Bajaj: ಇತ್ತೀಚೆಗೆ ತೀರಾ ಕಮ್ಮಿ ಬೆಲೆಯಲ್ಲಿ ಬಿಡುಗಡೆಯಾದ ಸ್ಟೈಲಿಷ್ ಬಜಾಜ್ ಪಲ್ಸರ್ ವಿಶೇಷತೆಗಳು!
ಬಜಾಜ್ ಆಟೋ ಭಾರತದಲ್ಲಿ 2026 ಪಲ್ಸರ್ 125 (Bajaj 2026 Pulsar 125) ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ, ಇದು ಗಮನಾರ್ಹ ನವೀಕರಣಗಳನ್ನು ಪಡೆದುಕೊಂಡಿದೆ. ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಕಡಿಮೆ ಬೆಲೆಯಲ್ಲಿ ಸ್ಪೋರ್ಟಿ ಬೈಕ್ ಹುಡುಕುತ್ತಿರುವ ಯುವಕರಿಗೆ ಬೆಸ್ಟ್ ಆಯ್ಕೆಯಾಗಿದೆ. ಹೊಸ LED ಹೆಡ್‌ಲ್ಯಾಂಪ್ ಮತ್ತು LED ಬ್ಲಿಂಕರ್‌ಗಳ ಜೊತೆಗೆ ರಿಫ್ರೆಶ್ ಮಾಡಿದ ಬಣ್ಣಗಳು ಮತ್ತು ಗ್ರಾಫಿಕ್ಸ್ ಪಡೆದುಕೊಂಡು ಬೈಕ್ ಇನ್ನಷ್ಟು ಸ್ಪೋರ್ಟಿಯಾಗಿ ಹೊರಹೊಮ್ಮಿದೆ. ನವೀಕರಿಸಿದ ಬಜಾಜ್ ಪಲ್ಸರ್ 125 ರ ಮುಖ್ಯಾಂಶಗಳು ಇಲ್ಲಿವೆ.
2026 ಪಲ್ಸರ್ 125 ಬೈಕಿನ ಮುಂಭಾಗದಲ್ಲಿ ಸ್ವಲ್ಪಮಟ್ಟಿಗೆ ಸೂಕ್ಷ್ಮವಾದ ನವೀಕರಣವನ್ನು ಮಾಡಲಾಗಿದೆ, ಈಗ LED ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಆದರೆ ಹಳೆಯ ಮಾಡಲ್‌ನಲ್ಲಿ ಹ್ಯಾಲೊಜೆನ್ ಲೈಟ್ ಸೆಟಪ್ ನೀಡಲಾಗಿತ್ತು. ಜೊತೆಗೆ ಈಗ ಟರ್ನ್ ಇಂಡಿಕೇಟರ್‌ಗಳನ್ನು ಸಹ LED ಲೈಟ್‌ಗಳಿಗೆ ಅಪ್‌ಗ್ರೇಡ್ ಮಾಡಲಾಗಿದೆ. ಈ LED ಲೈಟ್ ಸೇರ್ಪಡೆಯು ಮೋಟಾರ್‌ಸೈಕಲ್‌ನ ಲುಕ್ ಜೊತೆಗೆ, ಸವಾರರ ಆತ್ಮವಿಶ್ವಾಸವನ್ನು ಸುಧಾರಿಸುತ್ತದೆ.

ಬಜಾಜ್, ಬಾಡಿ ಪ್ಯಾನೆಲ್‌ಗಳಲ್ಲಿ ರಿಫ್ರೆಶ್ ಮಾಡಿದ ಗ್ರಾಫಿಕ್ಸ್ ಜೊತೆಗೆ ಹೊಸ ಬಣ್ಣ ಆಯ್ಕೆಗಳನ್ನು ಪರಿಚಯಿಸಿದೆ. ಖರೀದಿದಾರರು ಈಗ ಬ್ಲ್ಯಾಕ್ ಗ್ರೇ, ಬ್ಲ್ಯಾಕ್ ರೇಸಿಂಗ್ ರೆಡ್, ಬ್ಲ್ಯಾಕ್ ಸಯಾನ್ ಬ್ಲೂ ಮತ್ತು ರೇಸಿಂಗ್ ರೆಡ್ ವಿತ್ ಟ್ಯಾನ್ ಬೀಜ್ ಬಣ್ಣಗಳಿಂದ ಆಯ್ಕೆ ಮಾಡಬಹುದು. ಈ ಬಣ್ಣಗಳು ಪಲ್ಸರ್ 125 ಗೆ ಹೊಸ ಮತ್ತು ಹೆಚ್ಚು ಆಕರ್ಷಕ ಸ್ಪರ್ಶವನ್ನು ನೀಡುತ್ತದೆ. ಜೊತೆಗೆ ಮಸ್ಕುಲರ್ ನೋಟ ಮತ್ತು ಆಕ್ರಮಣಕಾರಿ ಬಾಡಿ ಲೈನ್‌ಗಳೊಂದಿಗೆ ಹೆಚ್ಚು ಕಮಾಂಡಿಂಗ್ ರಸ್ತೆ ಉಪಸ್ಥಿತಿಯನ್ನು ಹೊಂದಿದೆ.
ಈ ನವೀಕರಣಗಳೊಂದಿಗೆ, 2026 ಬಜಾಜ್ ಪಲ್ಸರ್ 125 ಈಗ ಮೊದಲಿಗಿಂತ ಹೆಚ್ಚಿನ ಬೆಲೆಯನ್ನು ಹೊಂದಿದೆ. ಸಿಂಗಲ್-ಸೀಟ್ ವೇರಿಯೆಂಟ್ ಬೆಲೆ ರೂ. 89,910 ಆಗಿದ್ದರೆ, ಸ್ಪ್ಲಿಟ್-ಸೀಟ್ ಆವೃತ್ತಿಯ ಬೆಲೆ ರೂ. 92,046 (ಎರಡೂ ಎಕ್ಸ್-ಶೋರೂಂ) ಇದೆ. ಇದು ಹಳೆಯ ಮಾಡಲ್‌ಗಿಂತ ಸುಮಾರು ರೂ. 3,500 ರಷ್ಟು ಬೆಲೆ ಹೆಚ್ಚಾಗಿದೆ.

