Suzuki e Access: 1.88 ಲಕ್ಷ.. 95 Km ರೇಂಜ್, ಹೊಸ 'ಸುಜುಕಿ ಇ ಆಕ್ಸೆಸ್'ಗೆ 3 ಬದಲಿ ಇ-ಸ್ಕೂಟರ್‌ಗಳಿವು.. ಬೆಲೆ ಎಷ್ಟು?
ನಿನ್ನೆಯಷ್ಟೇ ಹೊಚ್ಚ ಹೊಸ ಸುಜುಕಿ ಇ ಆಕ್ಸೆಸ್ (Suzuki e Access) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಮಾರಾಟಕ್ಕೆ ತರಲಾಗಿದೆ. ಇದು ರೂ.1.88 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದೆ ಮೆಟಾಲಿಕ್ ಮ್ಯಾಟ್ ಸ್ಟೆಲ್ಲಾರ್ ಬ್ಲೂ ಹಾಗೂ ಮೆಟಾಲಿಕ್ ಮ್ಯಾಟ್ ಫೈಬ್ರೊಯಿನ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ. 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,305 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.
ಈ ಸ್ಕೂಟರ್ 3.07 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 95 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 4.2-ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ, ರಿಮೋಟ್ ಸ್ಟಾರ್ಟ್ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಒಳಗೊಂಡಂತೆ ನಾನಾ ಬಗೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ನೀವು ಇದೇ 'ಸುಜುಕಿ ಇ ಆಕ್ಸೆಸ್'ಗೆ ಪರ್ಯಾಯವಾಗಿ ಈ 3 ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಟಿವಿಎಸ್ ಆರ್ಬಿಟರ್, ಎಥರ್ ರಿಜ್ಟಾ ಮತ್ತು ಬಜಾಜ್ ಚೇತಕ್‌ಗಳನ್ನು ಖರೀದಿಸಬಹುದು. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.
ಟಿವಿಎಸ್ ಆರ್ಬಿಟರ್ (TVS Orbiter):
ಇದು ಜನಪ್ರಿಯ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. 'ಸುಜುಕಿ ಇ ಆಕ್ಸೆಸ್'ಗೆ ಬದಲಾಗಿಯೂ ಕೊಂಡುಕೊಳ್ಳಬಹುದು. ಅದಕ್ಕೆ ತಕ್ಕಂತೆ ರೂ.1.05 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಸ್ಟ್ರಾಟೋಸ್ ಬ್ಲೂ, ಲೂನಾರ್ ಗ್ರೇ, ಮಾರ್ಷಿಯನ್ ಕಾಪರ್ ಹಾಗೂ ಕಾಸ್ಮಿಕ್ ಟೈಟಾನಿಯಂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 169 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,330 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.

ನೂತನ 'ಆರ್ಬಿಟರ್' 3.1 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 158 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಹಾಗೂ ಯುಎಸ್‌ಬಿ ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.
ಎಥರ್ ರಿಜ್ಟಾ (Ather Rizta):
ಈ ಪ್ರಖ್ಯಾತ ಸ್ಕೂಟರ್‌ನ್ನು ಗ್ರಾಹಕರು ಕೂಡ ಮೆಚ್ಚಿಕೊಂಡಿದ್ದಾರೆ. 'ಸುಜುಕಿ ಇ ಆಕ್ಸೆಸ್'ಗೆ ಪರ್ಯಾಯ ಆಯ್ಕೆಯಾಗಲಿದೆ. ರೂ.1.15 ಲಕ್ಷದಿಂದ ರೂ.1.32 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಸಿಯಾಚಿನ್ ವೈಟ್, ಡೆಕ್ಕನ್ ಗ್ರೇ, ಕಾರ್ಡಮೊಮ್ ಗ್ರೀನ್ ಹಾಗೂ ಟೆರಾಕೋಟಾ ರೆಡ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 150 ಎಂಎಂ ಗ್ರೌಂಡ್ ಕ್ಲಿಯರೆನ್ಸ್ & 1,285 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

ಹೊಸ 'ರಿಜ್ಟಾ' 2.9 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.7 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 123 ರಿಂದ 160 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 7-ಇಂಚಿನ ಎಲ್‌ಸಿಡಿ ಸ್ಕ್ರೀನ್ ಹಾಗೂ ಮಲ್ಟಿ ಪರ್ಪಸ್ ಚಾರ್ಜರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ಬಜಾಜ್ ಚೇತಕ್ (Bajaj Chetak):
ಇದೊಂದು ನಂಬಿಕಾರ್ಹ ಸ್ಕೂಟರ್ ಆಗಿದ್ದು, 'ಸುಜುಕಿ ಇ ಆಕ್ಸೆಸ್'ಗೂ ಬದಲಿ ಕಾರಾಗಿದೆ. ರೂ.1.02 ಲಕ್ಷದಿಂದ ರೂ.1.22 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ನೋಡುಗರ ಕಣ್ಮನ ಸೆಳೆಯುವ ವಿನ್ಯಾಸವನ್ನು ಹೊಂದಿದೆ. ಸೈಬರ್ ವೈಟ್, ಬ್ರೂಕ್ಲಿನ್ ಬ್ಲಾಕ್ ಮತ್ತು ಇಂಡಿಗೊ ಮೆಟಾಲಿಕ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. 168 ಎಂಎಂ ಗ್ರೌಂಡ್ ಕ್ಲಿಯರೆನ್ಸ್ & 1,355 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.

ನೂತನ 'ಬಜಾಜ್ ಚೇತಕ್' 3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 127 ರಿಂದ 153 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕಂಟ್ರೋಲ್ ಮತ್ತು ಮ್ಯೂಸಿಕ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.


Click it and Unblock the Notifications








