Auto Expo 2025: ಓಲಾ, ಎಥರ್‌ಗೆ ನಡುಕ ಶುರು: ಸುಜುಕಿ ಆಕ್ಸಿಸ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ!

Auto Expo 2025: ಸುಜುಕಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2025 ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ (Bharat Mobility Global Expo 2025) ದಲ್ಲಿ ಇಂದು ಅನಾವರಣಗೊಳಿಸಲಾಗಿದೆ. ಇದು ಕಂಪನಿಯ ಇಂಧನ ಚಾಲಿತ ಮಾದರಿಯಾದ 'ಆಕ್ಸೆಸ್' ಅವೃತ್ತಿಯಾಗಿದ್ದು, ಎಲೆಕ್ಟ್ರಿಕ್ ಅವತಾರದಲ್ಲಿಯೂ ಪರಿಚಯಿಸಲಾಗಿದೆ. ಈ ಸ್ಕೂಟರ್ ಪೆಟ್ರೋಲ್ ಚಾಲಿತ ಆವೃತ್ತಿಯ ಅದೇ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿದೆ. ಹೊಸ ಸುಜುಕಿ ಇ-ಆಕ್ಸೆಸ್ (Suzuki e-Access) ಸ್ಥಿರ ಬ್ಯಾಟರಿಯನ್ನು ಹೊಂದಿದ್ದು, ತೆಗೆದುಹಾಕಬಹುದಾದ ಬ್ಯಾಟರಿಗಳಿಗಿಂತ ಭಿನ್ನವಾಗಿ ಸ್ಕೂಟರ್ ಹೆಚ್ಚು ಅಂಡರ್‌ ಸೀಟ್ ಸ್ಟೋರೇಜ್ ಪಡೆದಿದೆ.

ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಪೂರ್ಣ ಚಾರ್ಜ್ ನಲ್ಲಿ 95 ಕಿ.ಮೀ ರೇಂಜ್ ನೀಡಲಿದೆ. ಟಾಪ್ ಸ್ಪೀಡ್ ಗಂಟೆಗೆ 80 ಕಿ.ಮೀ ಇದ್ದು, ಸ್ಕೂಟರ್ 2025 ರ ಮಧ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಟಿವಿಎಸ್ ಐಕ್ಯೂಬ್, ಬಜಾಜ್ ಚೇತಕ್, ಎಥರ್ ರಿಜ್ಟಾ, ಓಲಾ ಎಸ್1 ಏರ್ ಸೇರಿದಂತೆ ಮುಂಬರುವ ಹೋಂಡಾ ಆಕ್ಟಿವಾ ಇ: ಮತ್ತು ವಿಡಾ ವಿ2 ಸ್ಕೂಟರ್‌ಗಳಿಗೆ ಹೊಸ ಅಕ್ಸೆಸ್ ಇವಿ ಪೈಪೋಟಿ ನೀಡಲಿದೆ.

suzuki-e-access-unveiled-at-bharat-mobility-global-expo-2025

ಫೀಚರ್ಸ್ ವಿಷಯಕ್ಕೆ ಬಂದರೆ, ಸುಜುಕಿ ಇ-ಆಕ್ಸೆಸ್ ದೊಡ್ಡ ಅಂಡರ್ ಸೀಟ್ ಸ್ಟೋರೇಜ್, ಆಯತಾಕಾರದ ಎಲ್ಇಡಿ ಹೆಡ್ ಲೈಟ್, ಡಿಆರ್‌ಎಲ್‌ಗಳು ಮತ್ತು ಟರ್ನ್-ಇಂಡಿಕೇಟರ್ ಗಳೊಂದಿಗೆ ಸ್ಟೈಲಿಷ್ ಆಗಿ ಕಾಣುತ್ತಿದೆ. ಹಾಗೆಯೇ ಟಿಎಫ್‌ಟಿ ಕನ್ಸೋಲ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಮತ್ತು ಕಾಲ್ / ಎಸ್ಎಂಎಸ್ ಎಚ್ಚರಿಕೆಯಂತ ಫೀಚರ್ಸ್ ಹೊಂದಿದೆ.

