Suzuki: ಎಲ್ಲವು ಚೆನ್ನಾಗಿದೆ.. ಆದ್ರೂ ಸದ್ದಿಲ್ಲದೇ ಈ ಶಕ್ತಿಶಾಲಿ ಸುಜುಕಿ ಬೈಕ್‌ನ ಮಾರಾಟ ಸ್ಥಗಿತ, ಕಾರಣವೇನು?
ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India), ಜನಪ್ರಿಯ ಬೈಕ್ ಕಟಾನಾ (Katana) ಮಾರಾಟವನ್ನು ಸ್ಥಗಿತಗೊಳಿಸಿದೆ. ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಈ ಮೋಟಾರ್‌ಸೈಕಲ್‌ನ ಕುರಿತ ಎಲ್ಲ ವಿವರಗಳನ್ನು ತೆಗೆದು ಹಾಕಿದೆ. ಇದರೊಂದಿಗೆ ಡೀಲರ್‌ಶಿಪ್‌ಗಳು ಕೂಡ ಬುಕ್ಕಿಂಗ್ ತೆಗೆದುಕೊಳ್ಳುವುದನ್ನು ನಿಲ್ಲಿಸಿವೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಬನ್ನಿ, 'ಕಟಾನಾ' ಬೈಕ್ ಮಾರಾಟದಿಂದ ದೂರವಾಗಲು ಕಾರಣವೇನು.. ಏನೆಲ್ಲಾ ವಿಶೇಷತೆಗಳನ್ನು ಹೊಂದಿತ್ತು ಎಂಬುದರ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.
2022ರಲ್ಲಿ ದೇಶೀಯವಾಗಿ ಹೊಚ್ಚ ಹೊಸ ಸುಜುಕಿ ಕಟಾನಾ (Suzuki Katana) ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಆದರೆ, ಈ ಬೈಕ್‌ನ ಬೆಲೆ ಮಧ್ಯಮ ವರ್ಗದ ಜನರ ಕೈಗೆಟುಕುವಂತಿರಲಿಲ್ಲ. ಜೊತೆಗಿದರ ವಿನ್ಯಾಸವು ಅಷ್ಟಾಗಿ ಯುವ ಗ್ರಾಹಕರನ್ನು ಸೆಳೆಯಲಿಲ್ಲ. ಹೀಗಾಗಿ ಸಾಧಾರಣ ಸಂಖ್ಯೆಯಲ್ಲಿ ಮಾರಾಟವಾಗುತ್ತಿತ್ತು. ಇವೆಲ್ಲ ಕಾರಣಗಳಿಗೆ ಅಂತಿಮವಾಗಿ 'ಕಟಾನಾ' ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಸುಜುಕಿ ಕಟಾನಾ ವಿಶೇಷತೆಗಳೇನು:
ಈ ಬೈಕ್ ತುಂಬಾ ದುಬಾರಿ ಬೆಲೆಯನ್ನು ಹೊಂದಿತ್ತು. ರೂ.13.61 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿತ್ತು. ಸ್ಟ್ಯಾಂಡರ್ಡ್ ರೂಪಾಂತರದ (ವೇರಿಯೆಂಟ್) ಆಯ್ಕೆಯಲ್ಲಿ ಮಾತ್ರ ಲಭ್ಯವಿತ್ತು. ಬೆಂಗಳೂರು, ದೆಹಲಿ ಹಾಗೂ ಮುಂಬೈನಂತಹ ಮಹಾನಗರಗಳಲ್ಲಿ ಆನ್-ರೋಡ್ ಬೆಲೆಯೂ ರೂ.15.23 ಲಕ್ಷದಿಂದ ರೂ.16.84 ಲಕ್ಷ ಆಗುತ್ತಿತ್ತು.
