ಪವರ್ ವಿತ್ ಮೈಲೇಜ್; ಅಗ್ಗದ ಬಜಾಜ್ ಡಿಸ್ಕವರ್ ಲಾಂಚ್

By Nagaraja

ದೇಶದ ದ್ವಿಚಕ್ರ ಪ್ರಯಾಣ ಮಾರುಕಟ್ಟೆಗೆ ಅಗ್ಗದ ಬೈಕ್ ಪರಿಚಯಿಸುವುದರಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ 3ನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಬಜಾಜ್ ಆಟೋ, ಭಾರತೀಯ ಮಾರುಕಟ್ಟೆಗೆ ನೂತನ 'ಡಿಸ್ಕವರ್ 100ಎಂ' ಬೈಕನ್ನು ಲಾಂಚ್ ಮಾಡಿದೆ.

ನಿಮಗೆಲ್ಲರಿಗೂ ತಿಳಿದಿದ್ದ ಹಾಗೆ ಬಜಾಜ್ ಡಿಸ್ಕವರ್ 100 ಹಾಗೂ ಡಿಸ್ಕವರ್ 100ಟಿ ಬೈಕ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಇವೆಡರ ನಡುವೆ ಗುರುತಿಸಿಕೊಳ್ಳಲಿರುವ ನೂತನ ಬಜಾಜ್ ಡಿಸ್ಕವರ್ 100ಎಂ ಬೈಕ್, ಶಕ್ತಿಶಾಲಿ ಜತೆ ಗರಿಷ್ಠ ಇಂಧನ ಕ್ಷಮತೆ ನೀಡುವಲ್ಲಿ ಯಶಸ್ವಿಯಾಗಲಿದೆ.

ಸಾಮಾನ್ಯವಾಗಿ 100ಸಿಸಿ ಬೈಕ್‌ಗಳು 8 ಪಿಎಸ್ ಪವರ್ ಉತ್ಪಾದಿಸುತ್ತದೆ. ಆದರೆ ಇವೆಲ್ಲದಕ್ಕಿಂತಲೂ ಭಿನ್ನವಾಗಿರುವ ಡಿಸ್ಕವರ್ 100ಎಂ, ಪವರ್‌ಫುಲ್ 9.3 ಪಿಎಸ್ ಪವರ್ ಉತ್ಪಾದಿಸುತ್ತಿರುವುದು ಹೆಚ್ಚು ನಿರ್ವಹಣೆಯನ್ನು ಖಾತ್ರಿಪಡಿಸಲಿದೆ. ಅಷ್ಟಕ್ಕೂ ಬಜಾಜ್ ಡಿಸ್ಕವರ್ ಬೆಲೆ, ಮೈಲೇಜ್, ತಾಂತ್ರಿಕತೆ ಹಾಗೂ ಇತರ ವೈಶಿಷ್ಟ್ಯಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಎಂಜಿನ್

ಎಂಜಿನ್

ನೂತನ ಬಜಾಜ್ ಡಿಸ್ಕವರ್ 100ಎಂ 4 ವಾಲ್ವೆ ಡಿಟಿಎಸ್-ಐ (DTS-i) ತಂತ್ರಗಾರಿಕೆಯಿಂದ ನಿಯಂತ್ರಿಸಲ್ಪಡಲಿದೆ. ಇದು 9.3 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮೈಲೇಜ್

ಮೈಲೇಜ್

ಬಜಾಜ್‌ನಿಂದ ಬಿಡುಗಡೆಗೊಂಡಿರುವ ನೂತನ ಡಿಸ್ಕವರ್ 100ಎಂ ಎಷ್ಟು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ? ಹೌದು, ಕಂಪನಿಯ ಪ್ರಕಾರ ಇದು ಪ್ರತಿ ಲೀಟರ್‌ಗೆ ಬರೋಬ್ಬರಿ 84 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಬಜಾಜ್ ಡಿಸ್ಕವರ್ 100ಎಂ ಲಾಂಚ್

ಮುಂದುವರಿದ ತಂತ್ರಜ್ಞಾನ, ಗರಿಷ್ಠ ಮೈಲೇಜ್, ಶ್ರೇಷ್ಠ ಮಟ್ಟದ ಶಕ್ತಿ, ಅತ್ಯುತ್ತಮ ಸ್ಪೀಡ್ ಮತ್ತು ಅದ್ಭುತ ವೈಶಿಷ್ಟ್ಯಗಳು ನೂತನ ಬಜಾಜ್ ಡಿಸ್ಕವರ್ 100ಎಂ ಆವೃತ್ತಿಯ ವಿಶೇಷತೆಯಾಗಿದೆ.

ಬಜಾಜ್ ಡಿಸ್ಕವರ್ 100ಎಂ ಲಾಂಚ್

ಮುಂದುವರಿದ ತಂತ್ರಜ್ಞಾನ

ವಿಶ್ವದ ಮೊದಲ 4 ವಾಲ್ವೆ ಡಿಟಿಎಸ್-ಐ ಎಂಜಿನ್

ಅಮೇಜಿಂಗ್ ಮೈಲೇಜ್

ಸಿಎಂವಿಆರ್ ಮೈಲೇಜ್ 84 kmpl

ಬಜಾಜ್ ಡಿಸ್ಕವರ್ 100ಎಂ ಲಾಂಚ್

ಗ್ರೇಟ್ ಪವರ್

ಕ್ಲಾಸ್ ಲೀಡಿಂಗ್ 9.3 ಪಿಎಸ್ ಪವರ್

ಕ್ಲಾಸ್ ಲೀಡಿಂಗ್ 9.02 ಎನ್‌ಎಂ ಟಾರ್ಕ್

ಹೈ ಪವರ್ ವೇಟ್ ರೇಷಿಯೊ (82ಪಿಎಸ್/ಟನ್)

ಎಕ್ಸೆಲೆಂಟ್ ಸ್ಪೀಡ್

ಗರಿಷ್ಠ ವೇಗತೆ ಪ್ರತಿ ಗಂಟೆಗೆ 95 ಕೀ.ಮೀ.