ಈ ಸ್ಕೂಟರ್ ಇಕೋ, ರೈಡ್ ಎ ಮತ್ತು ರೈಡ್ ಬಿ ಎಂಬ 3 ರೈಡಿಂಗ್ ಮೋಡ್‌ಗಳನ್ನು ಸಹ ಹೊಂದಿದೆ. ಅದೇ ರೀತಿ ಫಾಸ್ಟ್ ಚಾರ್ಜರ್‌ನೊಂದಿಗೆ ಶೇ80 ರಷ್ಟು ಚಾರ್ಜ್ ಆಗಲು 1 ಗಂಟೆ 12 ನಿಮಿಷ ತೆಗೆದುಕೊಳ್ಳುತ್ತದೆ. ಅದೇ ರೀತಿ ಫಾಸ್ಟ್ ಚಾರ್ಜರ್‌ನೊಂದಿಗೆ ಶೇ80 ರಷ್ಟು ಚಾರ್ಜ್ ಆಗಲು 1 ಗಂಟೆ 12 ನಿಮಿಷ ತೆಗೆದುಕೊಳ್ಳುತ್ತದೆ.

suzuki-e-access-unveiled-at-bharat-mobility-global-expo-2025

ಈ ಸ್ಕೂಟರ್‌ಗೆ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಟ್ವಿನ್ ರಿಯರ್ ಶಾಕ್ ಅಬ್ಸಾರ್ಬರ್ ಸಸ್ಪೆಂಷನ್ ಸೆಟಪ್ ನೀಡಲಾಗಿದೆ. ಇದರ ಬ್ಯಾಟರಿ ಸಾಮಾನ್ಯ ಚಾರ್ಜರ್‌ನಲ್ಲಿ ಶೇ80 ರಷ್ಟು ಚಾರ್ಜ್ ಆಗಲು 4 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತದೆ. ಈ ಸ್ಕೂಟರ್ 4.1 ಕಿಲೋವ್ಯಾಟ್ ಮೋಟರ್ ನೊಂದಿಗೆ 71 ಕಿ.ಮೀ ಟಾಪ್ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಇದು 3.07 ಕಿಲೋವ್ಯಾಟ್ ಸ್ಥಿರ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಸಿಂಗಲ್ ಚಾರ್ಜ್‌ನಲ್ಲಿ 95 ಕಿ.ಮೀ ರೇಂಜ್ ನೀಡಲಿದೆ. ಸುಜುಕಿ ಫಿಕ್ಸೆಡ್ ಬ್ಯಾಟರಿ ಪ್ಯಾಕ್ ಅನ್ನು ಆಯ್ಕೆ ಮಾಡಲು ನಿರ್ಧರಿಸಿದ್ದು, ಸ್ಕೂಟರ್ ನೀಡುವ ಅಂಡರ್ ಸೀಟ್ ಸ್ಟೋರೇಜ್ ಅನ್ನು ಹೆಚ್ಚಿಸಲು ಸ್ವಲ್ಪ ಸಹಾಯ ಮಾಡಿದೆ. ಈ ಸ್ಕೂಟರ್‌ಗೆ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಟ್ವಿನ್ ರಿಯರ್ ಶಾಕ್ ಅಬ್ಸಾರ್ಬರ್ ಸಸ್ಪೆಂಷನ್ ಸೆಟಪ್ ನೀಡಲಾಗಿದೆ.

suzuki-e-access-unveiled-at-bharat-mobility-global-expo-2025

ಒಟ್ಟಾರೆಯಾಗಿ, ಸುಜುಕಿ ಇ-ಆಕ್ಸೆಸ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿಸಲು ಸಹಾಯ ಮಾಡಲಿದೆ. ಸುಜುಕಿ ಈಗಾಗಲೇ ವಿಶ್ವಾಸಾರ್ಹ ಕಾರ್ಯಕ್ಷಮತೆ ಹೊಂದಿರುವ ಸ್ಕೂಟರ್‌ಗಳಿಗೆ ಖ್ಯಾತಿಯನ್ನು ಹೊಂದಿರುವುದರಿಂದ, ಎಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರಕ್ಕೆ ಪ್ರವೇಶಿಸುವ ಮೂಲಕ ಬ್ರಾಂಡ್ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯುವ ಸಾಧ್ಯತೆ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, January 17, 2025, 15:19 [IST]
English summary
Suzuki e access unveiled at bharat mobility global expo 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+