TVS: ಭಾರತದ ಅತ್ಯಂತ ಪವರ್‌ಫುಲ್ 160 ಸಿಸಿ ಬೈಕ್ ಬಿಡುಗಡೆ: ಕಡಿಮೆ ಬೆಲೆ, ಸ್ಪೋರ್ಟಿ ಲುಕ್!

ಪ್ರಮುಖ ದ್ವಿಚಕ್ರ ವಾಹನ ತಯಾರಕರಾಗಿರುವ ಟಿವಿಎಸ್ ಮೋಟಾರ್ ಕಂಪನಿ, 2025 ಟಿವಿಎಸ್ ಅಪಾಚೆ RTR 160 (2025 TVS Apache RTR 160) ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಆವೃತ್ತಿಯು ಇದುವರೆಗಿನ ಅತ್ಯಂತ ದಿಟ್ಟ ಆವೃತ್ತಿಯಾಗಿದ್ದು, ವರ್ಧಿತ ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಒಳಗೊಂಡಿದೆ. ಇಂದಿನ ಸವಾರರ ವಿಕಸನಗೊಳ್ಳುತ್ತಿರುವ ಬೇಡಿಕೆಗಳನ್ನು ಪೂರೈಸುವ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿರುವ ಟಿವಿಎಸ್ ಅಪಾಚೆ RTR 160, ಅತ್ಯಾಧುನಿಕ ತಂತ್ರಜ್ಞಾನ, ಸಂಸ್ಕರಿಸಿದ ವಿನ್ಯಾಸ ಮತ್ತು ವರ್ಧಿತ ಸಾಮರ್ಥ್ಯಗಳೊಂದಿಗೆ ಬಿಡುಗಡೆಯಾಗಿದೆ.

2025 ಟಿವಿಎಸ್ ಅಪಾಚೆ RTR 160 ರ ಹೊಸ ಅಪ್‌ಡೇಟ್‌ಗಳನ್ನು ನೋಡುವುದಾದ್ರೆ, ಒಬಿಡಿ 2 ಬಿ ಕಂಪ್ಲೈಂಟ್, ಡ್ಯುಯಲ್-ಚಾನೆಲ್ ಎಬಿಎಸ್, ರೆಡ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಈ ಮೂಲಕ ಹೊಸ ಮೋಟಾರ್‌ಸೈಕಲ್ ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ನಿಖರ ನಿರ್ವಹಣೆಯನ್ನು ನೀಡುತ್ತದೆ, ಇದು ತನ್ನ ವಿಭಾಗದಲ್ಲಿಯೇ ಬೆಸ್ಟ್ ಆಯ್ಕೆಯಾಗಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಡಿದೆ.

tvs-apache-rtr-160-launched-with-dual-channel-abs

ಬೆಸ್ಟ್ ಪರ್ಫಾಮೆನ್ಸ್

ಟಿವಿಎಸ್ ಅಪಾಚೆ RTR 160 ಬೈಕ್, 8,750 ಆರ್‌ಪಿಎಂನಲ್ಲಿ 16.04 ಪಿಎಸ್ ಗರಿಷ್ಠ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 13.85 ಎನ್‌ಎಂನ ಟಾರ್ಕ್ ಅನ್ನು ನೀಡುತ್ತದೆ. ಇದು ಟಿವಿಎಸ್ ಅಪಾಚೆಯ ಐಕಾನಿಕ್ ರೇಸಿಂಗ್ ಡಿಎನ್‌ಎಯನ್ನು ಸಾಕಾರಗೊಳಿಸುವ ವಿಭಾಗದ ಪ್ರಮುಖ ಪವರ್ - ಟು - ವೇಟ್ ಅನುಪಾತದೊಂದಿಗೆ ಉತ್ತಮ ಸವಾರಿ ಅನುಭವವನ್ನು ನೀಡುತ್ತದೆ.

ಸ್ಮಾರ್ಟ್ ಕನೆಕ್ಟಿವಿಟಿ & ಕಂಫರ್ಟ್

ಈ ಮೋಟಾರ್ ಸೈಕಲ್ ಸ್ಪೋರ್ಟ್, ಅರ್ಬನ್, ರೈನ್ ಎಂಬ ಮೂರು ವಿಭಿನ್ನ ರೈಡ್ ಮೋಡ್‌ಗಳನ್ನು ಹೊಂದಿದೆ. ಬ್ಲೂಟೂತ್ ಮತ್ತು ವಾಯ್ಸ್ ಅಸಿಸ್ಟ್‌ನೊಂದಿಗೆ ಟಿವಿಎಸ್ ಸ್ಮಾರ್ಟ್‌ಕನೆಕ್ಟ್ ಕೂಡ ನೀಡಲಾಗಿದೆ. ಟಿವಿಎಸ್ ಅಪಾಚೆ RTR 160 ಮ್ಯಾಟ್ ಬ್ಲ್ಯಾಕ್ ಮತ್ತು ಪರ್ಲ್ ವೈಟ್‌ನಂತಹ ಬಣ್ಣಗಳಲ್ಲಿ ರೆಡ್ ಅಲಾಯ್ ವೀಲ್‌ಗಳೊಂದಿಗೆ ಲಭ್ಯವಿರುತ್ತದೆ. ಇದು ಅದರ ಸ್ಪೋರ್ಟಿ, ರೇಸ್ - ಪ್ರೇರಿತ ಡಿಸೈನ್‌ಗೆ ಪೂರಕವಾಗಿದೆ.

