Bajaj: ಬಡವರು ಕೂಡ ಖರೀದಿಸುವ ಬೆಲೆಯಲ್ಲಿ ಸ್ಟೈಲಿಷ್ ಬಜಾಜ್ ಬೈಕ್ ಬಿಡುಗಡೆ: ಬೆಲೆ ಇಷ್ಟೇನಾ?

ಪ್ರಮುಖ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಪಲ್ಸರ್ (Bajaj Pulsar), ಇಂದು ತನ್ನ ಜನಪ್ರಿಯ ಪಲ್ಸರ್ 125 (Pulsar 125) ಅನ್ನು ಹೊಸ ಅಪ್‌ಡೇಟ್‌ನೊಂದಿಗೆ ಬಿಡುಗಡೆ ಮಾಡಿದೆ. ಹೊಸ LED ಹೆಡ್‌ಲ್ಯಾಂಪ್ ಮತ್ತು LED ಬ್ಲಿಂಕರ್‌ಗಳನ್ನು ಪರಿಚಯಿಸಿದೆ. ಜೊತೆಗೆ ರಿಫ್ರೆಶ್ ಮಾಡಿದ ಬಣ್ಣಗಳು ಮತ್ತು ಗ್ರಾಫಿಕ್ಸ್ ಜೊತೆಗೆ ಬೈಕ್ ಇನ್ನಷ್ಟು ಸ್ಪೋರ್ಟಿ ಲುಕ್ ಪಡೆದುಕೊಂಡಿದೆ. ಒಟ್ಟಾರೆ ನವೀಕರಿಸಿದ ಪಲ್ಸರ್ 125 ಅತ್ಯುತ್ತಮವಾದ ವಿನ್ಯಾಸವನ್ನು ಪಡೆದುಕೊಂಡಿದ್ದು, ತನ್ನ ವಿಭಾಗದಲ್ಲಿಯೇ ಸ್ಟೈಲಿಷ್ ಮೋಟಾರ್‌ಸೈಕಲ್ ಆಗಿ ಹೊರಹೊಮ್ಮಿದೆ.

LED ಲೈಟ್ ಸೇರ್ಪಡೆಯು ಮೋಟಾರ್‌ಸೈಕಲ್‌ನ ಲುಕ್‌ನ್ನು ತೀಕ್ಷ್ಣಗೊಳಿಸುವುದಲ್ಲದೆ, ಗೋಚರತೆ ಮತ್ತು ಸವಾರರ ಆತ್ಮವಿಶ್ವಾಸವನ್ನು ಸುಧಾರಿಸುತ್ತದೆ. ಸ್ಪೋರ್ಟಿ ಡಿಸೈನ್‌ನೊಂದಿಗೆ ಉತ್ತಮ ಪರ್ಫಾಮೆನ್ಸ್ ನೀಡುವ ಮೂಲಕ ಪಲ್ಸರ್‌ನ ಖ್ಯಾತಿ ಮತ್ತಷ್ಟು ಬಲಪಡಿಸಿಕೊಂಡಿದೆ. ಜತೆಗೆ ಹೊಸ ಪಲ್ಸರ್ 125 ಮಸ್ಕುಲರ್ ನೋಟ ಮತ್ತು ಆಕ್ರಮಣಕಾರಿ ಬಾಡಿ ಲೈನ್‌ಗಳೊಂದಿಗೆ ಹೆಚ್ಚು ಕಮಾಂಡಿಂಗ್ ರಸ್ತೆ ಉಪಸ್ಥಿತಿಯನ್ನು ನೀಡುತ್ತದೆ ಎಂದು ಬಜಾಜ್ ಹೇಳಿದೆ.

new-2026-pulsar-125-upgraded-with-new-led-head-lamps

ಹಳೆಯ ಮಾಡೆಲ್‌ನಲ್ಲಿ ಇದ್ದ ಅದೇ ಫುಲ್ ಡಿಜಿಟಲ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್‌ನಂತಹ ವೈಶಿಷ್ಟ್ಯಗಳನ್ನು ಯಥಾಸ್ಥಿತಿಯಲ್ಲಿ ಮುಂದಿವರಿಸಲಾಗಿದೆ. 17 - ಇಂಚಿನ ಅಲಾಯ್ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಸ್ಪೋರ್ಟಿ ಲುಕ್‌ಗಾಗಿ ಉಳಿಸಿಕೊಳ್ಳಲಾಗಿದೆ. 11.5 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಅದರ ಡೆಫಿನಿಟಿಲಿ ಡೇರಿಂಗ್ ಆಕರ್ಷಣೆಯನ್ನು ಮತ್ತಷ್ಟು ಬಲಪಡಿಸುವ ಪಲ್ಸರ್ 125 ಈಗ ಕಾರ್ಬನ್ ಫೈಬರ್ ಸಿಂಗಲ್ ಸೀಟ್ ಮತ್ತು ಕಾರ್ಬನ್ ಫೈಬರ್ ಸ್ಪ್ಲಿಟ್ ಸೀಟ್ ವೇರಿಯೆಂಟ್‌ಗಳಲ್ಲಿ ನವೀಕರಿಸಿದ ಬಣ್ಣ ಮತ್ತು ಗ್ರಾಫಿಕ್ ಹೊಂದಿದೆ. ರಿಫ್ರೆಶ್ ಮಾಡಿದ ಹೊಸ ಬಣ್ಣಗಳಲ್ಲಿ ಬ್ಲಾಕ್ ಗ್ರೇ, ಬ್ಲಾಕ್ ರೇಸಿಂಗ್ ರೆಡ್, ಬ್ಲಾಕ್ ಸಯಾನ್ ಬ್ಲೂ ಮತ್ತು ಟ್ಯಾನ್ ಬೀಜ್‌ನೊಂದಿಗೆ ರೇಸಿಂಗ್ ರೆಡ್ ಬಣ್ಣಗಳು ಸೇರಿವೆ. ಪ್ರತಿಯೊಂದೂ ಬೈಕ್‌ನ ಸ್ಪೋರ್ಟಿ ಲುಕ್‌ನ್ನು ವರ್ಧಿಸಲು ವಿನ್ಯಾಸಗೊಳಿಸಲಾಗಿದೆ.

