Suzuki e-Access: ಎಲೆಕ್ಟ್ರಿಕ್ ಆಕ್ಸಿಸ್ ಉತ್ಪಾದನೆ ಆರಂಭ: ಆಕ್ಟೀವಾಗೆ ನಡುಕ ಶುರು... ಶೀಘ್ರ ಬಿಡುಗಡೆ!

ಭಾರತದಲ್ಲಿ ಇಂಧನ ಬೆಲೆಗಳ ಏರಿಕೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಹಕರ ಬೇಡಿಕೆಯನ್ನು ಅರಿತು ಇತ್ತೀಚೆಗೆ ಹೋಂಡಾ ಕಂಪನಿ ತನ್ನ ಜನಪ್ರಿಯ ಆಕ್ಟೀವಾವನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆ ಮಾಡಿದೆ. ಇದೀಗ ಸುಜುಕಿ ಕೂಡ ತನ್ನ ಜನಪ್ರಿಯ ಮಾದರಿಯಾದ ಆಕ್ಸಿಸ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ (Suzuki e-Access) ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ವರದದಿಗಳ ಪ್ರಕಾರ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಇ-ಆಕ್ಸೆಸ್ ಉತ್ಪಾದನೆಯನ್ನು ಪ್ರಾರಂಭಿಸಿದೆ. ಈ ಮಾದರಿಯು ಕಂಪನಿಯ ಗುರಗಾಂವ್ ಉತ್ಪಾದನಾ ಸೌಲಭ್ಯದಿಂದ ಹೊರಬರಲು ಪ್ರಾರಂಭಿಸಿದೆ ಎಂದು ವರದಿಗಳು ಸೂಚಿಸಿವೆ.

ಈ ಎಲೆಕ್ಟ್ರಿಕ್ ಆಕ್ಸಿಸ್ ಸ್ಕೂಟರ್ ಅನ್ನು ಇದೇ ವರ್ಷದ ಆರಂಭದಲ್ಲಿ ನಡೆದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು. ಆಗ ಬಿಡುಗಡೆಯ ಬಗ್ಗೆ ನಿಖರ ಮಾಹಿತಿ ನೀಡಿರಲಿಲ್ಲ, ಆದರೆ ಇದೇ ವರ್ಷದಲ್ಲಿ ಮಾರುಕಟ್ಟೆಗೆ ಪರಿಚಯಿಸುವ ಸುಳಿವನ್ನು ಕಂಪನಿ ನೀಡಿತ್ತು. ಇವಿಗಳಿಗೆ ಬೇಡಿಕೆ ವ್ಯಕ್ತವಾಗುತ್ತಿರುವ ಕಾರಣ ಶೀಘ್ರದಲ್ಲೇ ಸುಜುಕಿ ಈ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ.

suzuki-e-access-production-starts-expected-price-features-range

ಸ್ಕೂಟರ್ ವಿಶೇಷತೆಗಳು: ಹೊಸ ಆಕ್ಸಿಸ್ ಎಲೆಕ್ಟ್ರಿಕ್ ಸ್ಕೂಟರ್ 3.07 ಕಿಲೋವ್ಯಾಟ್ ಎಲ್ಎಫ್‌ಪಿ ಬ್ಯಾಟರಿ ಹಾಗೂ 4.1 ಕಿಲೋವ್ಯಾಟ್ ಎಲೆಕ್ಟ್ರಿಕ್ ಮೋಟರ್ ಜೊತೆಗೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಈ ಸ್ಕೂಟರ್ ಅನ್ನು ಪೂರ್ಣ ಚಾರ್ಜ್ ಮಾಡಲು ಪೋರ್ಟಬಲ್ ಚಾರ್ಜರ್ ಹಾಗೂ ಡಿಸಿ ಫಾಸ್ಟ್ ಚಾರ್ಜರ್ ಎಂಬ ಎರಡು ರೀತಿಯ ಚಾರ್ಜಿಂಗ್ ಆಯ್ಕೆಗಳನ್ನು ನೀಡಲಾಗುವುದು.

ಅದರಲ್ಲಿ ಪೋರ್ಟಬಲ್ ಚಾರ್ಜರ್ ಮೂಲಕ ಸಂಪೂರ್ಣ ಚಾರ್ಜ್ ಆಗಲು ಸುಮಾರು 6 ಗಂಟೆ 42 ನಿಮಿಷ ತೆಗೆದುಕೊಳ್ಳುತ್ತದೆ. ಹಾಗೆಯೇ ಆ ಸಮಯವನ್ನು ಗಮನಾರ್ಹವಾಗಿ ಕಡಿತಗೊಳಿಸುವ ಡಿಸಿ ಫಾಸ್ಟ್ ಚಾರ್ಜರ್ ಮೂಲಕ ಸಂಪೂರ್ಣ ಚಾರ್ಜ್ ಮಾಡಲು ಕೇವಲ 2 ಗಂಟೆ 12 ನಿಮಿಷಗಳು ತೆಗೆದುಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ. ಒಂದು ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 95 ಕಿ.ಮೀ ಚಲಿಸು ಸಾಮರ್ಥ್ಯವನ್ನು ಹೊಂದಿರಲಿದೆ.

