Bajaj Chetak: ಮೊದಲೇ ಕಡಿಮೆ ಬೆಲೆ... ಮತ್ತೆ ಬೆಲೆ ಇಳಿಕೆ: ಈಗ ಬಡವರು ಖರೀದಿಸಬಹುದು

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ಲಿಮಿಟೆಡ್, ಕಳೆದ ವಾರ ಬಿಡುಗಡೆ ಮಾಡಿರುವ ಹೊಸ ಬಜಾಜ್ ಚೇತಕ್ C25 (Bajaj Chetak C25) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಶೋರೂಂಗಳಿಗೆ ತಲುಪಿಸಿದ್ದು, ಮಾರಾಟಕ್ಕೆ ಸಿದ್ಧವಾಗಿವೆ ಎಂದು ಘೋಷಿಸಿದೆ. ಈ ಹೊಸ ಸ್ಕೂಟರ್‌ಗೆ ಬಲವಾದ ಮತ್ತು ಉತ್ಸಾಹಭರಿತ ಪ್ರತಿಕ್ರಿಯೆ ಸಿಕ್ಕಿದ್ದು, ಮಾರುಕಟ್ಟೆಗಳಲ್ಲಿ ಗಮನಾರ್ಹ ಗ್ರಾಹಕರ ಆಸಕ್ತಿಯನ್ನು ಹುಟ್ಟುಹಾಕಿದೆ. ರೂ. 91,399 (ಎಕ್ಸ್-ಶೋರೂಂ) ಬೆಲೆಯ ಚೇತಕ್ C25 ಈಗ ರೂ. 87,100 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಮೊದಲ 10,000 ಗ್ರಾಹಕರಿಗೆ ಮಾತ್ರ ನೀಡಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿರುವ ಬಜಾಜ್ ಕಂಪನಿಯು, ಅಗ್ಗದ ಬೆಲೆಗೆ ಚೇತಕ್ C25 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿ ಎಲ್ಲರಿಗೂ ಕೈಗೆಟುಕುವಂತೆ ಮಾಡಿದೆ. ಮೊದಲೇ ಅಗ್ಗದ ಬೆಲೆಗೆ ಬಿಡುಗಡೆಯಾಗಿರುವ ಈ ಸ್ಕೂಟರ್ ಅನ್ನು ಇನ್ನೂ ಅಗ್ಗವಾಗಿಸಲು ಮೊದಲು ಬುಕ್ ಮಾಡುವ 10,000 ಗ್ರಾಹಕರಿಗೆ ರೂ. 4,299 ಡಿಸ್ಕೌಂಟ್ ನೀಡಿ ಕೇವಲ ರೂ. 87,100 ಬೆಲೆಯಲ್ಲಿ ನೀಡಲಾಗುತ್ತಿದೆ.

chetak-c25-surprise-early-bird-offer-4299-off-for-the-first-10000-customers

ಚೇತಕ್ C25 ಮಾರಾಟವು ಸದ್ಯ ಪ್ರಾರಂಭವಾಗಿದ್ದು, ಪ್ರಮುಖ ನಗರಗಳಲ್ಲಿ ಡೆಲಿವರಿಗಳು ಮತ್ತು ಶೋರೂಂಗಳಲ್ಲಿ ಬಿಡುಗಡೆ ನಡೆಯುತ್ತಿದೆ. ಗ್ರಾಹಕರ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಗುರುತಿಸಲು ಮತ್ತು ನಗರ ಪರಿಸರದಲ್ಲಿ ಸುಲಭ ಎಲೆಕ್ಟ್ರಿಕ್ ವಾಹನಗಳನ್ನು ಬಯಸುವ ಸವಾರರಿಗೆ C25 ಅನ್ನು ಇನ್ನಷ್ಟು ಅಗ್ಗವಾಗಿ ನೀಡುವ ಮೂಲಕ, ಹೆಚ್ಚಿನ ಗ್ರಾಹಕರು ಖರೀದಿಸುವಂತೆ ಮಾಡಲು ಆರಂಭಿಕ ಆಫರ್ ಪರಿಚಯಿಸಲಾಗಿದೆ ಎಂದು ಬಜಾಜ್ ಹೇಳಿದೆ.

ಚೇತಕ್ C25 ವಿಶೇಷತೆಗಳು

ದೈನಂದಿನ ನಗರ ಸವಾರಿಗಾಗಿ ವಿನ್ಯಾಸಗೊಳಿಸಲಾದ ಚೇತಕ್ C25, ಪ್ರೀಮಿಯಂ ಮೆಟಲ್ ಬಾಡಿ, ಕ್ಲೀನ್ ಮೊನೊ-ಬಾಡಿ ನಿರ್ಮಾಣ ಮತ್ತು ರೋಮಾಂಚಕ ಬಣ್ಣದ ಆಯ್ಕೆಗಳನ್ನು ಪಡೆದುಕೊಂಡಿದೆ. ಒಮ್ಮೆ ಚಾರ್ಜ್ ಮಾಡಿದರೆ 113 ಕಿ.ಮೀವರೆಗೆ ಓಡಿಸಬಹುದು. ಈ ಮಟ್ಟದ ರೇಂಜ್ ನೀಡಲು ಸಮರ್ಥವಾಗಿರುವ 2.5 kWh ಬ್ಯಾಟರಿಯನ್ನು ಸ್ಕೂಟರ್‌ನಲ್ಲಿ ಅಳವಡಿಸಲಾಗಿದೆ. 25-ಲೀಟರ್ ಅಂಡರ್‌ಸೀಟ್ ಸ್ಟೋರೇಜ್ ದಿನಸಿ ವಸ್ತುಗಳನ್ನು ಸಾಗಿಸಲು ಅನುಕೂಲವಾಗಿರುತ್ತದೆ.

