ಕಡಿಮೆ ಬೆಲೆಯ ಮೈಲೇಜ್ ಬೈಕ್ - ಡಿಸ್ಕವರ್ 125ಎಂ

By Nagaraja

ಇತ್ತೀಚೆಗಷ್ಟೇ ಬಜಾಜ್ ಡಿಸ್ಕವರ್ ಸಾಲಿಗೆ ಹೊಸ ಆತಿಥಿಯ ಪ್ರವೇಶವಾಗಿತ್ತು. ಅದುವೇ ಡಿಸ್ಕವರ್ 125ಎಂ. ಹೆಸರಲ್ಲೇ ಸೂಚಿಸಿರುವಂತೆಯೇ 'ಎಂ' ಮೈಲೇಜ್‌ನ ಸಂಕ್ಷಿಪ್ತ ರೂಪವಾಗಿದೆ. ಇದು ಸ್ಮರ್ದಾತ್ಮಕ ಬೆಲೆಗಳಲ್ಲಿ ಎಂಟ್ರಿ ಕೊಟ್ಟಿರುವುದು ಇನ್ನು ವಿಶೇಷವಾಗಿದೆ.

ದೇಶದ ಅತ್ಯುತ್ತಮ 150ಸಿಸಿ ಮೈಲೇಜ್ ಬೈಕ್‌ಗಳು

125 ಸಿಸಿ ವಿಭಾಗದಲ್ಲಿ ಬಜಾಜ್ ಡಿಸ್ಕವರ್ ರೇಂಜ್ ಬೈಕ್‌ಗಳು ಈಗಾಗಲೇ ರಾರಾಜಿಸುತ್ತಿರುವಾಗ ಈ ಹೊಸ ಮಾದರಿಯು ಏನು ಮೋಡಿ ಮಾಡಲಿದೆ ಅಂತೀರಾ? ಇದರ ಎಂಜಿನ್ ವೈಶಿಷ್ಟ್ಯವಾದರೂ ಏನು? ಇನ್ನಿತರ ಕುತೂಹಲಕಾರಿ ಮಾಹಿತಿಗಳಿಗಾಗಿ ಫೋಟೊ ಫೀಚರ್‌ನತ್ತ ಮುನ್ನಡೆಯಿರಿ...

ಕಡಿಮೆ ಬೆಲೆಯ ಮೈಲೇಜ್ ಬೈಕ್ - ಡಿಸ್ಕವರ್ 125ಎಂ

ಹಿಂದಿನ ಆವೃತ್ತಿಗಳಿಗೆ ಹೋಲಿಸಿದಾಗ ಸುಂದರವಾದ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಡಿಸ್ಕವರ್ 125 ಎಂ ಯಶಸ್ವಿಯಾಗಿದೆ. ಮೊದಲ ನೋಟದಲ್ಲಿ ಇದು ಭವಿಷ್ಯದಲ್ಲಿ ಡಿಸ್ಕವರ್ ರೇಂಜ್ ಬೈಕ್‌ಗಳನ್ನು ಮುನ್ನಡೆಸುವಂತಿದೆ.

ಕಡಿಮೆ ಬೆಲೆಯ ಮೈಲೇಜ್ ಬೈಕ್ - ಡಿಸ್ಕವರ್ 125ಎಂ

ಆಕರ್ಷಕ ಹೆಡ್‌ಲೈಟ್, ಸ್ಟೈಲಿಷ್ ಗ್ರಾಫಿಕ್ಸ್ ಜತೆ ಗ್ರಾಹಕ ಸ್ನೇಹಿ ಫೀಚರುಗಳು ಡಿಸ್ಕವರ್ ಬೈಕ್‌ನ ಅಂದತೆಯನ್ನು ಹೆಚ್ಚಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಎಂಜಿನ್..

ಎಂಜಿನ್..

ಇದು 124.5 ಸಿಸಿ ಸಿಂಗಲ್ ಸಿಲಿಂಡರ್, 4 ವಾಲ್ವೆ, ಏರ್ ಕೂಲ್ಡ್ ಮತ್ತು ಕಾರ್ಬೂರೇಟಡ್ ಡಿಟಿಎಸ್-ಐ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 11.3 ಬಿಎಚ್‌ಪಿ ಪವರ್ (10.8 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಫೈವ್ ಸ್ಪೀಡ್ ಟ್ರಾನ್ಸ್‌ಮಿಷನ್ ಇರಲಿದೆ.

