Steelbird: ಅಗ್ಗದ ಬೆಲೆಗೆ ಅಂತರಾಷ್ಟ್ರೀಯ ಗುಣಮಟ್ಟದ ಹೆಲ್ಮೆಟ್ ಬಿಡುಗಡೆ: ವಿಶೇಷತೆಗಳೇನು?
ಪ್ರಮುಖ ಸ್ವದೇಶಿ ಹೆಲ್ಮೆಟ್ ತಯಾರಕರಾದ ಸ್ಟೀಲ್‌ಬರ್ಡ್, ಭಾರತದಲ್ಲಿ SXE ಹೆಲ್ಮೆಟ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ರೂ. 3,599 ರಿಂದ ಆರಂಭವಾಗುತ್ತದೆ, ಇದು TPE (ಥರ್ಮೋಪ್ಲಾಸ್ಟಿಕ್ ಎಲಾಸ್ಟೊಮರ್) ಎನರ್ಜಿ ಅಬ್ಸಾರ್ಬರ್ ಅನ್ನು ಒಳಗೊಂಡಿರುವ ದೇಶದ ಮೊದಲ ಮೋಟಾರ್‌ಸೈಕಲ್ ಹೆಲ್ಮೆಟ್ ಆಗಿದೆ. ಈ ನಾವೀನ್ಯತೆಯು ಸುಧಾರಿತ ರಕ್ಷಣೆಯ ಅಗತ್ಯವಿರುವ ಮಾರುಕಟ್ಟೆ ವಿಭಾಗದಲ್ಲಿ ಸವಾರರ ಸುರಕ್ಷತೆ, ಸೌಕರ್ಯ ಮತ್ತು ಶೈಲಿಯನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ. ಇತರ ದೇಶಗಳಲ್ಲಿನ ಇದೇ ಮಾದರಿಯ ಹೆಲ್ಮೆಟ್‌ಗಳಿಗೆ ಹೋಲಿಸಿದರೆ ಇದು ತೀರಾ ಕೈಗೆಟುಕುವ ಬೆಲೆಯಾಗಿದೆ.
ಪ್ರಮುಖ ವೈಶಿಷ್ಟ್ಯಗಳು ಮತ್ತು ವಿವರಗಳು
ಟ್ರಿಪಲ್-ಲೇಯರ್ ಇಂಪ್ಯಾಕ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಹೊಂದಿರುವ ಈ ಹೆಲ್ಮೆಟ್ ಹೆಚ್ಚಿನ - ಇಂಪ್ಯಾಕ್ಟ್ ABS ಹೊರ ಶೆಲ್, ಬ್ಲಾಕ್ EPS (ವಿಸ್ತರಿತ ಪಾಲಿಸ್ಟೈರೀನ್) ಲೈನರ್ ಮತ್ತು TPE ಲೇಯರ್ ಅನ್ನು ಒಳಗೊಂಡಿದೆ. ಹಾಗೆಯೇ ಇದು TPE ಎನರ್ಜಿ ಅಬ್ಸಾರ್ಬರ್ ಆಗಿದ್ದು, ಅಪಘಾತದ ಸಮಯದಲ್ಲಿ ಉಂಟಾಗುವ ಆಘಾತಕಾರಿ ಮಿದುಳಿನ ಗಾಯಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಡ್ಯುಯಲ್ ಸುರಕ್ಷತಾ ಪ್ರಮಾಣೀಕರಣಗಳಾದ BIS IS 4151:2015 (ಭಾರತ) ಮತ್ತು DOT FMVSS 218 (USA) ಗೆ ಅನುಗುಣವಾಗಿ ಇದನ್ನು ನಿರ್ಮಿಸಲಾಗಿದೆ, ಇದು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಾಣವಾಗಿದ್ದು ಉತ್ತಮ ರಕ್ಷಣೆ ನೀಡುತ್ತದೆ. ಹಾಗೆಯೇ ಸೌಕರ್ಯ ಮತ್ತು ಅನುಕೂಲತೆ ವಿಷಯದಲ್ಲೂ ರಾಜಿಯಿಲ್ಲದಂತೆ ವಿನ್ಯಾಸಗೊಳಿಸಿರುವುದಾಗಿ ಕಂಪನಿ ಹೇಳಿದೆ.
ಏರೋಡೈನಮಿಕ್ ವಿನ್ಯಾಸದೊಂದಿಗೆ ಹೆಚ್ಚು ಆರಾಮದಾಯಕವಾದ ದೀರ್ಘ ಸವಾರಿಗಳಲ್ಲಿ ಗಾಳಿಯ ಹರಿವನ್ನು ಸುಲಭಗೊಳಿಸುತ್ತದೆ. ಇದರ ವೆಂಟಿಲೇಷನ್ ವ್ಯವಸ್ಥೆಯು ಮಲ್ಟಿ ಏರ್ ಇಂಟೇಕ್ ಮತ್ತು ಎಕ್ಸಾಸ್ಟ್ ದ್ವಾರಗಳು ಪರಿಣಾಮಕಾರಿ ಗಾಳಿಯ ಹರಿವು ಮತ್ತು ತಾಪಮಾನ ನಿಯಂತ್ರಣವನ್ನು ಒದಗಿಸುತ್ತವೆ, ಇದು ಭಾರತೀಯ ಹವಾಮಾನಕ್ಕೆ ಸೂಕ್ತವಾಗಿದೆ ಎಂದು ಬ್ರಾಂಡ್ ಭರವಸೆ ನೀಡಿದೆ.

ಉಸಿರಾಟಕ್ಕೆ ಉತ್ತವಾದ ಒಳಾಂಗಣ ಪ್ಯಾಡಿಂಗ್‌ನೊಂದಿಗೆ, ಆರಾಮದಾಯಕವಾದ ಫಿಟ್ ಅನ್ನು ಖಚಿತಪಡಿಸಿಕೊಳ್ಳುವ ಥರ್ಮೋಫಾರ್ಮ್ಡ್ ಇನ್ಸರ್ಟ್‌ಗಳನ್ನು ಒಳಗೊಂಡಿದೆ. ಶಬ್ದ-ಕಡಿತ ಒಳಪದರದೊಂದಿಗೆ ನಿಶ್ಯಬ್ದ ಸವಾರಿಯನ್ನು ನೀಡುತ್ತದೆ. ಡ್ಯುಯಲ್ ವಿಸರ್ ವ್ಯವಸ್ಥೆ ಕೂಡ ಇದ್ದು ಹಗಲಿನಲ್ಲಿ ಸೂರ್ಯನ ಶಾಖದ ರಕ್ಷಣೆಗಾಗಿ ಸ್ಕ್ರಾಚ್-ನಿರೋಧಕ ಹೊರಗಿನ ವಿಸರ್ ಮತ್ತು ಆಂತರಿಕ ಸೂರ್ಯನ ಶೀಲ್ಡ್ ಅನ್ನು ಒಳಗೊಂಡಿದೆ, ಹಾಗೆಯೇ ವೈಸರ್ ಫಾಗಿಂಗ್ ಅನ್ನು ಕಡಿಮೆ ಮಾಡಲು ಪಿನ್‌ಲಾಕ್ ಇದೆ.
ಮೈಕ್ರೋಮೆಟ್ರಿಕ್ ಬಕಲ್ ನೀಡಲಾಗಿದ್ದು, ಇದು ಸುರಕ್ಷಿತ ಮತ್ತು ಸುಲಭವಾದ ಜೋಡಣೆಯನ್ನು ಸಕ್ರಿಯಗೊಳಿಸುತ್ತದೆ. ಪ್ರೀಮಿಯಂ ಫಿನಿಶ್ ಮತ್ತು ಸಿಗ್ನೇಚರ್ SXE ಲೋಗೋದೊಂದಿಗೆ 13 ಕ್ಕೂ ಹೆಚ್ಚು ಆಯ್ಕೆಗಳು ಮತ್ತು ವಿವಿಧ ಡೆಕಲ್‌ಗಳಲ್ಲಿ ಲಭ್ಯವಿದೆ. ನಿಖರವಾದ ಫಿಟ್‌ಗಾಗಿ S (560 mm), M (580 mm), L (600 mm), XL (620 mm) ಸೈಜ್‌ಗಳಲ್ಲಿ ಲಭ್ಯವಿದೆ.
ವಿನ್ಯಾಸ ಅಥವಾ ಸೌಕರ್ಯದಲ್ಲಿ ರಾಜಿ ಮಾಡಿಕೊಳ್ಳದೆ ಜಾಗತಿಕ ಸುರಕ್ಷತಾ ಮಾನದಂಡಗಳನ್ನು ಬಯಸುವ ಯುವ, ಸುರಕ್ಷತೆ-ಪ್ರಜ್ಞೆಯುಳ್ಳ ಸವಾರರಿಗೆ SXE ಬೆಸ್ಟ್ ಆಯ್ಕೆಯಾಗಿದೆ. ಈ ಹೆಲ್ಮೆಟ್ ಆರಭಿಕ ಬೆಲೆಯು ರೂ. 3,599 ಇದೆ. ಭಾರತೀಯ ಹೆಲ್ಮೆಟ್ ಸುರಕ್ಷತೆ ಮತ್ತು ವಿನ್ಯಾಸ ಮಾನದಂಡಗಳಲ್ಲಿ ಗಣನೀಯ ಹೆಜ್ಜೆಯನ್ನು ಪ್ರತಿನಿಧಿಸುವ TPE ತಂತ್ರಜ್ಞಾನ ಮತ್ತು ಡ್ಯುಯಲ್ ಜಾಗತಿಕ ಸುರಕ್ಷತಾ ಪ್ರಮಾಣೀಕರಣವನ್ನು ಹೊಂದಿರುವ ಭಾರತದ ಮೊದಲ ಹೆಲ್ಮೆಟ್ ಆಗಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಸ್ಟೀಲ್‌ಬರ್ಡ್ SXE ಹೆಲ್ಮೆಟ್ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು, ಅಂತರರಾಷ್ಟ್ರೀಯ ಪ್ರಮಾಣೀಕರಣಗಳು ಮತ್ತು ಸವಾರ - ಕೇಂದ್ರಿತ ಸೌಕರ್ಯಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುತ್ತದೆ, ಇದು ಭಾರತದಲ್ಲಿ ಹೆಲ್ಮೆಟ್ ತಂತ್ರಜ್ಞಾನಕ್ಕೆ ಹೊಸ ಮಾನದಂಡವನ್ನು ಹೊಂದಿಸುವ ಗುರಿಯನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.


Click it and Unblock the Notifications