ರೈಡ್ ಮೋಡ್‌ಗಳು, ವಾಯ್ಸ್ ಅಸಿಸ್ಟ್‌ನೊಂದಿಗೆ ಸ್ಮಾರ್ಟ್‌ಕನೆಕ್ಟ್ ಮತ್ತು ಈಗ ಡ್ಯುಯಲ್ ಚಾನೆಲ್ ಎಬಿಎಸ್‌ನಂತಹ ವಿಭಾಗದ ಪ್ರಮುಖ ವೈಶಿಷ್ಟ್ಯಗಳೊಂದಿಗೆ, ಪರ್ಫಾಮೆನ್ಸ್ ಮೋಟಾರ್‌ಸೈಕಲ್‌ನಿಂದ ಸವಾರರು ಏನನ್ನು ನಿರೀಕ್ಷಿಸಬಹುದೋ ಅದನ್ನು ನೀಡುವಲ್ಲಿ ಎತ್ತಿದ ಕೈ ಎನ್ನಿಸಿಕೊಂಡಿದೆ. ಹಾಗಾಗಿಯೇ ಅಪಾಚೆ ಸರಣಿಯು ಸದ್ಯ 6 ಮಿಲಿಯನ್‌ಗಿಂತಲೂ ಹೆಚ್ಚು ಸವಾರರ ಜಾಗತಿಕ ಸಮುದಾಯವಾಗಿದೆ.

2025ರ ಟಿವಿಎಸ್ ಅಪಾಚೆ RTR 160 ಭಾರತದಾದ್ಯಂತ ಟಿವಿಎಸ್ ಮೋಟಾರ್ ಕಂಪನಿ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದ್ದು, ಬೆಲೆಗಳು 1,34,320 ರೂ.ಗಳಿಂದ (ಎಕ್ಸ್‌ಶೋರೂಂ) ಪ್ರಾರಂಭವಾಗುತ್ತವೆ. 2025 ಟಿವಿಎಸ್ ಅಪಾಚೆ ಆರ್‌ಟಿಆರ್ 160 ಈ ಪರಂಪರೆಯ ಮೇಲೆ ತೀಕ್ಷ್ಣವಾದ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ಟ್ರ್ಯಾಕ್-ಪ್ರೇರಿತ ಎಂಜಿನಿಯರಿಂಗ್‌ನೊಂದಿಗೆ ನಿಜವಾಗಿಯೂ ರೋಮಾಂಚಕ ಸವಾರಿಗಾಗಿ ನಿರ್ಮಿಸಲಾಗಿದೆ.

ಬಿಡುಗಡೆಯ ಕುರಿತು ಮಾತನಾಡಿದ ಟಿವಿಎಸ್ ಮೋಟಾರ್ ಕಂಪನಿಯ ಪ್ರೀಮಿಯಂ ವ್ಯವಹಾರದ ಮುಖ್ಯಸ್ಥ ವಿಮಲ್ ಸಂಬ್ಲಿ ಮಾತನಾಡಿ, " 2025 ಟಿವಿಎಸ್ ಅಪಾಚೆ RTR 160 ಒಬಿಡಿ2ಬಿ ಕಂಪ್ಲೈಂಟ್ ಆಗಿದ್ದು ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಪರಿಚಯಿಸುತ್ತದೆ, ವರ್ಧಿತ ಸುರಕ್ಷತೆ ಮತ್ತು ನಿಯಂತ್ರಣವನ್ನು ನೀಡುತ್ತದೆ.

ಟಿವಿಎಸ್ ಅಪಾಚೆ RTR 160 ತನ್ನ ವಿಭಾಗದಲ್ಲಿ ನಿರಂತರವಾಗಿ ಮಾನದಂಡಗಳನ್ನು ನಿಗದಿಪಡಿಸಿದೆ, ಅಪಾಚೆಯ ರೇಸಿಂಗ್ ಡಿಎನ್‌ಎಯಲ್ಲಿ ಬೇರೂರಿರುವಾಗ ಪ್ರತಿ ಪೀಳಿಗೆಯೊಂದಿಗೆ ವಿಕಸನಗೊಳ್ಳುತ್ತಿದೆ. ಇದು ಹೀಗೆಯೇ ಮುಂದುವರಿಯಲಿದ್ದು, ಪ್ರತಿ ಜನರೇಷನ್ ಯುವಕರಿಗೆ ತಕ್ಕಂತೆ ಅಪ್‌ಡೇಟ್ ಆಗುತ್ತಲೇ ಇರುತ್ತದೆ. ಅಪಾಚೆ ಸಿರೀಸ್ ಅನ್ನು ಪ್ರತಿ ಪೀಳಿಗೆಯ ಬೆಸ್ಟ್ ಆಯ್ಕೆಯನ್ನಾಗಿ ಮಾಡುತ್ತೇವೆ ಎಂದರು.

More from DriveSpark

Article Published On: Saturday, June 28, 2025, 14:49 [IST]
English summary
Tvs apache rtr 160 launched with dual channel abs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+