'ಡೈನಾಮಿಕ್ ಹೀರೊ' ಪ್ರಜ್ವಲ್ ಸ್ಟೈಲಲ್ಲಿ ಎಂಟ್ರಿ ಕೊಟ್ಟ ಹ್ಯೊಸಂಗ್

By Nagaraja

ಜಗತ್ತಿನ ಪ್ರಖ್ಯಾತ ಬೈಕುಗಳ ಪಟ್ಟಿಗೆ ಸೇರಿರುವ ಡಿಎಸ್‌ಕೆ ಹ್ಯೊಸಂಗ್ ಬೆಂಗಳೂರಿಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಹೌದು, ಗುರುವಾರ ನಡೆದ ಕಾರ್ಯಕ್ರಮದಲ್ಲಿ 'ಡೈನಾಮಿಕ್ ಸ್ಟಾರ್' ಪ್ರಜ್ವಲ್ ದೇವರಾಜ್ ಸಾರಥ್ಯದಲ್ಲಿ ಡಿಎಸ್‌ಕೆ ಹ್ಯೊಸಂಗ್ ಅಕ್ವಿಲಾ 250 ನಮ್ಮ ಬೆಂಗಳೂರಿಗೆ ಪ್ರವೇಶಿಸಿದೆ.

2014 ಆಟೋ ಎಕ್ಸ್ ಪೋ

ಈ ಮೂಲಕ ಬೆಂಗಳೂರಿನಲ್ಲಿ ಡಿಎಸ್‌ಕೆ ಹ್ಯೊಸಂಗ್ ಎರಡನೇ ಪ್ರದರ್ಶನ ಮಳಿಗೆಯಾದ 'ಸರ್‌ಫೆರ್ಸ್ ಆಟೋಮೋಟಿವ್' ತೆರೆದುಕೊಂಡಿದೆ. ಇದು ಜಯನಗರ ಒಂಬತ್ತನೇ ಬಡಾವಣೆಯಲ್ಲಿರುವ ಜವದೇವ ಆಸ್ಪೆತ್ರೆ ಸಮೀಪದ ಇನ್ನರ್ ರಿಂಗ್ ರೋಡ್‌ನ ಈಸ್ಟ್ ಎಂಡ್ ರೋಡ್‌ನಲ್ಲಿ ಸ್ಥಿತಗೊಂಡಿರಲಿದೆ. ಈ ಸಂದರ್ಭದಲ್ಲಿ ಡಿಎಸ್‌ಕೆ ಹ್ಯೊಸಂಗ್ ಮುಖ್ಯಸ್ಥ ಶಿರಿಷ್ ಕುಲಕರ್ಣಿ ಉಪಸ್ಥಿತರಿದ್ದರು.

'ಡೈನಾಮಿಕ್ ಹೀರೊ' ಪ್ರಜ್ವಲ್ ಸ್ಟೈಲಲ್ಲಿ ಎಂಟ್ರಿ ಕೊಟ್ಟ ಹ್ಯೊಸಂಗ್

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಿದ್ದ ಅಕ್ವಿಲಾ 250 ಆವೃತ್ತಿಯು 2.70 ಲಕ್ಷ ರು.ಗಳಷ್ಟು ದುಬಾರಿಯಾಗಿದೆ.

'ಡೈನಾಮಿಕ್ ಹೀರೊ' ಪ್ರಜ್ವಲ್ ಸ್ಟೈಲಲ್ಲಿ ಎಂಟ್ರಿ ಕೊಟ್ಟ ಹ್ಯೊಸಂಗ್

ಸರ್‌ಫೆರ್ಸ್ ಆಟೋಮೋಟಿವ್ ಬೆಂಗಳೂರಿನ ಎರಡನೇ ಶೋ ರೂಂ ಆಗಿರಲಿದ್ದು, ಒಟ್ಟಾರೆಯಾಗಿ ದೇಶದ್ಯಾಂತ ತನ್ನ ಶೋ ರೂಂ ಸಂಖ್ಯೆಗಳನ್ನು 34ಕ್ಕೆ ವೃದ್ಧಿಸಿದೆ.

