Suzuki e-Access: ಬಿಡುಗಡೆ ಮುನ್ನವೆ ಎಲೆಕ್ಟ್ರಿಕ್ ಆಕ್ಸಿಸ್ ನಮ್ಮ ಕೈಯಲ್ಲಿ: ಕನ್ನಡ ರಿವ್ಯೂ ವಿಡಿಯೋ...
ಭಾರತದಲ್ಲಿ ಈಗಾಗಲೇ ಬಹುತೇಕ ಎಲ್ಲಾ ಜನಪ್ರಿಯ ದ್ವಿಚಕ್ರ ವಾಹನ ಬ್ರಾಂಡ್‌ಗಳು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿವೆ. ಇತ್ತೀಚೆಗೆ ಹೋಂಡಾ ಕೂಡ ತನ್ನ ಆಕ್ಟೀವಾ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಆದರೆ ಸುಜುಕಿ ಮಾತ್ರ ಈವೆರೆಗೆ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಿಲ್ಲ. ಇದೀಗ ತನ್ನ ಜನಪ್ರಿಯ ಆಕ್ಸಿಸ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೆ ವರ್ಷದ ಆರಂಭದಲ್ಲಿ ನಡೆದ ಆಟೋ ಎಕ್ಸ್‌ಪೋ 2025 ರಲ್ಲಿ ಎಲೆಕ್ಟ್ರಿಕ್ ಆಕ್ಸಿಸ್ ಅನ್ನು ಬಹಿರಂಗಪಡಿಸಿತ್ತು. ಇನ್ನೇನು ಬಿಡುಗಡೆಗೆ ಸಜ್ಜಾಗಿರುವ ಸಮಯದಲ್ಲಿ ಆಕ್ಸಿಸ್ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಮಾಡಲು ನಮನ್ನು ಆಹ್ವಾನಿಸಿದೆ.
ಈ ಆಕರ್ಷಕ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಓಡಿಸಿ ರಿವ್ಯೂ ನೀಡಲು ಕಂಪನಿ ನಮ್ಮನ್ನು ಆಹ್ವಾನಿಸಿದಾಗ, ಟ್ರಾಕ್‌ನಲ್ಲಿ ಸಂಪೂರ್ಣವಾಗಿ ಇದನ್ನು ಓಡಿಸಿದ್ದೇವೆ. ಬೆಂಗಳೂರಿನಲ್ಲಿ ಕೆಲವು ಗಂಟೆಗಳ ಕಾಲ ಸುಜುಕಿ ಇ - ಆಕ್ಸಿಸ್ (Suzuki e-Access) ಅನ್ನು ಪರೀಕ್ಷಿಸಿದ ಬಳಿಕ ನಮ್ಮ ಅಭಿಪ್ರಾಯಗಳನ್ನು ಈ ಕೆಳಗಿನ ವಿಡಿಯೋದಲ್ಲಿ ವಿವರಿಸಿದ್ದೇವೆ.
ಸುಜುಕಿ ಇ-ಆಕ್ಸೆಸ್ 3.07kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 95 ಕಿ.ಮೀ IDC ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಬ್ಯಾಟರಿ ಪ್ಯಾಕ್ ಸ್ವಿಂಗರ್ಮ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್‌ಗೆ ಪವರ್ ನೀಡುತ್ತದೆ. ಇದು ಬೆಲ್ಟ್-ಡ್ರೈವ್ ಸೆಟಪ್ ಹೊಂದಿದ್ದು, 5.49bh ಪವರ್ ಮತ್ತು 15Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ.
ಪೋರ್ಟಬಲ್ AC ಚಾರ್ಜರ್ ಬಳಸಿ ಬ್ಯಾಟರಿ ಪ್ಯಾಕ್ ಅನ್ನು ಶೇ80 ಚಾರ್ಜ್ ಮಾಡಲು 4 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಪೂರ್ಣ ಚಾರ್ಜ್ ಆಗಲು ಸುಮಾರು 6 ಗಂಟೆ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇ-ಆಕ್ಸೆಸ್ ವೇಗದ DC ಚಾರ್ಜಿಂಗ್ ಅನ್ನು ಸಹ ಸಫೋರ್ಟ್ ಮಾಡುತ್ತದೆ, ಇದು ಶೇ80 ರಷ್ಟು ಚಾರ್ಜ್ ಆಗಲು ಕೇವಲ 72 ನಿಮಿಷ ತೆಗೆದುಕೊಳ್ಳುತ್ತದೆ. ಪೂರ್ಣ ಚಾರ್ಜ್ ಮಾಡಲು 2 ಗಂಟೆ 12 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಸುಜುಕಿ ಇ-ಆಕ್ಸೆಸ್ ಇಕೋ, ರೈಡ್ ಮೋಡ್ ಎ ಮತ್ತು ರೈಡ್ ಮೋಡ್ ಬಿ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಇಕೋ ಮೋಡ್‌ನಲ್ಲಿ ಗಂಟೆಗೆ 55 ಕಿಮೀ ಗರಿಷ್ಠ ವೇಗ, ರೈಡ್ ಮೋಡ್ ಎ-ನಲ್ಲಿ ಗಂಟೆಗೆ 71 ಕಿ.ಮೀ ಗರಿಷ್ಠ ವೇಗವನ್ನು ತಲುಪಬಲ್ಲದು. 2 ಕಿ.ಮೀ ರೀಜೆನ್ ಬ್ರೇಕಿಂಗ್ ಸೆಟ್ಟಿಂಗ್ ಹೊಂದಿದ್ದು, ಇದು ತ್ವರಿತವಾಗಿ ನಿಲ್ಲಿಸಲು ಅನುವು ಮಾಡಿಕೊಡುತ್ತದೆ.