ಅದ್ಭುತ ವೈಶಿಷ್ಟ್ಯಗಳು

ಅದ್ಭುತ ವೈಶಿಷ್ಟ್ಯಗಳು

  • ಸ್ಟಾಂಡರ್ಡ್ ಎಲೆಕ್ಟ್ರಿಕ್ ಸ್ಟಾರ್ಟ್
  • ಗ್ಯಾಸ್ ತುಂಬಿದ ನೈಟ್ರಾಕ್ಸ್ ಸಸ್ಪೆಷನ್
  • ಕಡಿಮೆ ನಿರ್ವಹಣಾ ವೆಚ್ಚದ ಬ್ಯಾಟರಿ
  • ಪೆಟಲ್ ಡಿಸ್ಕ್ ಬ್ರೇಕ್
  • ಪ್ರೀಮಿಯಂ ಅಲ್ಯೂಮಿನಿಯಂ ಸೈಡ್ ಸೆಟ್
  • ಬೆಲೆ ಹಾಗೂ ಬಣ್ಣಗಳು

    ಬೆಲೆ ಹಾಗೂ ಬಣ್ಣಗಳು

    ಇನ್ನು ನೂತನ ಬಜಾಜ್ ಡಿಸ್ಕವರ್ ದೆಹಲಿ ಎಕ್ಸ್ ಶೋ ರೂಂ ದರ 45,996 ರು.ಗಳಾಗಿವೆ. ಹಾಗೆಯೇ ಐದು ವರ್ಣಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ ಫ್ಲೇಮ್ ರೆಡ್, ಬ್ರಿಲಿಯಂಟ್ ಬ್ಲೂ, ಮಿಡ್‌ನೈಟ್ ಬ್ಲ್ಯಾಕ್ (ರೆಡ್ ಡೆಕಾಲ್ಸ್), ಮಿಡ್‌ನೈಟ್ ಬ್ಲ್ಯಾಕ್ (ಬ್ಲೂ ಡೆಕಾಲ್ಸ್) ಮತ್ತು ಮಿಡ್‌ನೈಟ್ ಬ್ಲ್ಯಾಕ್ (ಒಲೈವ್ ಡೆಕಾಲ್ಸ್)

    ತಂತ್ರಗಾರಿಕೆ

    ತಂತ್ರಗಾರಿಕೆ

    • ಎಂಜಿನ್: 4 ವಾಲ್ವೆ ಡಿಟಿಎಸ್‌-ಐ, 102 ಸಿಸಿ, 9.3 ಪಿಎಸ್ @ 8000 ಆರ್‌ಪಿಎಂ
    • ಇಗ್ನಿಷನ್ ಸಿಸ್ಟಂ: ಡಿಜಿಟಲ್ ಸಿಡಿಐ
    • ಚೋಕ್: ಆಟೋ
    • ಸ್ಟಾರ್ಟಿಂಗ್: ಎಲೆಕ್ಟ್ರಿಕ್ ಪ್ಲಸ್ ಕಿಕ್ ಸ್ಟಾರ್ಟ್
    • ಕ್ಲಚ್: ಮಲ್ಟಿ ಪ್ಲೇಟ್ ವೆಟ್ ಕ್ಲಚ್
    • ಟ್ರಾನ್ಸ್‌ಮಿಷನ್: 4 ಗೇರ್ (ಎಲ್ಲವೂ ಮೇಲ್ಗಡೆ)
    • ಇಂಧನ ಟ್ಯಾಂಕ್: 9.5 ಲೀಟರ್ (1.6 ಲೀಟರ್ ರಿಸರ್ವ್)
    • ವೀಲ್‌ಬೇಸ್: 1255 ಎಂಎಂ
    • ಸೀಟ್ ಎತ್ತರ: 795 ಎಂಎಂ
    • ಟರ್ನಿಂಗ್ ಸರ್ಕಲ್ ರೇಡಿಯಸ್: 1845 ಎಂಎಂ
    • ಗ್ರೌಂಡ್ ಕ್ಲಿಯರನ್ಸ್: 165 ಎಂಎಂ
    • ಗರಿಷ್ಠ ವೇಗತೆ: 95 km/h
    • ಬ್ಯಾಟರಿ: 12V 5Ah ಕಡಿಮೆ ನಿರ್ವಹಣಾ ವೆಚ್ಚ

More from DriveSpark

Article Published On: Wednesday, October 16, 2013, 5:03 [IST]
English summary
Bajaj Auto, the world’s 3rd largest motorcycle company, today launched a new 100cc bike – the Discover 100M. Powered by Bajaj’s patented 4-valve DTS-i technology, the bike provides an impressive 9.3 Ps of power, while still delivering unmatched fuel efficiency of 84 km/l (as per CMVR norms).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+