ಕೂಲ್ ಕ್ಯಾಪ್ಟನ್ ಧೋನಿ ಸಾರಥ್ಯದಲ್ಲಿ ಬೈಕ್ ಹಬ್ಬ

By Nagaraja

ಪ್ರತಿಷ್ಠಿತ 2014 ಇಂಡಿಯಾ ಬೈಕ್ ವೀಕ್ ಆರಂಭಗೊಳ್ಳಲು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿರುವಂತೆಯೇ ಭಾರತ ಕ್ರಿಕೆಟ್‌ನ ಜೀವಂತ ದಂತಕಥೆ ಕಾಪ್ಟನ್ ಕೂಲ್ ಮಹೀಂದ್ರ ಸಿಂಗ್ ಧೋನಿ, ದೇಶದ ಬೈಕ್ ಪ್ರಿಯರಿಗಾಗಿ ಹೊಸತಾದ ಬೈಕ್ ಹಬ್ಬವೊಂದನ್ನು ಘೋಷಿಸಿದ್ದಾರೆ.

ಬೈಕ್ ಫೇಸ್ಟಿವಲ್ ಆಫ್ ಇಂಡಿಯಾ (ಬಿಎಫ್‌ಐ) ಸ್ಪರ್ಧೆಯನ್ನು ಮಹೀಂದ್ರ ಸಿಂಗ್ ಧೋನಿ ನಡೆಸಿ ಕೊಡಲಿದ್ದಾರೆ. ಇದು ಇಂಡಿಯಾ ಬೈಕ್ ವೀಕ್ ಬಳಿಕ ದೇಶದಲ್ಲಿ ಉದಯಿಸಿರುವ ಎರಡನೇ ಬೈಕ್ ಹಬ್ಬವಾಗಿರಲಿದೆ.

ಬೈಕ್ ಫೇಸ್ಟಿವಲ್ ಆಫ್ ಇಂಡಿಯಾವು ಸುರಕ್ಷಿತ ಬೈಕಿಂಗನ್ನೂ ಪ್ರೋತ್ಸಾಹಿಸಲಿದೆ. ಈ ನಿಟ್ಟಿನಲ್ಲಿ 'ಸೇಫ್ಟಿ ರೈಡ್' ಎಂಬ ವಿಶೇಷ ರಾಷ್ಟ್ರೀಯ ರಾಲಿ ಹಮ್ಮಿಕೊಳ್ಳಲಾಗುವುದು. ಮುಂಬರುವ ಫೆಬ್ರವರಿ ತಿಂಗಳಲ್ಲಿ ಇಂಡಿಯಾ ಬೈಕ್ ಹಬ್ಬ ಆರಂಭವಾಗಲಿದೆ. ಈ ಸ್ಪರ್ಧೆ ದೇಶದೆಲ್ಲ ರಾಜ್ಯಗಳನ್ನು ತಲುಪಲಿದೆ. ಇದೇ ಸಂದರ್ಭದಲ್ಲಿ ಹೊಸ ಗಿನ್ನೆಸ್ ದಾಖಲೆಯೊಂದನ್ನು ಆಯೋಜಕರು ಗುರಿಯಿರಿಸಿಕೊಳ್ಳುತ್ತಿದ್ದಾರೆ.

ಬೈಕ್ ಫೇಸ್ಟಿವಲ್ ಆಫ್ ಇಂಡಿಯಾ

ಇದಾದ ಬಳಿಕ ಮಾರ್ಚ್ ತಿಂಗಳಲ್ಲಿ ದೇಶದ ಜನಪ್ರಿಯ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಬಿಎಫ್‌ಐ ರೇಸಿಂಗ್ ಚಾಂಪಿಯನ್‌ಶಿಪ್ ಆಯೋಜನೆಯಾಗಲಿದೆ.

ಬೈಕ್ ಫೇಸ್ಟಿವಲ್ ಆಫ್ ಇಂಡಿಯಾ

ಇದನ್ನು ಬಳಿಕ ಮೊಟೊಕ್ರಾಸ್ ಚಾಂಪಿಯನ್‌ಶಿಪ್ ಮತ್ತು ಟಿಎಸ್‌ಡಿ ರಾಲಿ ಚಾಂಪಿಯನ್‌ಶಿಪ್ ಹಿಂಬಾಲಿಸಲಿದೆ. ಇದು ಆಫ್ ರೋಡ್ ಎಡ್ಯೂರನ್ಸ್ ರೇಸ್ ಆಗಿರಲಿದೆ.

ಬೈಕ್ ಫೇಸ್ಟಿವಲ್ ಆಫ್ ಇಂಡಿಯಾ

ಪ್ರಸ್ತುತ ಬೈಕ್ ಹಬ್ಬವನ್ನು ಈವೆಂಟ್ ಕ್ಯಾಪಿಟಲ್ ಮತ್ತು ರಿತಿ ಸ್ಪೋರ್ಟ್ಸ್ ಆಯೋಜಿಸುತ್ತಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ದಕ್ಷಿಣ ಪೂರ್ವ ಏಷ್ಯಾದ ಅತಿದೊಡ್ಡ ಮೋಟಾರು ಸೈಕಲ್ ಹಬ್ಬವಾಗಿ ಪರಿವರ್ತಿಸುವುದು ಸಂಘಟಕರ ಗುರಿಯಾಗಿದೆ.

ಬೈಕ್ ಫೇಸ್ಟಿವಲ್ ಆಫ್ ಇಂಡಿಯಾ

ಅಂದ ಹಾಗೆ ಬೈಕ್ ಫೇಸ್ಟಿವಲ್ ಆಫ್ ಇಂಡಿಯಾದ ಮೊದಲ ಆವೃತ್ತಿಯ ಸ್ಪರ್ಧೆಯು ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ. ಈಗಾಗಲೇ ಮಹಿ ರೇಸಿಂಗ್ ತಂಡವನ್ನು ಹೊಂದಿರುವ ಧೋನಿ, ಮೋಟಾರು ಜಗತ್ತಿನಲ್ಲಿ ಅತೀವ ಕ್ರೇಜ್ ಹೊಂದಿದ್ದಾರೆ.

More from DriveSpark

Article Published On: Tuesday, January 14, 2014, 9:00 [IST]
English summary
With just a week left for the start of the 2014 edition of India Bike Week, at present India's only carnival dedicated to motorcycles, enthusiasts in India will be delighted to know that captain of the Indian cricket team, MS Dhoni has announced a second one, the Bike Festival of India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+