'ಡೈನಾಮಿಕ್ ಹೀರೊ' ಪ್ರಜ್ವಲ್ ಸ್ಟೈಲಲ್ಲಿ ಎಂಟ್ರಿ ಕೊಟ್ಟ ಹ್ಯೊಸಂಗ್

ಬೆಂಗಳೂರಿನಲ್ಲಿ 550-600 ಬೈಕ್‌ಗಳನ್ನು ಮಾರಾಟ ಮಾಡುತ್ತಿರುವ ಹ್ಯೊಸಂಗ್ ದೇಶದ್ಯಾಂತ 3500 ಯುನಿಟ್‌ಗಳನ್ನು ಸೇಲ್ ಮಾಡುತ್ತಿದೆ.

'ಡೈನಾಮಿಕ್ ಹೀರೊ' ಪ್ರಜ್ವಲ್ ಸ್ಟೈಲಲ್ಲಿ ಎಂಟ್ರಿ ಕೊಟ್ಟ ಹ್ಯೊಸಂಗ್

ಅಂದ ಹಾಗೆ ಅಕ್ವಿಲಾ 250, 4 ಸ್ಟ್ರೋಕ್ ಡಿಒಎಚ್‌ಸಿ, 8 ವಾಲ್ವೆ, ವಿ ಟ್ವಿನ್, 249 ಸಿಸಿ, ಒಯಿಲ್ ಕೂಲ್ಡ್ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಟಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 5 ಸ್ಪೀಡ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ಇದು 26.21 ಅಶ್ವಶಕ್ತಿ ಉತ್ಪಾದಿಸುವ (21.37 ಎನ್‌ಎಂ ಟಾರ್ಕ್) ಸಾಮರ್ಥ್ಯ ಹೊಂದಿದೆ.

'ಡೈನಾಮಿಕ್ ಹೀರೊ' ಪ್ರಜ್ವಲ್ ಸ್ಟೈಲಲ್ಲಿ ಎಂಟ್ರಿ ಕೊಟ್ಟ ಹ್ಯೊಸಂಗ್

ಅಕ್ವಿಲಾ 250 ಬೈಕ್ 2282 ಎಂಎಂ ಉದ್ದ, 875 ಎಂಎಂ ಅಗಲ ಮತ್ತು 1096 ಎಂಎಂ ಎತ್ತರ ಹೊಂದಿರಲಿದೆ. ಹಾಗೆಯೇ 1515 ಎಂಎಂ ವೀಲ್ ಬೇಸ್ ಕೂಡಾ ಪಡೆದುಕೊಂಡಿದೆ. ಇದರ ಕರ್ಬ್ ವೇಟ್ 179 ಕೆ.ಜಿ.

'ಡೈನಾಮಿಕ್ ಹೀರೊ' ಪ್ರಜ್ವಲ್ ಸ್ಟೈಲಲ್ಲಿ ಎಂಟ್ರಿ ಕೊಟ್ಟ ಹ್ಯೊಸಂಗ್

ಇದರ ಫ್ರಂಟ್ ವೀಲ್ 16 ಇಂಚು ಹಾಗೂ ಹಿಂದುಗಡೆ 15 ಇಂಚು ಹೊಂದಿರಲಿದೆ. ಹಾಗೆಯೇ ಮುಂದುಗಡೆ ಸಿಂಗಲ್ ಡಿಸ್ಕ್ ಹಾಗೂ ಹಿಂದುಗಡೆ ಡ್ರಮ್ ಬ್ರೇಕ್ ಲಗತ್ತಿಸಲಾಗಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

