Suzuki: 95 ಕಿ.ಮೀ ಓಡುತ್ತೆ.. ಲಕ್ಷುರಿ ಫೀಚರ್ಸ್! ಹೊಸ ಸುಜುಕಿ ಆಕ್ಸೆಸ್ ಇ-ಸ್ಕೂಟರ್‌ನ ಆನ್-ರೋಡ್ ದರವೆಷ್ಟು.. EMI ಏನು?

ಈಚೆಗೆ ಹೊಚ್ಚ ಹೊಸ ಸುಜುಕಿ ಇ ಆಕ್ಸೆಸ್ (Suzuki e Access) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆಗೊಳಿಸಲಾಗಿತು. ಇದು ರೂ.1.88 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಬುಕ್ಕಿಂಗ್‌ನ್ನು ಸಹ ತೆರೆಯಾಗಲಿದೆ. ಆಸಕ್ತರು ಹತ್ತಿರದ ಶೋರೂಂ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ನೀಡಿ, ಕಾಯ್ದಿರಬಹುದು. ನೀವು ನೂತನ ಇ-ಸ್ಕೂಟರ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಸುಜುಕಿ ಇ ಆಕ್ಸೆಸ್' ಬೆಸ್ಟ್ ಚಾಯ್ಸ್ ಆಗಲಿದೆ. ನಾವಿಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ನ ಆನ್-ರೋಡ್ ದರ (On-Road Price), ಇಎಂಐ (Emi) ಹಾಗೂ ವಿಶೇಷತೆಗಳ (Specs) ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಇದು ಬೆಂಗಳೂರು ನಗರದಲ್ಲಿ ರೂ.1.95 ಲಕ್ಷವರೆಗೆ ಆನ್-ರೋಡ್ ದರವನ್ನು ಪಡೆದಿದೆ. ರೂ.50,000 ಡೌನ್-ಪೇಮೆಂಟ್ ಕಟ್ಟಿ ಕೊಂಡುಕೊಂಡರೆ, ರೂ.1.45 ಲಕ್ಷವರೆಗೆ ಸಾಲವಿರುತ್ತದೆ. ಅದಕ್ಕೆ ಶೇಕಡ 8 ಬಡ್ಡಿ ದರದಲ್ಲಿ 3 ವರ್ಷದ ಅವಧಿಗೆ ಮಾಸಿಕ ರೂ.4,500 ವರೆಗೆ ಇಎಂಐ ಕಟ್ಟಬೇಕು. ಅತಿ ಶೀಘ್ರದಲ್ಲೇ ವಿತರಣೆಗಳು ಶುರುವಾಗಲಿದೆ.

Suzuki e Access On Road Price Emi Range And Features Details

ಹೊಸ 'ಸುಜುಕಿ ಇ ಆಕ್ಸೆಸ್' ಸಖತ್ ಸ್ಟೈಲಿಶ್ ಆಗಿರುವ ವಿನ್ಯಾಸವನ್ನು ಒಳಗೊಂಡಿದೆ. ಉತ್ತಮವಾದ ಎಲ್‌ಇಡಿ ಹೆಡ್‌ಲೈಟ್‌, ಎಲ್‌ಇಡಿ ಇಂಡಿಕೇಟರ್‌ಗಳು, ಅಲಾಯ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. ಜೊತೆಗಿದು ಮೆಟಾಲಿಕ್ ಮ್ಯಾಟ್ ಸ್ಟೆಲ್ಲಾರ್ ಬ್ಲೂ ಹಾಗೂ ಮೆಟಾಲಿಕ್ ಮ್ಯಾಟ್ ಫೈಬ್ರೊಯಿನ್ ಗ್ರೇ ಒಳಗೊಂಡಂತೆ ನಾನಾ ಬಣ್ಣಗಳೊಂದಿಗೂ ಲಭ್ಯವಿದೆ. 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ & 1,305 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 3.07 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 95 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 71 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಇಕೋ, ರೈಡ್ ಎ ಮತ್ತು ರೈಡ್ ಬಿ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

Suzuki e Access On Road Price Emi Range And Features Details

ಇದರಲ್ಲಿ ಬಳಸಿರುವ ಎಲೆಕ್ಟ್ರಿಕ್ ಮೋಟಾರ್, 4.1 ಕೆಡಬ್ಲ್ಯೂ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 15 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಅದೇ ರೀತಿಯಲ್ಲಿ ನೂತನ 'ಸುಜುಕಿ ಇ ಆಕ್ಸೆಸ್'ನಲ್ಲಿರುವ ಬ್ಯಾಟರಿ ಪ್ಯಾಕ್, ಪೋರ್ಟಬಲ್ ಚಾರ್ಜರ್‌ನ್ನು ಉಪಯೋಗಿಸಿದಾಗ ಸರಿ ಸುಮಾರು 6 ಗಂಟೆ 20 ನಿಮಿಷಗಳಲ್ಲಿ ಶೇಕಡ 0 ರಿಂದ 100% ಚಾರ್ಜ್ ಆಗುತ್ತದೆ.

ಈ ಸ್ಕೂಟರ್ 4.2-ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ, ರಿಮೋಟ್ ಸ್ಟಾರ್ಟ್, ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್ ಮತ್ತು ಸುಜುಕಿ ರೈಡ್ ಕನೆಕ್ಟ್ ಆಪ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 17 ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್‌ನ್ನು ಪಡೆದಿದೆ. ಬರೋಬ್ಬರಿ 122 ಕೆಜಿ ತೂಕವಿದೆ. ಸೀಟ್ ಎತ್ತರವು 765 ಎಂಎಂ ಇದೆ.

Suzuki e Access On Road Price Emi Range And Features Details

ನೂತನ 'ಸುಜುಕಿ ಇ ಆಕ್ಸೆಸ್' ಎಲೆಕ್ಟ್ರಿಕ್ ಸ್ಕೂಟರ್ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಸವಾರರಿಗೂ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಸ್ವಿಂಗರ್ಮ್ ಮೌಂಟೆಡ್ ಮಾನೋಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಹಾಗೆಯೇ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಇದಕ್ಕೆ ಹಲವು ಪ್ರತಿಸ್ಪರ್ಧಿಗಳಿವೆ. ಓಲಾ ಎಸ್1 ಪ್ರೊ (Ola S1 Pro), ಟಿವಿಎಸ್ ಐಕ್ಯೂಬ್ (TVS iQube), ಟಿವಿಎಸ್ ಆರ್ಬಿಟರ್ (TVS Orbiter), ಎಥರ್ ರಿಜ್ಟಾ ಎಥರ್ ರಿಜ್ಟಾ (Ather Rizta) ಹಾಗೂ ಬಜಾಜ್ ಚೇತಕ್ (Bajaj Chetak) ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

ನಿಮ್ಮ ಗಮನಕ್ಕೆ.. ಈ ಸ್ಕೂಟರ್ ಆನ್-ರೋಡ್ ದರ ಹಾಗೂ ಇಎಂಐ ದರಗಳು ನಗರದಿಂದ ನಗರಕ್ಕೆ ಬೇರೆಯಾಗಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

More from DriveSpark

Article Published On: Tuesday, January 13, 2026, 17:50 [IST]
English summary
Suzuki e access on road price emi range and features details
Read more on suzuki motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+