ಬೆಲೆಯೂ ಅಗ್ಗ.. ಬಡವನು ಕೊಳ್ಳಬಹುದು: 'Honda QC1' ಇ-ಸ್ಕೂಟರ್ ಖರೀದಿಸಲು ಪ್ರಮುಖ 5 ಕಾರಣಗಳಿವು!
ಹೋಂಡಾ ಕ್ಯೂಸಿ1 (Honda QC1) ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಹೊರಹೊಮ್ಮಿದೆ. ಇದನ್ನು ಸಾಮಾನ್ಯ ಮಧ್ಯಮ ವರ್ಗದ ಜನರು ದಿನಬಳಕೆಗೆ ಉಪಯೋಗಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಅದಕ್ಕೆ ತಕ್ಕಂತೆ ಕೈಗೆಟುಕುವ ಬೆಲೆಯನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಸಾಮಾನ್ಯ ಹಳ್ಳಿಯಿಂದ ಹಿಡಿದು ನಗರ ಪ್ರದೇಶಗಳಲ್ಲೂ ಸುಲಭವಾಗಿ ಓಡಿಸಬಹುದು. ನೀವು ಹೊಚ್ಚ ಹೊಸ ಕ್ಯೂಸಿ1 ಇ-ಸ್ಕೂಟರ್‌ನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ, ಪ್ರಮುಖ 5 ಕಾರಣಗಳು ಇಲ್ಲಿವೆ.
ತುಂಬಾ ಸರಳ ವಿನ್ಯಾಸ: ನೂತನ ಹೋಂಡಾ ಕ್ಯೂಸಿ1 ತುಂಬಾ ನೋಡುಗರನ್ನು ಸೆಳೆಯಬಲ್ಲ ಅತಿ ಸರಳವಾದ ವಿನ್ಯಾಸವನ್ನು ಹೊಂದಿದೆ. ಇದರೊಟ್ಟಿಗೆಯೇ ಮಾರಾಟಕ್ಕೆ ಬಂದ 'ಆಕ್ಟಿವಾ ಇ' ಹೆಚ್ಚು ಪ್ರೀಮಿಯಂ ಆಗಿದೆ. ಹೊಸ ಕ್ಯೂಸಿ1 ಎಲೆಕ್ಟ್ರಿಕ್ ಸ್ಕೂಟರ್ ಕೂಡ ಆಕ್ಟಿವಾ ಇ ರೀತಿಯಲ್ಲಿಯೇ ಹೆಡ್‌ಲೈಟ್, ಲಗೇಜ್ ಹುಕ್ ಮತ್ತು ಯುಎಸ್‌ಬಿ-ಸಿ ಚಾರ್ಜಿಂಗ್ ಪಾಯಿಂಟ್‌ನ್ನು ಒಳಗೊಂಡಿದೆ.

ಕಾರ್ಯಕ್ಷಮತೆಯಲ್ಲಿ ಯಾವುದೇ ರಾಜಿ ಇಲ್ಲ: ಈ ಎಲೆಕ್ಟ್ರಿಕ್ ಸ್ಕೂಟರ್ ನಿತ್ಯವಸರ ಉಪಯೋಗಕ್ಕೆ ಹೆಚ್ಚು ಸೂಕ್ತವಾಗಿದೆ. ಇದು 1.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 80 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. ಇದರಲ್ಲಿ ಬಳಕೆ ಮಾಡಲಾಗಿರುವ ಎಲೆಕ್ಟ್ರಿಕ್ ಮೋಟಾರ್ 2.4 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 77 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸಬಲ್ಲದು.
ಚಾರ್ಜಿಂಗ್ ಮಾಡುವುದು ಬಲುಸುಲಭ: ಹೊಸ ಹೋಂಡಾ ಕ್ಯೂಸಿ1 ಎಲೆಕ್ಟ್ರಿಕ್ ಸ್ಕೂಟರ್‌ನ್ನು ಮನೆಯಲ್ಲಿಯೇ ಚಾರ್ಜಿಂಗ್ ಮಾಡಬಹುದು. ಇದರ ಬ್ಯಾಟರಿ ಪ್ಯಾಕ್ ಶೇಕಡ 0 ರಿಂದ 80% ಚಾರ್ಜ್ ಆಗುವುದಕ್ಕೆ 4 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತಿದೆ. ಹಾಗೆಯೇ 50 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.

ಗ್ರಾಹಕ ಸ್ನೇಹಿ ವೈಶಿಷ್ಟ್ಯಗಳು: ಈ ಸ್ಕೂಟರ್ ಎಲ್‌ಸಿಡಿ ಡಿಸ್‌ಪ್ಲೇ, ಅನಲಾಗ್ ಕೀ, 26-ಲೀ. ಸಾಮರ್ಥ್ಯದ ಸ್ಟೋರೇಜ್ ಸ್ಪೇಸ್, ಸಿಂಗಲ್ ಪೀಸ್ ಗ್ರಾಬ್ ಹ್ಯಾಂಡಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಜೊತೆಗೆ 89.5 ಕೆಜಿ ತೂಕವಿದ್ದು, 704 ಎಂಎಂ ಉದ್ದವಿರುವ ಸೀಟ್‌ನ್ನು ಹೊಂದಿದೆ. ರಸ್ತೆಯ ಮೇಲೆ ಬಿಗಿಯಾಗದ ಹಿಡಿತ ಒದಗಿಸಲು ಅಲಾಯ್ ವೀಲ್‌ನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.
ಅತಿ ಕಡಿಮೆ ಬೆಲೆ: ನೂತನ ಹೋಂಡಾ ಕ್ಯೂಸಿ1 ಎಲೆಕ್ಟ್ರಿಕ್ ಸ್ಕೂಟರ್‌ನ್ನು ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಕೊಳ್ಳಬಹುದು. ಇದು ಅವರ ಬಜೆಟ್ ದರದಲ್ಲಿಯೇ ಲಭ್ಯವಾಗಿ ಬಿಡುತ್ತದೆ. ಈ ಸ್ಕೂಟರ್, ಕೇವಲ ರೂ.90,000 (ಎಕ್ಸ್-ಶೋರೂಂ - ನವದೆಹಲಿ) ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ.

ಇನ್ನು, ಹೋಂಡಾ ಕ್ಯೂಸಿ1 ಇ-ಸ್ಕೂಟರ್ ಬೆಲೆಗೆ ತಕ್ಕಂತೆ ಅತ್ಯುತ್ತಮವಾದ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ದಿನಬಳಕೆಗೆ ಯೋಗ್ಯವಾಗಿರುವಂತೆ ತಯಾರಿಸಲಾಗಿರುವುದರಿಂದ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಬಳಕೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಬಹುದು. ಮುಂಬರುವ ದಿನಗಳಲ್ಲಿ ಈ ಸ್ಕೂಟರ್ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡರೂ ಅಚ್ಚರಿಯಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications