ಮೊನ್ನೆಯಷ್ಟೆ ಬಿಡುಗಡೆಯಾಗಿ ಮಿಂಚುತ್ತಿರುವ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ ವಿಶೇಷತೆಗಳು!
ಭಾರತದಲ್ಲಿ ಇತ್ತೀಚೆಗೆ ಅಡ್ವೆಂಚರ್ ಬೈಕ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಯುವಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇದರಲ್ಲಿ ಹೀರೋ ಎಕ್ಸ್‌ಪಲ್ಸ್, ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ನಂತಹ ಮೋಟಾರ್‌ಸೈಕಲ್‌ಗಳು ಉತ್ತಮ ಬೇಡಿಕೆಯನ್ನು ಪಡೆದುಕೊಂಡಿವೆ. ಇದೇ ಸಾಲಿನಲ್ಲಿ ಕಡಿಮೆ ಬೆಲೆಗೆ ಬೆಸ್ಟ್ ಫೀಚರ್ಸ್ ಹಾಗೂ ಉತ್ತಮ ಪರ್ಫಾಮೆನ್ಸ್ ನೀಡುವ ಮೋಟಾರ್‌ಸೈಕಲ್ ಇದೆ. ಅದೇ ಸುಜುಕಿ ವಿ-ಸ್ಟೋರ್ಮ್, ಈ ಬೈಕ್‌ನ 2024 ರ ಮಾಡಲ್‌ಗೆ ಇದೀಗ ನವೀಕರಣ ತರಲಾಗಿದ್ದು, 2025ರ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ (2025 Suzuki V-Strom SX) ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.
ಸದ್ಯ 2025ರ ಸುಜುಕಿ ವಿ - ಸ್ಟ್ರೋಮ್ ಎಸ್ಎಕ್ಸ್ ಬೈಕ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 2.16 ಲಕ್ಷಗಳಾಗಿದೆ. ಹಳೆಯ ಮಾದರಿಗಿಂತ ತುಸು ಬೆಲೆ ಹೆಚ್ಚಾಗಿದ್ದು, ಹೊಸ ನವೀಕರಣಗಳೊಂದಿಗೆ ಅಪ್‌ಡೇಟ್ ಆಗಿರುವುದು ಹಾಗೂ ಡಿಸೈನ್‌ನಲ್ಲಿ ಹೊಸ ಬದಲಾವಣೆಗಳು ತಂದಿರುವ ಕಾರಣ ಬೆಲೆ ಹಚ್ಚಿಸಲಾಗಿದೆ. ಸದ್ಯ 2025ರ ವಿ-ಸ್ಟ್ರೋಮ್ ಎಸ್ಎಕ್ಸ್ ಬೈಕಿನ ಬುಕಿಂಗ್ ಪ್ರಾರಂಭವಾಗಿದ್ದು, ಶೀಘ್ರದಲ್ಲೇ ವಿತರಣೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ.

ಸುಜುಕಿ ಕಂಪನಿಯು ಈ ಬೈಕ್ ಅನ್ನು ಚಾಂಪಿಯನ್ ಯೆಲ್ಲೋ ನಂ.2, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಸೊನೊಮಾ ರೆಡ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡುತ್ತಿದೆ. ಹೊಸ ಬಣ್ಣಗಳು ಆಧುನಿಕ ಡಿಸೈನ್‌ನೊಂದಿಗೆ ಬೆರೆತು ಬೈಕ್‌ಗೆ ಆಕರ್ಷಣೆಯನ್ನು ಹೆಚ್ಚಿಸಿವೆ. ಸ್ಪೋರ್ಟಿ ಅಡ್ವೆಂಚರ್ ಟೂರಿಂಗ್ ಮೋಟಾರ್ ಸೈಕಲ್ ಬಯಸುವ ಯುವಕರನ್ನು ಇದು ಸೆಳೆಯುವಲ್ಲಿ ಅನುಮಾನವಿಲ್ಲ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.
ಈ ಕ್ವಾರ್ಟರ್ - ಲೀಟರ್ ಅಡ್ವೆಂಚರ್ ಟೂರಿಂಗ್ ಮೋಟಾರ್ ಸೈಕಲ್ ಈಗ ಒಬಿಡಿ 2 ಕಾಂಪ್ಲೈಂಟ್ ಆಗಿದ್ದು, 2024 ರ ಮಾಡಲ್‌ಗಿಂತ ರೂ.5,000 ದುಬಾರಿಯಾಗಿದೆ. ಬೆಲೆ ಹೆಚ್ಚಾದರೂ ಆಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ನೀಡಲಾಗಿರುವುದರಿಂದ ಈ ಬೆಲೆ ಹೆಚ್ಚಳ ಅಷ್ಟೇನು ದೊಡ್ಡದೆನಿಸುವುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.
ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಸುಜುಕಿ ವಿ - ಸ್ಟ್ರೋಮ್ ಎಸ್ಎಕ್ಸ್ ಅಡ್ವೆಂಚರ್ ಟೂರಿಂಗ್ ಮೋಟಾರ್‌ಸೈಕಲ್ ಎಲ್ಇಡಿ ಹೆಡ್ಲೈಟ್ ಮತ್ತು ಟೈಲ್ ಲೈಟ್, ಡ್ಯುಯಲ್ - ಚಾನೆಲ್ ಎಬಿಎಸ್ (Dual - channel ABS) ಮತ್ತು ಬ್ಲೂಟೂತ್ ಸಕ್ರಿಯಗೊಳಿಸಿದ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ (Bluetooth-enabled LCD instrument cluster) ಅನ್ನು ಹೊಂದಿದೆ.
ಟೂರಿಂಗ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಜನಪ್ರಿಯತೆ ಪಡೆದಿರುವ ಈ ಬೈಕ್ 249 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 9,500 ಆರ್ ಪಿಎಂನಲ್ಲಿ 26.5 ಬಿಹೆಚ್‌ಪಿ ಪವರ್ ಮತ್ತು 7,500 ಆರ್‌ಪಿಎಂನಲ್ಲಿ 22.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 6 ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅದರ ಸಂಸ್ಕರಣೆ ಮತ್ತು ಇಂಧನ ದಕ್ಷತೆಗೆ ಹೆಸರುವಾಸಿಯಾಗಿದೆ.
ಆರಾಮದಾಯಕ ಎರ್ಗೊನಾಮಿಕ್ಸ್ ಹೊಂದಿರುವ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ ಬೈಕಿನ ಸವಾರಿ ಮತ್ತು ನಿರ್ವಹಣೆ ಸಹ ಉತ್ತಮವಾಗಿದೆ. ಇದು ಎತ್ತರದ ಮೋಟಾರ್‌ಸೈಕಲ್ ಆಗಿದ್ದು, ಆಫ್‌ರೋಡಿಂಗ್ ಮಾಡುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಇದು ಭಾರತದಲ್ಲಿ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುವ ಸಾಧ್ಯತೆ ಇದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