ಈ ನವೀಕರಣಗಳೊಂದಿಗೆ, ಪಲ್ಸರ್ 125 ತನ್ನ ಸಾಟಿಯಿಲ್ಲದ ಪರ್ಫಾಮೆನ್ಸ್, ದೈನಂದಿನ ಪ್ರಾಯೋಗಿಕತೆ ಮತ್ತು ನಗರದ ಬೀದಿಗಳಲ್ಲಿ ಎದ್ದು ಕಾಣುವ ಸ್ಪೋರ್ಟಿ ಲುಕ್, ವೈಶಿಷ್ಟ್ಯ-ಭರಿತ ಮೋಟಾರ್‌ಸೈಕಲ್ ಅನ್ನು ಬಯಸುವ ಸವಾರರಿಗೆ ಬೆಸ್ಟ್ ಆಯ್ಕೆಯ ಮೋಟಾರ್‌ಸೈಕಲ್ ಆಗಿದೆ. ನವೀಕರಿಸಿದ ಹೊಸ ಪಲ್ಸರ್ 125 ದೇಶಾದ್ಯಂತ ಬಜಾಜ್ ಆಟೋ ಡೀಲರ್‌ಶಿಪ್‌ಗಳಲ್ಲಿ ಈಗ ಖರೀದಗೆ ಲಭ್ಯವಿದೆ.
ಉಳಿದಂತೆ ಹಳೆಯ ಮಾಡೆಲ್‌ನಲ್ಲಿ ಇದ್ದ ಅದೇ 17 - ಇಂಚಿನ ಅಲಾಯ್ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಸ್ಪೋರ್ಟಿ ಲುಕ್‌ಗಾಗಿ ಉಳಿಸಿಕೊಳ್ಳಲಾಗಿದೆ. 11.5 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್ ಸಾಮರ್ಥ್ಯವನ್ನು ಒಳಗೊಂಡಿದೆ. ಫುಲ್ಲಿ ಡಿಜಿಟಲ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನಂತಹ ವೈಶಿಷ್ಟ್ಯಗಳನ್ನು ಯಥಾಸ್ಥಿತಿಯಲ್ಲಿ ಮುಂದಿವರಿಸಲಾಗಿದೆ.

ಎಂಜಿನ್ ವಿಷಯದಲ್ಲೂ ಯಾವುದೇ ಬದಲಾವಣೆ ಆಗಿಲ್ಲ, 11.8 ಪಿಎಸ್ ಪವರ್ ಮತ್ತು 10.8 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಅದೇ 124.4-ಸಿಸಿ 4-ಸ್ಟ್ರೋಕ್ ಪೆಟ್ರೋಲ್ ಎಂಜಿನ್ ಅನ್ನು ಮುಂದುವರೆಸಲಾಗಿದೆ. ಈ ಎಂಜಿನ್ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 55 ಕಿ.ಮೀವರೆಗೆ ಮೈಲೇಜ್‌ನ್ನು ನೀಡುತ್ತದೆ.
ಹೊಸ ಬಜಾಜ್ ಪಲ್ಸರ್ 125 ವೇರಿಯೆಂಟ್‌ಗೆ ಅನುಗುಣವಾಗಿ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವು ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸುತ್ತವೆ. ಮೋಟಾರ್‌ಸೈಕಲ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಗ್ಯಾಸ್ - ಚಾರ್ಜ್ಡ್ ಟ್ವಿನ್ ಸ್ಪ್ರಿಂಗ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ.


Click it and Unblock the Notifications