  • ಅಕ್ವಿಲಾ 250 - 2.70 ಲಕ್ಷ ರು.
  • ಜಿಟಿ250 ಆರ್ - 2.80 ಲಕ್ಷ ರು.
  • ಜಿಟಿ 650 ಎನ್ - 4.04 ಲಕ್ಷ ರು.
  • ಜಿಟಿ650 ಆರ್ - 4.87 ಲಕ್ಷ ರು.
  • ಅಕ್ವಿಲಾ ಪ್ರೊ 650 - 5.35 ಲಕ್ಷ ರು.
  • ಎಸ್‌ಟಿ 7 - 6.10 ಲಕ್ಷ ರು.
  • 'ಡೈನಾಮಿಕ್ ಹೀರೊ' ಪ್ರಜ್ವಲ್ ಸ್ಟೈಲಲ್ಲಿ ಎಂಟ್ರಿ ಕೊಟ್ಟ ಹ್ಯೊಸಂಗ್

    ನೈಜ ಕ್ರೂಸರ್ ಬೈಕ್ ಎಂದೇ ಬಿಂಬಿಸಲ್ಪಟ್ಟಿರುವ ಹ್ಯೊಸಂಗ್ ಅಕ್ವಿಲಾ 250, ಸವಾಲು ರಹಿತ ರೈಡಿಂಗ್ ಗುಣಮಟ್ಟತೆ, ನಿರ್ವಹಣೆ, ಆರಾಮದಾಯಕ ಮತ್ತು ಸ್ಥಿರತೆಯ ಚಾಲನೆಯನ್ನು ಪ್ರದಾನ ಮಾಡಲಿದೆ.

    'ಡೈನಾಮಿಕ್ ಹೀರೊ' ಪ್ರಜ್ವಲ್ ಸ್ಟೈಲಲ್ಲಿ ಎಂಟ್ರಿ ಕೊಟ್ಟ ಹ್ಯೊಸಂಗ್

    ಬೆಂಗಳೂರಿನ ತೆರೆದುಕೊಂಡಿರುವ ನೂತನ 'ಸರ್‌ಫೆರ್ಸ್ ಆಟೋಮೋಟಿವ್' ಶೋ ರೂಂ 3ಎಸ್ ವೈಶಿಷ್ಟ್ಯತೆಯನ್ನು ಹೊಂದಿರಲಿದೆ. ಅದರೆ ಸೇಲ್ಸ್, ಸರ್ವೀಸ್ ಮತ್ತು ಸ್ಪೇರ್ ಸೌಲಭ್ಯಗಳು ಇಲ್ಲಿ ದೊರಕಲಿದೆ.

    'ಡೈನಾಮಿಕ್ ಹೀರೊ' ಪ್ರಜ್ವಲ್ ಸ್ಟೈಲಲ್ಲಿ ಎಂಟ್ರಿ ಕೊಟ್ಟ ಹ್ಯೊಸಂಗ್

    ಇದರ ಜತೆಗೆ 24*7 ತುರ್ತು ಸರ್ವೀಸ್ ಸೇವೆಯನ್ನು ಡಿಎಸ್‌ಕೆ ಹ್ಯೊಸಂಗ್ ಆರಂಭಿಸಿದೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ 24*7 ಬ್ರೇಕ್ ಡೌನ್ ಸರ್ವೀಸ್, ಓನ್ ಸೈಟ್ ಎಮರ್ಜನ್ಸಿ ರಿಪೇರಿ, ಬ್ಯಾಟರಿ ಜಂಪ್‌ಸ್ಟಾರ್ಟ್, ಇಂಧನ ವಿತರಣೆ, ಲಾಸ್ಟ್ ಕೀ ನೆರವು ಮತ್ತು ಟ್ಯಾಕ್ಸಿ ಡ್ರಾಪ್ ಸೇವೆಗಳು ದೊರಕಲಿದೆ.

More from DriveSpark

Article Published On: Friday, February 21, 2014, 11:49 [IST]
English summary
DSK Hyosung today inaugurated its second showroom in Bangalore - Surfers Automotive - at East End Road, Inner Ring Road, Jayanagar 9th Block, Near Jayadeva Hospital.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+