Honda: ಸ್ಟೈಲಿಶ್ ಸ್ಕೂಟರ್‌ಯಿದು.. ಯುವಕರು ಮೆಚ್ಚಿದ್ದಾರೆ, ಬರೀ 70,000 ರೂಪಾಯಿ.. 50 Km ಮೈಲೇಜ್!

ಹೋಂಡಾ ಡಿಯೋ 110 (Honda Dio 110) ಜನಪ್ರಿಯ ಸ್ಕೂಟರ್ ಎಂದೇ ಹೆಸರುವಾಸಿಯಾಯಾಗಿದೆ. ಇದು ಸಖತ್ ಸ್ಟೈಲಿಶ್ ಲುಕ್ ಹೊಂದಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ ಯುವ ಗ್ರಾಹಕರು ಕೂಡ ಮೆಚ್ಚಿಕೊಂಡಿದ್ದಾರೆ. ನೀವು ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಡಿಯೋ 110' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ನೂತನ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಬೆಲೆ & ರೂಪಾಂತರಗಳು (Price & Variants):

ಹೊಚ್ಚ ಹೊಸ 'ಹೋಂಡಾ ಡಿಯೋ 110' ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಕನಿಷ್ಠ ರೂ.70,159 ಹಾಗೂ ಗರಿಷ್ಠ ರೂ.81,836 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಸ್ಟ್ಯಾಂಡರ್ಡ್ (Standard) ಮತ್ತು ಡಿಎಲ್ಎಕ್ಸ್ (DLX) ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಿದೆ.

Honda Dio 110 Scooter Price Design Colours Engine Mileage Features And All Details

ವಿನ್ಯಾಸ & ಬಣ್ಣಗಳು (Design & Colours):

ಈ ಸ್ಕೂಟರ್‌ನ್ನು ಯುವಕರಿಗಾಗಿ ವಿನ್ಯಾಸಗೊಳಿಸಿದಂತೆ ಭಾಸವಾಗುತ್ತದೆ. ತುಂಬಾ ಚೆನ್ನಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ ಹಾಗೂ ಎಲ್ಇಡಿ ಟೈಲ್ ಲ್ಯಾಂಪ್‌ನ್ನು ಪಡೆದಿದೆ. ಇಂಪೀರಿಯಲ್ ರೆಡ್ ಮೆಟಾಲಿಕ್, ಮ್ಯಾಟ್ ಮಾರ್ವೆಲ್ ಬ್ಲೂ, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಹಾಗೂ ಪರ್ಲ್ ಇಗ್ನಿಯಸ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.

ಸುತ್ತಳತೆ (Dimension):

ಇದು ಸಾಕಷ್ಟು ವಿಶಾಲ ಗಾತ್ರದಲ್ಲಿದೆ. 1,808 ಮಿ.ಮೀ ಉದ್ದ, 677 ಮಿ.ಮೀ ಅಗಲ ಮತ್ತು 1,151 ಮಿ.ಮೀ ಎತ್ತರವಿದೆ. 160 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,260 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ. ಸರಿ ಸುಮಾರು 106 ಕೆಜಿ ತೂಕವಿದೆ.

Honda Dio 110 Scooter Price Design Colours Engine Mileage Features And All Details

ಕಾರ್ಯಕ್ಷಮತೆ (Performance):

ನೂತನ 'ಹೋಂಡಾ ಡಿಯೋ 110' ಸ್ಕೂಟರ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 109.51-ಸಿಸಿ 4-ಸ್ಟ್ರೋಕ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 8,000 ಆರ್‌ಪಿಎಂನಲ್ಲಿ 7.85 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 5,250 ಆರ್‌ಪಿಎಂನಲ್ಲಿ 9.03 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಮೈಲೇಜ್ (Mileage):

ಈ ಸ್ಕೂಟರ್‌ ಕಡಿಮೆ ನಿರ್ವಹಣಾ ವೆಚ್ಚವನ್ನು ಒಳಗೊಂಡಿದ್ದು, ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. 1 ಲೀಟರ್‌ನಷ್ಟು ಪೆಟ್ರೋಲ್ ಹಾಕಿಸಿದರೆ, 50 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 5.3 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ. ಸರಿ ಸುಮಾರು 250 ಕಿಲೋಮೀಟರ್‌ವರೆಗೆ ಕ್ರಮಿಸುತ್ತದೆ.

Honda Dio 110 Scooter Price Design Colours Engine Mileage Features And All Details

ವೈಶಿಷ್ಟ್ಯಗಳು (Features):

ಇದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೆಚ್-ಸ್ಮಾರ್ಟ್ ಟೆಕ್ನಾಲಜಿ, 15ಡಬ್ಲ್ಯೂ ಯುಎಸ್‌‍ಬಿ-ಸಿ ಚಾರ್ಜಿಂಗ್ ಪೋರ್ಟ್ ಹಾಗೂ ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. 83 ಕೆಎಂಪಿಎಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 9 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಸೀಟ್ ಎತ್ತರವು 765 ಮಿ.ಮೀ ಇದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup And Braking System):

ಹೊಸ 'ಹೋಂಡಾ ಡಿಯೋ 110' ಸ್ಕೂಟರ್ ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಸಿಬಿಎಸ್ (ಕಾಂಬಿ ಬ್ರೇಕ್ ಸಿಸ್ಟಮ್) ಮತ್ತು ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ. 12-ಇಂಚಿನ ಅಲಾಯ್ ವೀಲ್‌ಗಳು & ಟ್ಯೂಬ್‌ಲೆಸ್ ಟೈರ್‌ಗಳನ್ನು ಒಳಗೊಂಡಿದೆ.

ಪ್ರತಿಸ್ಪರ್ಧಿ ಸ್ಕೂಟರ್‌ಗಳು (Rival Scooters):

ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಬಹುಮುಖ್ಯವಾಗಿ ಟಿವಿಎಸ್ ಜೂಪಿಟರ್ 110 (TVS Jupiter 110), ಹೀರೋ ಜೂಮ್ 110 (Hero Xoom 110), ಹೀರೋ ಪ್ಲೆಷರ್ ಪ್ಲಸ್ (Hero Pleasure Plus) ಹಾಗೂ ಟಿವಿಎಸ್ ಸ್ಕೂಟಿ ಜೆಸ್ಟ್ 110 (TVS Scooty Zest 110) ಸ್ಕೂಟರ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

Article Published On: Monday, January 19, 2026, 14:07 [IST]
English summary
Honda dio 110 scooter price design colours engine mileage features and all details
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+