೇಜ್) ಪಡೆಯಬಹುದು. ಈ ಮೂಲಕ ಹಳೆಯ ಮಾದರಿಗೆ ಹೋಲಿಸಿದರೆ ಹೊಸ ಅಪ್‌ಡೇಟೆಡ್ ಮಾಡಲ್ ಸಿಂಪಲ್ ಒನ್ ಸ್ಕೂಟರ್ ರೇಂಜ್ 36 ಕಿ.ಮೀ ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.

ಮತ್ತೊಂದು ವಿಶೇಷತೆ ಏನೆಂದರೆ ಕಂಪನಿಯು ಬೆಲೆಗಳನ್ನು ಹೆಚ್ಚಿಸಿಲ್ಲ, ಹೊಸ ಅಪ್‌ಡೇಟೆಡ್ ಸಿಂಪಲ್ ಒನ್ (Simple One) ಬೆಲೆಯು ರೂ.1.66 ಲಕ್ಷಗಳಾಗಿದೆ (ಎಕ್ಸ್ ಶೋರೂಂ). ಈ ನವೀಕರಣದ ಭಾಗವಾಗಿ ಹೊಸ ವೈಶಿಷ್ಟ್ಯಗಳನ್ನು ಕೂಡ ಸೇರಿಸಲಾಗಿದೆ. ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ರಿಜನರೇಟಿವ್ ಬ್ರೇಕಿಂಗ್ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿವೆ.
ಸಿಂಪಲ್ ಒನ್ ಒಟ್ಟು 5 ಕಿಲೋವ್ಯಾಟ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ, ಇದನ್ನು 3.7 ಕಿಲೋವ್ಯಾಟ್ ಸ್ಥಿರ ಬ್ಯಾಟರಿ ಮತ್ತು ಪೋರ್ಟಬಲ್ 1.3 ಕಿಲೋವ್ಯಾಟ್ ಪ್ಯಾಕ್ ಎಂದು ಎರಡು ಪ್ಯಾಕ್‌ಗಳಾಗಿ ವಿಂಗಡಿಸಲಾಗಿದೆ. ಕಂಪನಿಯು ಕೆಲವು ನಿಫ್ಟಿ ಎಲೆಕ್ಟ್ರಾನಿಕ್ ತಂತ್ರಗಳು ಮತ್ತು ಹೆಚ್ಚು ಪರಿಣಾಮಕಾರಿ ಡ್ರೈವ್ ಟ್ರೇನ್ ಮೂಲಕ ಈಗ 248 ಕಿ.ಮೀ ರೇಂಜ್ ಸಾಧಿಸಿರುವುದಾಗಿ ಹೇಳಿಕೊಂಡಿದೆ.

ಉಳಿದಂತೆ ಸ್ಕೂಟರ್ ಯಾಂತ್ರಿಕವಾಗಿ ಯಾವುದೇ ಬದಲಾವಣೆಗಳನ್ನು ಕಾಣದೇ ಹಾಗೇ ಇದೆ. 136 ಕೆ.ಜಿ ತೂಕವನ್ನು ಹೊಂದಿರುವ ಸಿಂಪಲ್ ಒನ್ ಇವಿ ಸ್ಕೂಟರ್ ಸದ್ಯ ತನ್ನ ವಿಭಾಗದಲ್ಲಿ ಲಭ್ಯವಿರುವ ಅತ್ಯಂತ ಭಾರವಾದ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಮತ್ತು 796 ಎಂಎಂ ಸೀಟ್ ಎತ್ತರವನ್ನು ಹೊಂದಿದೆ.
2026ರ ವೇಳೆಗೆ 150 ಶೋರೂಂಗಳನ್ನು ತೆರೆಯಲು ಕಂಪನಿ ಯೋಜಿಸಿದೆ. ಪ್ರಸ್ತುತ, ಸಿಂಪಲ್ ಒನ್ ದೇಶಾದ್ಯಂತ ಕೇವಲ 10 ಡೀಲರ್‌ಶಿಪ್‌ಗಳ ಸಣ್ಣ ಜಾಲವನ್ನು ಹೊಂದಿದೆ. ಆದರೆ ಕಂಪನಿಯು 2026 ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ದೇಶಾದ್ಯಂತ 150 ಶೋರೂಂಗಳು ಮತ್ತು 200 ಸೇವಾ ಕೇಂದ್ರಗಳನ್ನು ತೆರೆಯಲು ಯೋಜಿಸಿದೆ ಎಂದು ಹೇಳಿದೆ.

ಸದ್ಯ ಇವಿ ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿರುವ ಪೈಪೋಟಿಯನ್ನು ಗಮನದಲ್ಲಿಟ್ಟುಕೊಂಡು ವಾಹನವನ್ನು ಅಪ್‌ಡೇಟ್ ಮಾಡಲಾಗಿದೆ. ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಈಗ ಹೊಸ ಸ್ಕೂಟರ್ ಹೆಚ್ಚು ರೇಂಜ್ ಹಾಗೂ ಹೊಸ ಫೀಚರ್ಸ್ ಅನ್ನು ಸೇರಿಸಲಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಎಥರ್, ಓಲಾ, ಟಿವಿಎಸ್, ಬಜಾಜ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಸಿಂಪಲ್ ಒನ್ ಇವಿ ಪ್ರಮುಖ ಪ್ರತಿಸ್ಪರ್ಧಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