new-2026-pulsar-125-upgraded-with-new-led-head-lamps

ಈ ನವೀಕರಣಗಳೊಂದಿಗೆ, ಪಲ್ಸರ್ 125 ತನ್ನ ಸಾಟಿಯಿಲ್ಲದ ಪರ್ಫಾಮೆನ್ಸ್, ದೈನಂದಿನ ಪ್ರಾಯೋಗಿಕತೆ ಮತ್ತು ನಗರದ ಬೀದಿಗಳಲ್ಲಿ ಎದ್ದು ಕಾಣುವ ಸ್ಪೋರ್ಟಿ ಲುಕ್, ವೈಶಿಷ್ಟ್ಯ-ಭರಿತ ಮೋಟಾರ್‌ಸೈಕಲ್ ಅನ್ನು ಬಯಸುವ ಸವಾರರಿಗೆ ಬೆಸ್ಟ್ ಆಯ್ಕೆಯ ಮೋಟಾರ್‌ಸೈಕಲ್ ಆಗಿದೆ. ನವೀಕರಿಸಿದ ಹೊಸ ಪಲ್ಸರ್ 125 ದೇಶಾದ್ಯಂತ ಬಜಾಜ್ ಆಟೋ ಡೀಲರ್‌ಶಿಪ್‌ಗಳಲ್ಲಿ ಈಗ ಖರೀದಗೆ ಲಭ್ಯವಿದೆ.

ಹೊಸ LED ಹೆಡ್‌ಲ್ಯಾಂಪ್ ಮತ್ತು LED ಬ್ಲಿಂಕರ್‌ಗಳು ರಿಫ್ರೆಶ್ ಮಾಡಿದ ಬಣ್ಣಗಳು ಮತ್ತು ಗ್ರಾಫಿಕ್ಸ್‌ನೊಂದಿಗೆ ಜೋಡಿಸಲ್ಪಟ್ಟ ಹೊಸ ಪಲ್ಸರ್ 125 ಬೆಲೆಗಳನ್ನು ನೋಡುವುದಾದ್ರೆ, ಕಾರ್ಬನ್ ಡಿಸ್ಕ್ ಸಿಂಗಲ್ ಸೀಟ್ LED ಹೊಂದಿರುವ ಮಾಡಲ್ ಬೆಲೆಯು ರೂ. 89,910 (ಎಕ್ಸ್-ಶೋರೂಂ) ಮತ್ತು ಕಾರ್ಬನ್ ಡಿಸ್ಕ್ ಸ್ಪ್ಲಿಟ್ ಸೀಟ್ LED ಹೊಂದಿರುವ ಬೈಕ್ ಬೆಲೆ ರೂ. 92,046 (ಎಕ್ಸ್-ಶೋರೂಂ) ಇದೆ.

new-2026-pulsar-125-upgraded-with-new-led-head-lamps

ಈ ಬೈಕ್ ಎಂಜಿನ್ ವಿಷಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಅದೇ 124.4-ಸಿಸಿ 4-ಸ್ಟ್ರೋಕ್ ಪೆಟ್ರೋಲ್ ಎಂಜಿನ್‌ ಅನ್ನು ಮುಂದುವರೆಸಲಾಗಿದೆ. ಈ ಎಂಜಿನ್ 11.8 ಪಿಎಸ್ ಪವರ್ ಮತ್ತು 10.8 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 55 ಕಿ.ಮೀವರೆಗೆ ಮೈಲೇಜ್‌ನ್ನು ನೀಡಬಹುದು ಎಂದು ಹೇಳಲಾಗಿದೆ.

ಹೊಸ ಬಜಾಜ್ ಪಲ್ಸರ್ 125 ಮೋಟಾರ್‌ಸೈಕಲ್‌ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಗ್ಯಾಸ್-ಚಾರ್ಜ್ಡ್ ಟ್ವಿನ್ ಸ್ಪ್ರಿಂಗ್‌ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ವೇರಿಯೆಂಟ್‌ಗೆ ಅನುಗುಣವಾಗಿ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವು ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸುತ್ತವೆ.

More from DriveSpark

Article Published On: Tuesday, January 20, 2026, 16:48 [IST]
English summary
New 2026 pulsar 125 upgraded with new led head lamps
Read more on bajaj india new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+