ವೇಗತೆ

ವೇಗತೆ

ಪ್ರಸ್ತುತ ಗಾಡಿ ಗಂಟೆಗೆ ಗರಿಷ್ಠ 100 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಇಂಧನ ಟ್ಯಾಂಕ್...

ಇಂಧನ ಟ್ಯಾಂಕ್...

ನಿರ್ವಹಣಾ ಗಾಡಿಗಳನ್ನು ಹೋಲಿಸಿದರೆ ಬಜಾಜ್ ಡಿಸ್ಕವರ್ 125 ಎಂ ಸಣ್ಣದಾದ ಇಂಧನ ಟ್ಯಾಂಕ್ ಪಡೆದುಕೊಂಡಿದೆ. ಇದರಲ್ಲಿ 9.5 ಲೀಟರ್ ಇಂಧನ ಟ್ಯಾಂಕ್ ಇರಲಿದೆ.

ಮೈಲೇಜ್

ಮೈಲೇಜ್

ಹೆಸರಲ್ಲೇ ಮೈಲೇಜ್ ಬೈಕ್ ಎಂದೇ ಪರಿಗಣಿಸಲ್ಪಟ್ಟಿರುವ ಡಿಸ್ಕವರ್ 120ಎಂ, ಪ್ರತಿ ಲೀಟರ್‌ಗೆ 76 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಸ್ಟಾಂಡರ್ಡ್ ವೈಶಿಷ್ಟ್ಯಗಳು...

ಸ್ಟಾಂಡರ್ಡ್ ವೈಶಿಷ್ಟ್ಯಗಳು...

  • ಮುಂಭಾಗ ಹಾಗೂ ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್,
  • ಎಲೆಕ್ಟ್ರಿಕ್ ಸ್ಟಾರ್ಟರ್,
  • ಟೆನ್ ಸ್ಪೋಕ್ ಅಲಾಯ್ ವೀಲ್,
  • ಫ್ರಂಟ್ ಫಾರ್ಕ್ಸ್, ರಿಯರ್ ನಿಟ್ರಾಕ್ಸ್ ಟ್ವಿನ್ ಶಾಕ್ಸ್,
  • ಐಚ್ಛಿಕ 200 ಎಂಎಂ ಡಿಸ್ಕ್ ಬ್ರೇಕ್,
  • ಸೆಲ್ಫ್, ಕಿಕ್ ಸ್ಟಾರ್ಟ್
  • ಕಲರ್ ವೆರಿಯಂಟ್...

    ಕಲರ್ ವೆರಿಯಂಟ್...

    • ಎಲೆಕ್ಟ್ರಾನ್ ಬ್ಲ್ಯೂ,
    • ವೈನ್ ರೆಡ್,
    • ಕ್ಯಾರ್‌ಕೋಲ್ ಮ್ಯಾಗ್ನೆಟಾ,
    • ಕ್ಯಾರ್‌ಕೋಲ್ ಗ್ರೀನ್,
    • ಸಿಲ್ವರ್ ಬ್ಲೂ,
    • ಸಿಲ್ವರ್ ಗೋಲ್ಡ್
    • ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

      ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

      ರು. 48,000

      ಐಚ್ಛಿಕ ಡಿಸ್ಕ್ ಬ್ರೇಕ್ - ರು. 50,000

      ನಿಮ್ಮ ಮಾಹಿತಿಗಾಗಿ

      ನಿಮ್ಮ ಮಾಹಿತಿಗಾಗಿ

      ಡಿಸ್ಕವರ್ 100, 100ಎಂ, 100ಟಿ, 125, 125 ಟಿ ಮತ್ತು 125 ಎಸ್‌ಟಿ ಮಾದರಿಗಳ ಸಾಲಿಗೆ ಮಗದೊಂದು ವೆರಿಯಂಟ್ ಸೇರ್ಪಡೆಯಾಗಿದೆ. ಪ್ರಸ್ತುತ ಡಿಸ್ಕವರ್ 125ಎಂ ಆವೃತ್ತಿಯು 125 ಹಾಗೂ 125 ಟಿ ಮಾದರಿಗಳ ನಡುವೆ ಗುರುತಿಸಿಕೊಳ್ಳಲಿದೆ.

More from DriveSpark

Article Published On: Thursday, May 1, 2014, 7:01 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+