ಕಮ್ಮಿ ಬೆಲೆಯ ಪರ್ಫೆಕ್ಟ್ ಸ್ಕೂಟರ್ ಬೇಕೆ? ಬಜಾಜ್ ಚೇತಕ್ VS ಟಿವಿಎಸ್ ಆರ್ಬಿಟರ್: ಯಾವುದು ಬೆಸ್ಟ್?

ಬಜಾಜ್ (Bajaj) ಕಂಪನಿಯು ಇತ್ತೀಚೆಗೆ ತನ್ನ ಹೊಸ ಮಾಡಲ್ 'ಚೇತಕ್ C2501' (Chetak C2501) ಎಂಬ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಇದು ಬಜಾಜ್ ಚೇತಕ್ ಸಿರೀಸ್‌ನಲ್ಲಿಯೇ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಇದಕ್ಕೆ ನೇರ ಪ್ರತಿಸ್ಪರ್ಧಿಯಾಗಿರುವ ಮತ್ತೊಂದು ಕೈಗೆಟುಕುವ ಆರಂಭಿಕ ಮಟ್ಟದ ಎಲೆಕ್ಟ್ರಿಕ್ ಸ್ಕೂಟರ್ 'ಟಿವಿಎಸ್ ಆರ್ಬಿಟರ್' (TVS Orbiter) ಆಗಿದ್ದು, ಇದು ಈಗಾಗಲೇ ತುಂಬಾ ಹೆಸರು ಮಾಡಿದೆ. ಹಾಗಾದ್ರೆ ಬನ್ನಿ ಇವುಗಳಲ್ಲಿ ಯಾವುದು ಉತ್ತಮ ರೇಂಜ್, ಫೀಚರ್ಸ್, ಅಗ್ಗದ ಬೆಲೆಯನ್ನು ಹೊಂದಿದೆ ಎಂಬುದನ್ನು ನೋಡೋಣ.

ಬೆಲೆ: ಟಿವಿಎಸ್ ಆರ್ಬಿಟರ್ ಬೆಲೆ ರೂ.1,06,251 ಹಾಗೂ ಬಜಾಜ್ ಚೇತಕ್ C2501 ಬೆಲೆ ರೂ.91,399 (ಎರಡು ಎಕ್ಸ್-ಶೋರೂಂ)ಇದೆ. ಎರಡರ ನಡುವಿನ ವ್ಯತ್ಯಾಸ ರೂ.14,852 ಇದೆ. ನಗರ ಪ್ರಯಾಣ ಮತ್ತು ದಿನಸಿ ವಸ್ತುಗಳನ್ನು ನಿಭಾಯಿಸಬಲ್ಲ ಸರಳ ಎಲೆಕ್ಟ್ರಿಕ್ ಸ್ಕೂಟರ್ ಹುಡುಕುತ್ತಿರುವವರಿಗೆ ಬಜಾಜ್ ಚೇತಕ್ C2501 ಬೆಸ್ಟ್ ಆಯ್ಕೆಯಾಗಿದೆ. ಉತ್ತಮ ಪರ್ಫಾಮೆನ್ಸ್, ಹೆಚ್ಚಿನ ಫೀಚರ್ಸ್ ಮತ್ತು ಸ್ವಲ್ಪ ದೂರದ ಪ್ರಯಾಣ ಬಯಸುವವರಿಗೆ ಟಿವಿಎಸ್ ಆರ್ಬಿಟರ್ ಸೂಕ್ತವಾಗಿರುತ್ತದೆ.

bajaj-chetak-c25-vs-tvs-orbiter-price-features-design-range-details

ಪರ್ಫಾಮೆನ್ಸ್: ಟಿವಿಎಸ್ ಆರ್ಬಿಟರ್ 2.5kW ಮೋಟಾರ್ ಹೊಂದಿದ್ದು, 68 ಕಿ.ಮೀ ಟಾಪ್ ಸ್ಪೀಡ್ ಹೋಗಬಲ್ಲದು. 3.1kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದನ್ನು ಒಮ್ಮೆ ಚಾರ್ಜ್‌ ಮಾಡಿ 158 ಕಿ.ಮೀ ಓಡಿಸಬಹುದು. ಬಜಾಜ್ ಚೇತಕ್ 2.2kW ಹಬ್-ಮೌಂಟೆಡ್ ಮೋಟಾರ್ ಹೊಂದಿದ್ದು, 55 ಕಿ.ಮೀ ಟಾಪ್ ಸ್ಪೀಡ್ ಹೋಗಬಲ್ಲದು. ಇದು 2.5kWh ಬ್ಯಾಟರಿ ಪ್ಯಾಕ್‌ ಹೊಂದಿದ್ದು, ಇದನ್ನು ಒಮ್ಮೆ ಚಾರ್ಜ್‌ ಮಾಡಿ 113 ಕಿ.ಮೀ ಓಡಿಸಬಹುದು.

