ಹೋಂಡಾ ಸಿಬಿ ಶೈನ್ ದೇಶದ ನಂ.1, 125ಸಿಸಿ ಬೈಕ್
ಹೋಂಡಾ ಸಿಬಿ ಶೈನ್ ದೇಶದ ನಂ.1, 125 ಸಿಸಿ ಬೈಕೆಂಬ ಖ್ಯಾತಿಗೆ ಪಾತ್ರವಾಗಿದೆ. ಇದು ದೇಶದ ನಂ.2 ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾದ ಜಪಾನ್ ಮೂಲದ ಹೋಂಡಾಗೆ ಇನ್ನಷ್ಟು ಹುಮ್ಮಸ್ಸು ತುಂಬುವಂತಾಗಿದೆ.
ದೇಶದ ಟಾಪ್ 10 ಜನಪ್ರಿಯ ಸ್ಕೂಟರ್ ಬೈಕ್‌ಗಳು
ಪ್ರಸಕ್ತ ತಿಂಗಳಿನಲ್ಲಷ್ಟೇ ಹೋಂಡಾ, ತನ್ನ 30ನೇ ಲಕ್ಷದ ಸಿಬಿ ಶೈನ್ ಮಾದರಿಯನ್ನು ರಾಜಸ್ತಾನ ತಪುಕರ ತಯಾರಿಕ ಘಟಕದಿಂದ ಹೊರಬಿಟ್ಟಿತ್ತು. ಪ್ರಸ್ತುತ ಶೈನ್, ತನ್ನ ಪ್ರತಿಸ್ಫರ್ಧಿಗಳಿಗಿಂತ ಶೇಕಡಾ 61ರಷ್ಟು ಅಂತರವನ್ನು ಕಾಪಾಡಿಕೊಂಡಿದೆ.

ದೇಶದ ಅತ್ಯಂತ ಜನಪ್ರಿಯ 125ಸಿಸಿ ಬೈಕ್ ಎನಿಸಿಕೊಂಡಿರುವ ಸಿಬಿ ಶೈನ್, 30 ಲಕ್ಷ ಮಾರಾಟವನ್ನು ದಾಟಿದ ದೇಶದ ಏಕಮಾತ್ರ 125ಸಿಸಿ ಸೆಗ್ಮೆಂಟ್ ಬೈಕ್ ಎನಿಸಿಕೊಂಡಿದೆ. ಅಷ್ಟೇ ಅಲ್ಲದೆ ಇದೇ ಮೊದಲ ಬಾರಿಗೆ ಹೋಂಡಾದ ಪೈಕಿ ವಿಶ್ವದ್ಯಾಂತ ನಂ.1 ಮಾರಾಟದ ಬೈಕ್ ಎಂಬ ಗೌರವಕ್ಕೂ ಪಾತ್ರವಾಗಿದೆ.

2006ನೇ ಇಸವಿಯಲ್ಲಿ ಭಾರತ ಮಾರುಕಟ್ಟೆಗೆ ಕಾಲಿಟ್ಟಿದ್ದ ಹೋಂಡಾ ಸಿಬಿ ಶೈನ್, ಸ್ಥಿರ ಹಾಗೂ ಶಿಪ್ರ ಗತಿಯ ಮಾರಾಟವನ್ನು ಸಾಧಿಸಿತ್ತು.

ಹೋಂಡಾ ಸಿಬಿ ಶೈನ್ 54 ತಿಂಗಳಲ್ಲೇ 10 ಲಕ್ಷ ಮಾರಾಟ ಸಂಖ್ಯೆಯನ್ನು ತಲುಪಿತ್ತು. ಹಾಗೆಯೇ 20 ಲಕ್ಷವನ್ನು ಮುಂದಿನ 25ನೇ ತಿಂಗಳಲ್ಲಿ ಅಂತೆಯೇ 30 ಲಕ್ಷವನ್ನು ಮುಂದಿನ 16 ತಿಂಗಳಲ್ಲೇ ತಲುಪಿದೆ.

ಈ ಸಂದರ್ಭದಲ್ಲಿ ಗ್ರಾಹಕರಿಗೆ ಧನ್ಯವಾದ ಸಲ್ಲಿಸಿರುವ ಹೋಂಡಾ ಮೋಟಾರು ಸ್ಕೂಟರ್ಸ್ ಇಂಡಿಯಾ ಅಧ್ಯಕ್ಷ ಹಾಗೂ ಸಿಇಒ ಕೀಟಾ ಮುರಮಟ್ಸು, ಸಿಬಿ ಶೈನ್ ಭಾರತದ ನಂ.1, 125 ಸಿಸಿ ಬೈಕ್ ಅಷ್ಟೇ ಅಲ್ಲದೆ ಇಡಿ ವಿಶ್ವದಲ್ಲೇ ಹೋಂಡಾ ಪಾಲಿಗೆ ನಂ.1 ಎನಿಸಿಕೊಂಡಿದೆ ಎಂದಿದ್ದಾರೆ.

ಅಂದ ಹಾಗೆ 124.7 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಹೋಂಡಾ ಸಿಬಿ ಶೈನ್, 10.2 ಬಿಎಚ್‌ಪಿ ಉತ್ಪಾದಿಸುವ (10.54 ಎನ್‌ಎಂ ಟಾರ್ಕ್) ಸಾಮರ್ಥ್ಯ ಹೊಂದಿದೆ. ಇದು 4 ಸ್ಪೀಡ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ಸಂಸ್ಥೆಯ ಪ್ರಕಾರ ಹೋಂಡಾ ಸಿಬಿ ಶೈನ್ ಪ್ರತಿ ಲೀಟರ್‌ಗೆ 65 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...


Click it and Unblock the Notifications








