ಜನಮೆಚ್ಚುಗೆಗೆ ಪಾತ್ರವಾದ ಹೋಂಡಾ ಸಿಎಕ್ಸ್-01 ಕಾನ್ಸೆಪ್ಟ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೀಗಷ್ಟೇ ಅಂತ್ಯಗೊಂಡಿರುವ 2014 ಆಟೋ ಎಕ್ಸ್ ಪೋದಲ್ಲಿ ದೇಶದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ, ನೂತನ ಸಿಎಕ್ಸ್-01 ಕಾನ್ಸೆಪ್ಟ್ ಮೋಟಾರುಸೈಕಲ್ ಪ್ರದರ್ಶಿಸಿದೆ.
2014 ಆಟೋ ಎಕ್ಸ್ ಪೋ ಹೈಲೆಟ್ಸ್
ಸಾಮಾನ್ಯವಾಗಿ ಕ್ರಾಸೋವರ್ ಎಂಬುದು ನಾಲ್ಕು ಚಕ್ರಗಳ ವಾಹನಗಳ ವಿಭಾಗದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಗಿಟ್ಟಿಸಿಕೊಂಡಿದೆ. ಆದರೆ ಇವೆಲ್ಲಕ್ಕಿಂತಲೂ ವಿಭಿನ್ನವಾಗಿ ಯೋಚಿಸಿರುವ ಹೋಂಡಾ, ಸಿಎಕ್ಸ್-01 ಕ್ರಾಸೋವರ್ ಬೈಕ್ ಅನ್ನು ಪ್ರದರ್ಶಿಸಿದೆ.

ಇಲ್ಲಿ ಕ್ರಾಸೋವರ್ ಎಂಬುದು ಪ್ರಯಾಣಿಕ ಬೈಕ್ ಹಾಗೂ ಸ್ಪೋರ್ಟಿ ಆಪ್ ರೋಡರ್ ಮೋಟಾರುಸೈಕಲುಗಳ ನಡುವೆ ಗುರುತಿಸಿಕೊಳ್ಳಲಿದೆ.

ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಇದರ ವಿನ್ಯಾಸ ರಚಿಸಲಾಗಿದೆ.

ಗರಿಷ್ಠ ಗ್ರೌಂಡ್ ಕ್ಲಿಯರನ್ಸ್, ಎತ್ತರದ ಆಸನ ವ್ಯವಸ್ಥೆ ಹಾಗೂ ಸಿಟಿ ವಾಹನ ದಟ್ಟಣೆಗೆ ಸೂಕ್ತವಾಗುವ ರೀತಿಯಲ್ಲಿ ಕಾಂಪಾಕ್ಟ್ ವಿನ್ಯಾಸ ರಚಿಸಲಾಗಿದೆ.

ಒಟ್ಟಿನಲ್ಲಿ ಆಧುನಿಕತೆಗೆ ತಕ್ಕ ರೀತಿಯಲ್ಲಿ ಪ್ರೀಮಿಯಂ ಡಿಸೈನ್ ಕಾಪಾಡಿಕೊಳ್ಳುವಲ್ಲಿ ಹೋಂಡಾ ಯಶಸ್ವಿಯಾಗಿದೆ.

ಹಾಗಿದ್ದರೂ ಹೋಂಡಾ ಸಿಎಕ್ಸ್-01 ಕಾನ್ಸೆಪ್ಟ್ ಬೈಕ್‌ನ ಬಗ್ಗೆ ಕಂಪನಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.

ಇದುವರೆಗೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಹೋಂಡಾ ಸಿಎಕ್ಸ್-01 ಕಾನ್ಸೆಪ್ಟ್ ಭಾರತದಲ್ಲೇ ನಿರ್ಮಾಣವಾಗಲಿದೆ. ಒಟ್ಟಿನಲ್ಲಿ ನಿಕಟ ಭವಿಷ್ಯದಲ್ಲೇ ನಿರ್ಮಾಣ ವರ್ಷನ್ ಪಡೆದುಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