ಸುಜುಕಿ ಇ-ಆಕ್ಸೆಸ್ 4.2-ಇಂಚಿನ ಫುಲ್ಲಿ ಕಲರ್ಡ್ TFT ಡಿಸ್ಪ್ಲೇಯನ್ನು ಹೊಂದಿದೆ. ಬಹು-ಮಾಹಿತಿ ನೀಡುವ ಇನ್‌ಸ್ಟ್ರೂಮೆಂಟ್ ಪ್ಯಾನಲ್ ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್ ಸಂಪರ್ಕವನ್ನು ಸಹ ಸಪೋರ್ಟ್ ಮಾಡುತ್ತದೆ. ಇದು ಡೇ ಅಂಡ್ ನೈಟ್ ಮೋಡ್‌ಗಳನ್ನು ಒಳಗೊಂಡಿದ್ದು, ಇದನ್ನು ಸುತ್ತುವರಿದ ಬೆಳಕಿನ ಸೆನ್ಸಾರ್ ಆಟೋಮ್ಯಾಟಿಕ್ ಆಗಿ ಬದಲಾಗುತ್ತದೆ.

ರೈಡ್ ಮೋಡ್, ಬ್ಯಾಟರಿ ಇಂಡಿಕೇಷನ್, ಸ್ಪೀಡ್ ಸೇರಿದಂತೆ ಇನ್ನೂ ಹೆಚ್ಚಿನವುಗಳಿಂದ ಎಲ್ಲಾ ವಿವರಗಳು TFT ಡಿಸ್ಪ್ಲೇನಲ್ಲಿ ಸಾಕಷ್ಟು ಸ್ಮಾರ್ಟ್ ಆಗಿ ಕಾಣುತ್ತವೆ. ಇದು ಸವಾರರು ಸುಜುಕಿ ಕನೆಕ್ಟ್ ಅಪ್ಲಿಕೇಶನ್‌ಗೆ ಇ-ಆಕ್ಸೆಸ್ ಅನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಸುಜುಕಿ ಕನೆಕ್ಟ್ ಅಪ್ಲಿಕೇಶನ್ ಪಾರ್ಕಿಂಗ್ ಸ್ಥಳದಲ್ಲಿ ನಿಮ್ಮ ಇ-ಆಕ್ಸೆಸ್ ಅನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.
ವಾಹನ ಡೇಟಾ, ಸೇವಾ ಎಚ್ಚರಿಕೆಗಳು ಮತ್ತು ನಿಮ್ಮ ಚಾಲನಾ ಪರವಾನಗಿಯ ಡಿಜಿಟಲ್ ಪ್ರತಿಯನ್ನು ಮತ್ತು ಇತರ ಮೂರು ಐಡಿಗಳನ್ನು ಸಂಗ್ರಹಿಸಬಹುದಾದ ಡಿಜಿಟಲ್ ವ್ಯಾಲೆಟ್‌ನಂತಹ ಇತರ ಹಲವಾರು ಕಾರ್ಯಗಳನ್ನು ಹೊಂದಿದೆ. ಸ್ಮಾರ್ಟ್‌ಫೋನ್ ನೋಟಿಫಿಕೇಷನ್, ರಿಯಲ್-ಟೈಮ್ ಮತ್ತು ಹವಾಮಾನ ಮಾಹಿತಿ, ಡಿಸ್ಪ್ಲೇ ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪಾಪ್ ಅಪ್ ಆಗಲು ಬದಲಾವಣೆಗಳಿಗೆ ಎಚ್ಚರಿಕೆಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications