Suzuki: 170 Km ಮೈಲೇಜ್.. ಹೊಸ ಸುಜುಕಿ ಆಕ್ಸೆಸ್ 125 ಸಿಎನ್‌ಜಿ ಸ್ಕೂಟರ್ ಬಂದೇ ಬಿಡ್ತು, ಬೆಲೆ ಎಷ್ಟು.. ವಿಶೇಷತೆಗಳೇನು?

ಸುಜುಕಿ ಆಕ್ಸೆಸ್ 125 (Suzuki Access 125) ಪ್ರಮುಖ ಸ್ಕೂಟರ್ ಆಗಿದೆ. ಇದು ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತದೆ. ತುಂಬಾ ಚೆನ್ನಾಗಿರುವ ವಿನ್ಯಾಸ ಹೊಂದಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಇದೇ ಸ್ಕೂಟರ್ ಸಿಎನ್‌ಜಿ ರೂಪದಲ್ಲಿ ಮಾರಾಟಕ್ಕೆ ಬರಲು ಸಿದ್ಧವಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಟೋಕಿಯೋದಲ್ಲಿ ಆಯೋಜಿಸಿರುವ 2025ರ 'ಜಪಾನ್ ಮೊಬಿಲಿಟಿ ಶೋ'ನಲ್ಲಿ ಸುಜುಕಿ ಮೋಟಾರ್‌ಸೈಕಲ್ (Suzuki Motorcycle), ಸಿಎನ್‌ಜಿ ಚಾಲಿತ 'ಆಕ್ಸೆಸ್ 125' ಸ್ಕೂಟರ್‌ನ್ನು ಅನಾವರಣಗೊಳಿಸಿದೆ. ಇದು ಸ್ಟ್ಯಾಂಡರ್ಡ್ ಮಾಡೆಲ್‌ನಂತೆ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಪಡೆದಿದೆ.

Suzuki Access 125 CNG Unveiled Expected Price And Mileage Details

ನೂತನ ಸುಜುಕಿ ಆಕ್ಸೆಸ್ 125 ಸಿಎನ್‌ಜಿ (Suzuki Access 125 CNG) ಸ್ಕೂಟರ್‌, ಸೀಟ್‌ನ ಕೆಳಭಾಗದಲ್ಲಿ 6 ಲೀಟರ್‌ನಷ್ಟು ಸಿಎನ್‌ಜಿ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. ಇದರೊಂದಿಗೆ 2 ಲೀಟರ್‌ನಷ್ಟು ಪೆಟ್ರೋಲ್ ಟ್ಯಾಂಕ್‌ನ್ನು ಒಳಗೊಂಡಿದೆ. ಸರಿ ಸುಮಾರು 170 ಕಿಲೋಮೀಟರ್ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.

ಇದರ ಪವರ್‌ಟ್ರೇನ್‌ನ್ನು ಕುರಿತಂತೆ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ಈ ಸ್ಕೂಟರ್ 124 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿರಬಹುದು ಎನ್ನಲಾಗಿದೆ. ಟಿಎಫ್‌ಟಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಹಾಗೂ ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಸಾಧ್ಯತೆಯಿದೆ.

ಹೊಸ ಸುಜುಕಿ ಆಕ್ಸೆಸ್ 125 ಸಿಎನ್‌ಜಿ ಸ್ಕೂಟರ್, ಮೊದಲಿಗೆ ಜಪಾನ್ ದೇಶದಲ್ಲಿ ಬಿಡುಗಡೆಯಾಗಲಿದೆ. ಆ ಬಳಿಕ, ಭಾರತದ ಮಾರುಕಟ್ಟೆಯಲ್ಲಿಯೂ ಮಾರಾಟಕ್ಕೆ ಬರಬಹುದು ಎನ್ನಲಾಗಿದೆ. ರೂ.1 ಲಕ್ಷ (ಎಕ್ಸ್-ಶೋರೂಂ) ಆಸುಪಾಸಿನಲ್ಲಿ ಗ್ರಾಹಕರ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೆ ಮುಂಬರುವ ಟಿವಿಎಸ್ ಜೂಪಿಟರ್ ಸಿಎನ್‌ಜಿ (TVS Jupiter CNG) ಸ್ಕೂಟರ್ ನೇರವಾದ ಪ್ರತಿಸ್ಪರ್ಧಿಯಾಗಲಿದೆ.

ಟಿವಿಎಸ್ ಜೂಪಿಟರ್ ಸಿಎನ್‌ಜಿ ವಿಶೇಷತೆಗಳೇನು:

ಇದು 2026ರ ಫೆಬ್ರವರಿಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ರೂ.90,000 ರಿಂದ ರೂ.1 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರುವ ಸಾಧ್ಯತೆಯಿದೆ. ಬಹುಮುಖ್ಯವಾಗಿ ಈ ಸ್ಕೂಟರ್‌ನ ವಿನ್ಯಾಸ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತ ಎಲ್ಲ ವಿವರಗಳು ಸಹ ಹೊರಬಿದ್ದಿವೆ.

ನೂತನ 'ಟಿವಿಎಸ್ ಜೂಪಿಟರ್ ಸಿಎನ್‌ಜಿ' ಸ್ಕೂಟರ್ ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲೈಟ್‌, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಎಲ್ಇಡಿ ಟೈಲ್ ಲ್ಯಾಂಪ್‌ನ್ನು ಪಡೆದಿದೆ. 124.8 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್/ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 226 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮೊಬೈಲ್ ಚಾರ್ಜಿಂಗ್ ಪೋರ್ಟ್ ಹಾಗೂ ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.

ಬಜಾಜ್ ಫ್ರೀಡಂ 125 (Bajaj Freedom 125) ಸಿಎನ್‌ಜಿ ಬೈಕ್ ಸಹ ಖರೀದಿಗೆ ಲಭ್ಯ:

ಇದು ರೂ.90,976 ರಿಂದ ರೂ.1.11 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 124.58 ಸಿಸಿ ಸಿಂಗಲ್-ಸಿಲಿಂಡರ್ ಪೆಟ್ರೋಲ್/ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 330 ಕಿಲೋಮೀಟರ್ ಮೈಲೇಜ್ ನೀಡುತ್ತದೆ. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ರೇಸಿಂಗ್ ರೆಡ್, ಸೈಬರ್ ವೈಟ್, ಎಬೊನಿ ಬ್ಲ್ಯಾಕ್ ಹಾಗೂ ಕೆರಿಬಿಯನ್ ಬ್ಲೂ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಡಿಸ್‌ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡಿಸ್ಕ್/ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

More from DriveSpark

Article Published On: Thursday, October 30, 2025, 16:05 [IST]
English summary
Suzuki access 125 cng unveiled expected price and mileage details
Read more on suzuki motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+