ಇದು ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಸೆಳೆಯುವಂತಿತ್ತು. ಉತ್ತಮವಾದ ಎಲ್ಇಡಿ ಹೆಡ್‌ಲೈಟ್, ವಿಂಡ್‌ಸ್ಕ್ರೀನ್, 'ವಿ' ಆಕಾರಕ್ಕೆ ಹೋಲಿಕೆಯಾಗಬಲ್ಲ ಫ್ಯುಯೆಲ್ ಟ್ಯಾಂಕ್ ಹಾಗೂ ಚೆವ್ರಾನ್ ರೂಪದಲ್ಲಿರುವ ಎಲ್ಇಡಿ ಟೈಲ್‌ಲ್ಯಾಂಪ್‌ನ್ನು ಪಡೆದಿತ್ತು. ಮೆಟಾಲಿಕ್ ಮಿಸ್ಟಿಕ್ ಸಿಲ್ವರ್ ಹಾಗೂ ಪರ್ಲ್ ವಿಗರ್ ಬ್ಲೂ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತಿತ್ತು.
ಸುಜುಕಿ ಕಟಾನಾ ಮೋಟಾರ್‌ಸೈಕಲ್ 2,130 ಎಂಎಂ ಉದ್ದ, 820 ಎಂಎಂ ಅಗಲ ಹಾಗೂ 1,100 ಎಂಎಂ ಎತ್ತರವಿತ್ತು. 140 ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,460 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿತ್ತು. ಸರಿ ಸುಮಾರು 217 ಕೆಜಿ ತೂಕವು ಇತ್ತು.
ಈ ಬೈಕ್ ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಪಡೆದಿತ್ತು. 999 ಸಿಸಿ 4-ಸ್ಟ್ರೋಕ್ ಲಿಕ್ವಿಡ್-ಕೋಲ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿತ್ತು. 11,000 ಆರ್‌ಪಿಎಂನಲ್ಲಿ 152.27 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 9,250 ಆರ್‌ಪಿಎಂನಲ್ಲಿ 106 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತಿತ್ತು. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿತ್ತು.
ಇದರ ಇಂಧನ ದಕ್ಷತೆಯೂ ಉತ್ತಮವಾಗಿತ್ತು. 12 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿತ್ತು. 23 ಕಿ.ಮೀ ವರೆಗೆ ಮೈಲೇಜ್ ನೀಡುತಿತ್ತು. 240 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿತ್ತು. ಕೇವಲ 3 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯುತಿತ್ತು.
ಸುಜುಕಿ ಕಟಾನಾ ಮೋಟಾರ್‌ಸೈಕಲ್ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ರೈಡ್-ಬೈ-ವೈರ್ ಎಲೆಕ್ಟ್ರಾನಿಕ್ ಥ್ರೊಟಲ್ ಸಿಸ್ಟಮ್, ಎಂಜಿನ್ ಕಿಲ್ ಸ್ವಿಚ್ ಹಾಗೂ ನ್ಯಾವಿಗೇಷನ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿತ್ತು. ಮೋಡ್ ಎ (ಸ್ಪೋರ್ಟ್), ಮೋಡ್ ಬಿ (ಸ್ಟ್ರೀಟ್) ಮತ್ತು ಮೋಡ್ ಸಿ (ಕಂಫರ್ಟ್/ಸಿಟಿ) ಎಂಬ ಮೂರುಮೋಡ್‌ಗಳನ್ನು ಒಳಗೊಂಡಿತ್ತು. 17-ಇಂಚಿನ ಅಲಾಯ್ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿತ್ತು.
ಈ ಬೈಕ್ ಸುರಕ್ಷತೆಗೂ ಹೆಸರುವಾಸಿಯಾಗಿತ್ತು. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಕಾಯಿಲ್ ಸ್ಪ್ರಿಂಗ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿತ್ತು. ಇದರೊಂದಿಗೆ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಡುಯಲ್ ಚಾನೆಲ್ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡುಯಲ್ ಡಿಸ್ಕ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿತ್ತು. ಇದಕ್ಕೆ ಡುಕಾಟಿ ಮಾನ್ಸ್ಟರ್, ಹೋಂಡಾ ಸಿಬಿ1000, ಕವಾಸಕಿ ನಿಂಜಾ 1100ಎಸ್ಎಕ್ಸ್ & ಎಪ್ರಿಲಿಯಾ ಆರ್‌ಎಸ್ 66 ಮೋಟಾರ್‌ಸೈಕಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿದ್ದವು.


Click it and Unblock the Notifications