suzuki-e-access-production-starts-expected-price-features-range

ಇನ್ನು ಈ ಪವರ್‌ಫುಲ್ ಎಲೆಕ್ಟ್ರಿಕ್ ಆಕ್ಸಿಸ್ ಸ್ಕೂಟರ್‌ನ ಮೋಟಾರ್ ಬಗ್ಗೆ ಹೇಳುವುದಾದ್ರೆ, ಇದರಲ್ಲಿನ ಮೋಟಾರ್ 5.5 ಬಿಹೆಚ್ ಪವರ್ ಮತ್ತು 15 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇಕೋ, ರೈಡ್ ಎ, ರೈಡ್ ಬಿ ಮತ್ತು ರಿವರ್ಸ್ ಮೋಡ್ನಂತಹ ನಾಲ್ಕು ರೈಡಿಂಗ್ ಮೋಡ್‌ಗಳು ಇರಲಿವೆ. ಇದರ ಜೊತೆಗೆ ಪುನರುತ್ಪಾದಕ ಬ್ರೇಕಿಂಗ್ (ರೀಜೆನ್ ಬ್ರೇಕಿಂಗ್) ಮತ್ತು ಸಂಯೋಜಿತ ಬ್ರೇಕಿಂಗ್ (ಕಂಬೈನ್ಡ್ ಬ್ರೇಕಿಂಗ್) ಸಿಸ್ಟಮ್ ನೀಡಲಾಗಿದೆ.

ಫೀಚರ್ಸ್ ಬಗ್ಗೆ ಹೇಳುವುದಾದ್ರೆ, ಇದು ಕೀಲೆಸ್ ಇಗ್ನಿಷನ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಸ್ಮಾರ್ಟ್‌ಫೋನ್ ಸಂಪರ್ಕವನ್ನು ಬೆಂಬಲಿಸುವ 4.2-ಇಂಚಿನ ಸಂಪೂರ್ಣ ಡಿಜಿಟಲ್ ಡಿಸ್ಪ್ಲೇಯನ್ನು ಹೊಂದಿದೆ. ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅಳವಡಿಸಲಾಗಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ ಸೆಟಪ್ ನೀಡಲಾಗಿದೆ.

ವಿನ್ಯಾಸದ ವಿಷಯದಲ್ಲಿ, ಇಂಧನ ಚಾಲಿತ ಸುಜುಕಿ ಆಕ್ಸಿಸ್‌ಗಿಂತ ಭಿನ್ನವಾದ ಡಿಸೈನ್ ಅನ್ನು ಪಡೆದುಕೊಂಡಿದೆ. ಇದು ತೀಕ್ಷ್ಣವಾದ ಮುಂಭಾಗದ ಏಪ್ರನ್ ಅನ್ನು ಪಡೆದಿದೆ, ಇದು ಆಕ್ರಮಣಕಾರಿ ನೋಟವನ್ನು ನೀಡುತ್ತದೆ. ಆಯತಾಕಾರದ ಎಲ್ಇಡಿ ಹೆಡ್ ಲ್ಯಾಂಪ್, ಲಂಬವಾದ ಎಲ್ಇಡಿ ಡಿಆರ್ಎಲ್ ಸ್ಟ್ರಿಪ್ ನೀಡುವ ಮೂಲಕ ಸಂಪೂರ್ಣ ಹೊಸ ಲುಕ್‌ ನೀಡಲಾಗಿದೆ.

ಬೆಲೆ ನಿರೀಕ್ಷೆ: ಅಧಿಕೃತ ಬೆಲೆ ಇನ್ನೂ ಘೋಷಿಸಿಲ್ಲವಾದರೂ, ಮುಂಬರಲಿರುವ ಎಲೆಕ್ಟ್ರಿಕ್ ಆಕ್ಸೆಸ್ ಅನ್ನು 95,000 ದಿಂದ 1.10 ಲಕ್ಷ ರೂ.ಗಳ ಎಕ್ಸ್ ಶೋರೂಂ ನಡುವೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಗಾತ್ರಕ್ಕೆ ಸಂಬಂಧಿಸಿದಂತೆ, ಇ-ಆಕ್ಸೆಸ್ 1860 ಎಂಎಂ ಉದ್ದ, 715 ಎಂಎಂ ಅಗಲ ಮತ್ತು 1135 ಎಂಎಂ ಎತ್ತರ, 1305 ಎಂಎಂ ವ್ಹೀಲ್ ಬೇಸ್ ಮತ್ತು 765 ಎಂಎಂ ಸೀಟ್ ಎತ್ತರವನ್ನು ಹೊಂದಿದೆ.

More from DriveSpark

Article Published On: Monday, May 26, 2025, 15:49 [IST]
English summary
Suzuki e access production starts expected price features range
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+