1 ಲೀ. ಪೆಟ್ರೋಲ್‌ಗೆ 45 Km ಮೈಲೇಜ್.. 87,000 ರೂಪಾಯಿ, ಇದೇ ನಂ.3 ಸುಜುಕಿ ಆಕ್ಸೆಸ್ 125ಗೆ ಫುಲ್ ಡಿಮ್ಯಾಂಡ್!
ಸುಜುಕಿ ಆಕ್ಸೆಸ್ 125 (Suzuki Access 125) ನಂಬಿಕಾರ್ಹ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಇದು ಹೆಚ್ಚು ಆಕರ್ಷಕವಾಗಿದ್ದು, ಬಜೆಟ್ ಬೆಲೆಯಲ್ಲಿಯೂ ಸಿಗುತ್ತದೆ. ಗ್ರಾಹಕರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಸದ್ಯ ಜೂನ್ ತಿಂಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಸ್ಕೂಟರ್‌ಗಳ ಪಟ್ಟಿ ಪ್ರಕಟಗೊಂಡಿದ್ದು, ಇದೇ 'ಆಕ್ಸೆಸ್ 125' ಮೂರನೇ ಸ್ಥಾನದಲ್ಲಿದೆ. ಒಟ್ಟು 51,555 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 52,192 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಮಾರಾಟ ಪ್ರಮಾಣವು ಕೊಂಚ ಮಟ್ಟಿಗೆ ಅಂದರೆ, ಶೇಕಡ -1.22% ಪ್ರಗತಿಯಾಗಿದೆ.
ಮೊದಲ ಸ್ಥಾನದಲ್ಲಿ (Honda Activa) ಇದ್ದು, ಬರೋಬ್ಬರಿ 1,83,265 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಆದರೂ ಮಾರಾಟ ಸಂಖ್ಯೆಯು ಶೇಕಡ 21.47% ಕುಸಿತವಾಗಿದೆ. ಟಿವಿಎಸ್ ಜೂಪಿಟರ್ (TVS Jupiter) ಎರಡನೇ ಸ್ಥಾನದಲ್ಲಿದೆ. ಸರಿ ಸುಮಾರು 1,07,980 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ಶೇಕಡ 49.76% ಪ್ರಗತಿಯಾಗಿದೆ.

ಆಕ್ಸೆಸ್ ಸ್ಕೂಟರ್ ಮಾರಾಟವು ತಿಂಗಳಿನಿಂದ ತಿಂಗಳಿಗೆ ಉತ್ತಮವಾಗಿರಲು ಹತ್ತಾರು ಕಾರಣಗಳಿವೆ. ಇದು ತುಂಬಾ ಅಚ್ಚುಕಟ್ಟಾಗಿದ್ದು, ಮಧ್ಯಮ ವರ್ಗದ ಗ್ರಾಹಕರಿಗೆ ಹೇಳಿ ಮಾಡಿಸಿದ ರೀತಿಯಲ್ಲಿದ್ದು, ಅಗ್ಗದ ದರದಲ್ಲೂ ಸಿಗುತ್ತದೆ. ಜೊತೆಗೆ ದಿನಬಳಕೆಗೂ ಹೆಚ್ಚು ಸೂಕ್ತವಾಗಿದ್ದು, ಪುರುಷರು ಹಾಗೂ ಮಹಿಳೆಯರು ಸುಲಭವಾಗಿ ಓಡಿಸಬಹುದು. ಹೀಗಾಗಿ, ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ ವಿಶ್ಲೇಷಣೆ ಮಾಡಲಾಗುತ್ತಿದೆ.
ಸುಜುಕಿ ಆಕ್ಸೆಸ್ 125 ವಿಶೇಷತೆಗಳೇನು:
ಇದು ವಿಶ್ವಾಸಾರ್ಹ ಸ್ಕೂಟರ್ ಆಗಿದ್ದು, ರೂ.87,000 ರಿಂದ ರೂ.98,000 (ಎಕ್ಸ್-ಶೋರೂಂ - ನವದೆಹಲಿ) ಬೆಲೆಯನ್ನು ಖರೀದಿದಾರರಿಗೆ ಲಭ್ಯವಾಗಲಿದೆ. ಸ್ಟ್ಯಾಂಡರ್ಡ್ ಎಡಿಷನ್, ಸ್ಪೆಷಲ್ ಎಡಿಷನ್-ಡಿಸ್ಕ್ ಬ್ರೇಕ್, ರೈಡ್-ಕನೆಕ್ಟ್ ಎಡಿಷನ್ ಮತ್ತು ರೈಡ್-ಕನೆಕ್ಟ್ ಟಿಎಫ್‌ಟಿ ಎಡಿಷನ್ ಎಂಬ ರೂಪಾಂತರಗಳನ್ನು (ವೇರಿಯೆಂಟ್ಸ್) ಹೊಂದಿದೆ.

ಈ ಸ್ಕೂಟರ್ ಅತ್ಯುತ್ತಮವಾದ ವಿನ್ಯಾಸವನ್ನು ಪಡೆದಿದೆ. ಎಲ್ಇಡಿ ಹೆಡ್‌ಲೈಟ್ & ಎಲ್ಇಡಿ ಟೈಲ್ ಲ್ಯಾಂಪ್‌ನ್ನು ಹೊಂದಿದೆ. ಪರ್ಲ್ ಶೈನಿ ಬೀಜ್, ಮೆಟಾಲಿಕ್ ಮ್ಯಾಟ್ ಸ್ಟೆಲ್ಲರ್ ಬ್ಲೂ, ಪರ್ಲ್ ಗ್ರೇಸ್ ವೈಟ್, ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್ ಮತ್ತು ಸಾಲಿಡ್ ಐಸ್ ಗ್ರೀನ್ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 1,835 ಎಂಎಂ ಉದ್ದ, 690 ಎಂಎಂ ಅಗಲ ಮತ್ತು 1,155 ಎಂಎಂ ಎತ್ತರವು ಇದೆ. ಜೊತೆಗೆ 160 ಎಂಎಂ ಗ್ರೌಂಡ್ ಕ್ಲಿಯರೆನ್ ಹಾಗೂ 1,260 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.
ನೂತನ ಆಕ್ಸೆಸ್ ಸ್ಕೂಟರ್, 125 ಸಿಸಿ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ತನ್ನದಾಗಿಸಿಕೊಂಡಿದೆ. 6500 ಆರ್‌ಪಿಎಂನಲ್ಲಿ 8.3 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 5000 ಆರ್‌ಪಿಎಂನಲ್ಲಿ 10.2 ಎನ್ಎಂ (ನ್ಯೂಟನ್ ಮೀಟರ್) ಉತ್ಪಾದಿಸುತ್ತದೆ. 45 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ.
ಇದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ & ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಸೀಟ್ ಎತ್ತರ 773 ಎಂಎಂ ಇದ್ದು, ಸರಿ ಸುಮಾರು 106 ಕೆಜಿ ತೂಕವು ಇದೆ.
ಈ ಸ್ಕೂಟರ್ ಮುಂದೆ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂದೆ (ರೇರ್) ಸಿಂಗಲ್-ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ. ಇದೇ ಸುಜುಕಿ ಆಕ್ಸೆಸ್ 125ಗೆ ಹೋಂಡಾ ಆಕ್ಟಿವಾ 125 ಹಾಗೂ ಟಿವಿಎಸ್ ಜೂಪಿಟರ್ 125 ಸ್ಕೂಟರ್‌ಗಳು ಪ್ರಬಲವಾದ ಎದುರಾಳಿಯಾಗಿವೆ.


Click it and Unblock the Notifications








