ಡಿಎಸ್‌ಕೆ ಹ್ಯೊಸಂಗ್‌ನಿಂದ ನೂತನ ಜಿಟಿ250ಆರ್ ಲಾಂಚ್
ಭಾರತದಲ್ಲಿ ಡಿಎಸ್‌ಕೆ ಹ್ಯೊಸಂಗ್ ನಿಧಾನವಾಗಿ ತನ್ನ ವ್ಯಾಪಾರ ಕುದುರಿಸಿಕೊಳ್ಳುತ್ತಿದೆ. ಇದಕ್ಕೆ ಪೂರಕವೆಂಬಂತೆ ನೂತನ ಜಿಟಿ250ಆರ್ ಫೇಸ್‌ಲಿಫ್ಟ್ ವರ್ಷನ್ ಪರಿಚಯಿಸಿದೆ. ಇದು ನೂತನ ಬಣ್ಣಗಳ ಆಯ್ಕೆಗಳಲ್ಲೂ ಲಭ್ಯವಾಗಲಿದೆ.
ನೂತನ ಜಿಟಿ250ಆರ್ ಹಿಂದಿನ ಜನರೇಷನ್‌ಗಿಂತಲೂ ಹೆಚ್ಚು ಸ್ಟೈಲಿಷ್ ಹಾಗೂ ಟ್ರೆಂಡಿ ಲುಕ್ ಪಡೆದುಕೊಳ್ಳಲಿದೆ. ಇದು ಜಿಟಿ650ಆರ್ ಆವೃತ್ತಿಗೆ ಸಾಮತ್ಯೆಯನ್ನು ಪಡೆದುಕೊಂಡಿದೆ. ಅಂದ ಹಾಗೆ ನೂತನ ಜಿಟಿ250ಆರ್ ಪುಣೆ ಎಕ್ಸ್ ಶೋ ರೂಂ ದರ 2.76 ಲಕ್ಷ ರು.ಗಳಾಗಿರಲಿದೆ.

ನೂತನ 2014 ಹ್ಯೊಸಂಗ್ ಜಿಟಿ250ಆರ್ ತಾಜಾ ವಿನ್ಯಾಸವನ್ನು ಪಡೆದುಕೊಂಡಿದ್ದು, ಹೆಚ್ಚು ಆಕರ್ಷಕವಾಗಿ ಗೋಚರಿಸುತ್ತಿದೆ.

ಒಟ್ಟು ಮೂರು ಕಲರ್ ವೆರಿಯಂಟ್‌ಗಳಲ್ಲಿ 2014 ಹ್ಯೊಸಂಗ್ ಜಿಟಿ250ಆರ್ ಲಭ್ಯವಾಗಲಿದೆ. ಅವುಗಳೆಂದರೆ ಕೆಂಪು, ಬಿಳಿ ಹಾಗೂ ಕಪ್ಪು.

ನೂತನ 2014 ಜಿಟಿ250ಆರ್ ಆವೃತ್ತಿಯಲ್ಲಿ ಕೆಲವೊಂದು ಕಾಸ್ಮೆಟಿಕ್ ಬದಲಾವಣೆ ತರಲಾಗಿದ್ದು, ಎಂಜಿನ್ ಮಾನದಂಡಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.

ಇದು ನೂತನ ಶೈಲಿಯ ಚಾಸೀ ಪಡೆದುಕೊಂಡಿದೆ. ಆದರೆ ಹಳೆಯ ಎಕ್ಸಾಸ್ಟ್‌ನಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.

ಹೊಸ ಹ್ಯೊಸಂಗ್ ಬೈಕ್ ದೇಹ ರಚನೆ ಹಾಗೂ ಫಿನಿಶಿಂಗ್ ಹೆಚ್ಚು ಆಕರ್ಷಣೀಯವಾಗಿದೆ. ಇದೀಗ ಡಿಎಸ್‌ಕೆ ಹ್ಯೊಸಂಗ್ ಜಿಟಿ250ಆರ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.


Click it and Unblock the Notifications