ಫೀಚರ್ಸ್ & ಡಿಸೈನ್: ಬಜಾಜ್ ಚೇತಕ್ ವೃತ್ತಾಕಾರದ ಕಲರ್ LCD ಕನ್ಸೋಲ್ ಪಡೆದಿದ್ದು, ಟಿವಿಎಸ್ ಆರ್ಬಿಟರ್ ಆಯತಾಕಾರದ ಕನ್ಸೋಲ್ ಹೊಂದಿದೆ. ಎರಡೂ ಎಲ್ಲಾ ಅಗತ್ಯ ಮಾಹಿತಿಗಳನ್ನು ಪ್ರದರ್ಶಿಸುತ್ತವೆ. ಆರ್ಬಿಟರ್‌ನ ಕನ್ಸೋಲ್ ಕರೆ/ಎಸ್‌ಎಂಎಸ್ ಎಚ್ಚರಿಕೆಗಳು, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಮತ್ತು OTA (ಓವರ್-ದಿ-ಏರ್) ಅಪ್‌ಡೇಟ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಚೇತಕ್ ಸಂಪರ್ಕಿತ ವೈಶಿಷ್ಟ್ಯಗಳಿಗಾಗಿ ನೀವು ಟೆಕ್‌ಪ್ಯಾಕ್‌ ಪಡೆಯಬೇಕು ಇದಕ್ಕಾಗಿ ರೂ.3,000 ಪಾವತಿಸಬೇಕಾಗುತ್ತದೆ.

bajaj-chetak-c25-vs-tvs-orbiter-price-features-design-range-details

ಆರ್ಬಿಟರ್ 34-ಲೀಟರ್ ಅಂಡರ್ ಸೀಟ್ ಸ್ಟೋರೇಜ್, ಚೇತಕ್ 25-ಲೀಟರ್ ಅಂಡರ್‌ಸೀಟ್ ಸ್ಟೋರೇಜ್ ಹೊಂದಿದೆ. ಆರ್ಬಿಟರ್ ಕ್ರೂಸ್ ಕಂಟ್ರೋಲ್ ಸಹ ಪಡೆಯುತ್ತದೆ, ಇದು ಸಾಂದರ್ಭಿಕ ಹೆದ್ದಾರಿಗಳಲ್ಲಿ ಸಹಾಯಕವಾಗಿರುತ್ತದೆ. ಡಿಸೈನ್ ವಿಷಯಕ್ಕೆ ಬಂದರೆ ಬಜಾಜ್ ಚೇತಕ್ ರೆಟ್ರೊ-ಪ್ರೇರಿತ ವಿನ್ಯಾಸವನ್ನು ಹೊಂದಿದೆ. ಡೈಮೆಂಡ್ ಆಕಾರದ ಹೆಡ್‌ಲೈಟ್ ಮತ್ತು ಇತರ ಚೇತಕ್ ಮಾದರಿಗಳಲ್ಲಿರುವ ಏಪ್ರನ್‌ಗೆ ವಿರುದ್ಧವಾಗಿ ಟರ್ನ್-ಇಂಡಿಕೇಟರ್‌ಗಳನ್ನು ಹೆಡ್‌ಲೈಟ್ ಕೌಲ್‌ಗೆ ಸೇರಿಸಲಾಗಿದೆ.

ಮತ್ತೊಂದೆಡೆ, ಟಿವಿಎಸ್ ಆರ್ಬಿಟರ್ ಆಧುನಿಕ ಡಿಸೈನ್ ಅಳವಡಿಸಿಕೊಂಡಿದೆ. ಈ ಸ್ಕೂಟರ್ ನಾವು ಸಾಮಾನ್ಯವಾಗಿ ಕುಟುಂಬ - ಆಧಾರಿತ ಸ್ಕೂಟರ್‌ಗಳಿಂದ ನಿರೀಕ್ಷಿಸುವಂತೆ ಬಾಕ್ಸಿ ವಿನ್ಯಾಸವನ್ನು ಹೊಂದಿದೆ. ಇದು ಫ್ಯೂಚರಿಸ್ಟಿಕ್ ಆಗಿ ಕಾಣುವುದರಿಂದ ಸ್ಕೂಟರ್ ಸಾಕಷ್ಟು ಚೆನ್ನಾಗಿ ಲುಕ್ ನೀಡುತ್ತದೆ, ಆಧುನಿಕ ನೋಟವು ಯುವ ಸವಾರರಿಗೆ ಆಕರ್ಷಕವಾಗಿಸುತ್ತದೆ.

bajaj-chetak-c25-vs-tvs-orbiter-price-features-design-range-details

ಹಾರ್ಡ್‌ವೇರ್: ಎರಡೂ ಸ್ಕೂಟರ್‌ಗಳು ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಟ್ವಿನ್ ರಿಯರ್ ಶಾಕ್ ಅಬ್ಸಾರ್ಬರ್ ಸೆಟಪ್ ಅನ್ನು ಹೊಂದಿವೆ. ಆದರೆ ಆರ್ಬಿಟರ್ 14-ಇಂಚಿನ ಮುಂಭಾಗ ಮತ್ತು 12-ಇಂಚಿನ ಹಿಂಭಾಗದ ಅಲಾಯ್ ವೀಲ್ ಸೆಟಪ್‌ನಲ್ಲಿ ಬರುತ್ತದೆ. ಹಾಗೆಯೇ ಆರ್ಬಿಟರ್ ಎರಡೂ ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ, ಚೇತಕ್ C2501 ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದು ಬ್ರೇಕಿಂಗ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, January 23, 2026, 10:20 [IST]
English summary
Bajaj chetak c25 vs tvs orbiter price features design range details
Read more on bajaj india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+