chetak-c25-surprise-early-bird-offer-4299-off-for-the-first-10000-customers

ಹಿಲ್ ಹೋಲ್ಡ್ ಅಸಿಸ್ಟ್, ಗೈಡ್-ಮಿ-ಹೋಮ್ ಲೈಟಿಂಗ್ ಮತ್ತು ಡಿಸ್ಕ್ ಬ್ರೇಕ್‌ಗಳಂತಹ ವೈಶಿಷ್ಟ್ಯಗಳು ದೈನಂದಿನ ಸವಾರಿಗೆ ಸುಲಭತೆಯನ್ನು ಹೆಚ್ಚಿಸುತ್ತವೆ. ಡಿಸೈನ್ ವಿಷಯಕ್ಕೆ ಬಂದರೆ, ರೆಟ್ರೋ-ಕ್ಲಾಸಿಕ್ ಡಿಸೈನ್‌ನೊಂದಿಗೆ ಸಿಗ್ನೇಚರ್ DRL ಹೆಡ್‌ಲ್ಯಾಂಪ್, ಜಾಯಿಂಟ್‌ಗಳಿಲ್ಲದ ಮೊನೊ - ಬಾಡಿ ನಿರ್ಮಾಣವು ವಿಶಿಷ್ಟವಾದ ಪ್ರೀಮಿಯಂ ಲುಕ್ ನೀಡುತ್ತವೆ. ಸ್ಟ್ರೀಟ್ ಆರ್ಟ್‌ನಿಂದ ಪ್ರೇರಿತವಾದ ಗ್ರಾಫಿಕ್ಸ್‌ನೊಂದಿಗೆ ಪ್ರತಿಯೊಬ್ಬರನ್ನು ಸೆಳೆಯುತ್ತದೆ.

ಇಂಧನ ಚಾಲಿತ ಸ್ಕೂಟರ್‌ಗಳಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳ ಕಡೆಗೆ ವಾಲುತ್ತಿರುವವರಿಗೆ ಚೇತಕ್ C25 ಬೆಸ್ಟ್ ಆಯ್ಕೆಯಾಗಲಿದೆ. ಗ್ರಾಹಕರು, ಕುಟುಂಬಗಳು, ಯುವಕರು, ಮಹಿಳೆಯರು ಮತ್ತು ಯುವ ದಂಪತಿಗಳು ಸೇರಿದಂತೆ ಭಾರತದಲ್ಲಿ ಪ್ರತಿಯೊಬ್ಬರಿಂದ ಬಲವಾದ ಸ್ವೀಕಾರವನ್ನು ಪಡೆಯಲಿದೆ. ಈ ಸ್ಕೂಟರ್ ಗಂಟೆಗೆ 55 ಕಿ.ಮೀ ಟಾಪ್ ಸ್ಪೀಡ್ ಮತ್ತು ಕೇವಲ 2.25 ಗಂಟೆಗಳಲ್ಲಿ ಶೇ80 ರಷ್ಟು ಚಾರ್ಜ್ ಆಗುತ್ತದೆ.

chetak-c25-surprise-early-bird-offer-4299-off-for-the-first-10000-customers

ಈ ಸ್ಕೂಟರ್ ಮೊದಲ ಬಾರಿಯ EV ಖರೀದಿದಾರರು ಮತ್ತು ದೈನಂದಿನ ನಗರ ಪ್ರಯಾಣಕ್ಕಾಗಿ ತಮ್ಮ ಮನೆಗಳಿಗೆ ಎರಡನೇ ಸ್ಕೂಟರ್ ಅನ್ನು ಖರೀದಿಸಲು ನೋಡುತ್ತಿರುವವರಿಗೆ ಬಲವಾದ ಆಯ್ಕೆಯಾಗಿದೆ. ಬಜಾಜ್‌ನ ವ್ಯಾಪಕ ಸರ್ವಿಸ್ ನೆಟ್‌ವರ್ಕ್‌ನಿಂದ ಬೆಂಬಲಿತವಾದ C25, ಯಾವುದೇ ಸಮಸ್ಯೆ ಬಂದರೂ ತ್ವರಿತ ಪರಿಹಾರವನ್ನು ಪಡೆಯಬಹುದು ಎಂದು ಬಜಾಜ್ ಭರವಸೆ ನೀಡಿದೆ.

ಸುಲಭ ಸಿಟಿ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ ಚೇತಕ್ C25, ಬ್ರಾಂಡ್‌ಗೆ ಸಣ್ಣ ಸ್ಕೂಟರ್ ಆಗಿದ್ದರೂ ದೃಢತೆ ಮತ್ತು ವಿಶ್ವಾಸಾರ್ಹತೆಯಲ್ಲಿ ದೊಡ್ಡದಾಗಿದೆ. ಇದು ಹಗುರವಾದ, ಸುಲಭವಾದ ಸವಾರಿ ಅನುಭವವನ್ನು ನೀಡುತ್ತದೆ, ದೈನಂದಿನ ಪ್ರಯಾಣವನ್ನು ಇನ್ನಷ್ಟು ಸುಲಭವಾಗಿಸುತ್ತದೆ. ಇದರ ಕಡಿಮೆ ಬೆಲೆ, ಆಕರ್ಷಕ ವಿನ್ಯಾಸ, ಆಧುನಿಕ ಫಿಚರ್ಸ್ ಎಂಥವರನ್ನೂ ಸೆಳೆಯಲಿದೆ ಎಂದು ಬಜಾಜ್ ಹೇಳಿದೆ.

More from DriveSpark

Article Published On: Tuesday, January 20, 2026, 10:20 [IST]
English summary
Chetak c25 surprise early bird offer 4299 off for the first 10000 customers
Read more on bajaj india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+