ಸ್ಪ್ಲೆಂಡರ್ ಗೋಲ್ಡನ್ ಎಡಿಷನ್ ಲಾಂಚ್; 5 ವರ್ಷ ವಾರಂಟಿ
ದೇಶದ ಅತಿ ದೊಡ್ಡ ದ್ವಿಚಕ್ರ ಉತ್ಪಾದಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ನೂತನ ಸ್ಪ್ಲೆಂಡರ್ ಪ್ರೊ ಚಿನ್ನದ ವಿಶೇಷ ಆವೃತ್ತಿಯನ್ನು ಲಾಂಚ್ ಮಾಡಿದೆ. ಇದರ ಜತೆಗೆ ದೇಶದ ಟು ವೀಲರ್ ಇತಿಹಾಸದಲ್ಲೇ ಇದೇ ಮೊದಲ ಬಾರಿಯೆಂಬಂತೆ ಹೀರೊ ಮೊಟೊಕಾರ್ಪ್ ತನ್ನೆಲ್ಲ ಆವೃತ್ತಿಗಳಿಗೆ ಐದು ವರ್ಷಗಳ ವಾರಂಟಿ ಆಫರ್ ಘೋಷಿಸಿದೆ.
ಸತತ 12 ವರ್ಷಗಳಲ್ಲಿ ವಿಶ್ವದ ಅತಿ ದೊಡ್ಡ ವಾಹನ ತಯಾರಕ ಕಂಪನಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಪ್ಲೆಂಡರ್ ತನ್ನ ಜನಪ್ರಿಯ ಸ್ಲ್ಪೆಂಡರ್ ಪ್ರೊ ಗೋಲ್ಡನ್ ಎಡಿಷನ್ ಬಿಡುಗಡೆಗೊಳಿಸಿದೆ.
ಸ್ಪ್ಲೆಂಡರ್ 20ನೇ ವಾರ್ಷಿಕೋತ್ಸವದ ಅಂಗವಾಗಿ ಈ ವಿಶೇಷ ಲಾಂಚ್ ಮಾಡಿದೆ. ಈ ಹಿಂದೆ 1993ನೇ ಇಸವಿಯಲ್ಲಿ ಹೋಂಡಾ ಜತೆ ಪಾಲುದಾರಿಕೆ ಹೊಂದಿದ್ದ ಹೀರೊ, ಜಂಟಿಯಾಗಿ ಸ್ಪ್ಲೆಂಡರ್ ಬಿಡುಗಡೆಗೊಳಿಸಿತ್ತು. ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ಪ್ಲೆಂಡರ್ 2009ರ ಬಳಿಕ ಕಳೆದ ನಾಲ್ಕು ವರ್ಷಗಳಲ್ಲಿ ವಾರ್ಷಿಕವಾಗಿ 10 ಲಕ್ಷದಷ್ಟು ಬೈಕ್‌ಗಳು ಮಾರಾಟವಾಗುತ್ತಿವೆ.
ಇದೀಗ ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್ ತಿರುವಿರಿ...

97 ಸಿಸಿ ಸ್ಪ್ಲೆಂಡರ್ ಪ್ರೊ ಗೋಲ್ಡನ್ ಎಡಿಷನ್ ದೆಹಲಿ ಎಕ್ಸ್ ಶೋ ರೂಂ ದರ 49,000 ರು.ಗಳಾಗಿವೆ. ಇದು ಸಾಮಾನ್ಯ ಆವೃತ್ತಿಗಿಂತ ಒಂದು ಸಾವಿರದಷ್ಟು ದುಬಾರಿಯಾಗಿದೆ.

ನೂತನ ವಿಶೇಷ ಆವೃತ್ತಿಯಲ್ಲಿ ಹೆಡ್‌ಲೈಡ್ ಮೇಲ್ಗಡೆ ಸ್ಪ್ಲೆಂಡರ್ ಸ್ಪೆಷಲ್ ಎಡಿಷನ್ ಲೊಗೊ ಹೊಂದಿರಲಿದೆ. ಇದರ ಜತೆಗೆ ನೂತನ ಚಿನ್ನದ ವರ್ಣದಲ್ಲಿ ಆಗಮನವಾಗಲಿದೆ.

ಅಂತೆಯೇ ತನ್ನೆಲ್ಲ ಮಾಡೆಲ್‌ಗಳಿಗೆ ಐದು ವರ್ಷ ಅಥವಾ 70,000 ಕೀ.ಮೀ ವರೆಗೆ ವಾರಂಟಿ ಒದಗಿಸುವುದಾಗಿ ಹೀರೊ ಮೊಟೊಕಾರ್ಪ್ ಘೋಷಿಸಿದೆ. ಈ ಹಿಂದೆ ಎರಡು ವರ್ಷ ಅಥವಾ 30,000 ಕೀ.ಮೀ. ವರೆಗೆ ವಾರಂಟಿ ಒದಗಿಸಲಾಗುತ್ತಿತ್ತು.

ಭಾರತದಲ್ಲಿ ಸ್ಪ್ಲೆಂಡರ್ ಆವೃತ್ತಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಇದೇ ಕಾರಣಕ್ಕಾಗಿ ಕಳೆದೆರಡು ದಶಕಗಳಿಂದ ಮಾರುಕಟ್ಟೆಯಲ್ಲಿ ಭಾರಿ ಯಶ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಇದೀಗ ಸ್ಪ್ಲೆಂಡರ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








