ಜಪಾನ್‌ಗೆ 3 ನೂತನ ಬೈಕ್; ಭಾರತಕ್ಕೂ ಬರಲಿದೆ!

ವಿಶ್ವದ ಮುಂಚೂಣಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ, ಮೂರು ಅತಿ ನೂತನ ಮಾದರಿಗಳನ್ನು ಜಪಾನ್‌ಗೆ ಪರಿಚಯಿಸಿದೆ. ಮುಂದಿನ ದಿನಗಳಲ್ಲಿ ಇದು ಭಾರತವನ್ನು ಪ್ರವೇಶಿಸಲಿದೆಯೇ ಎಂಬುದು ಬೈಕ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.

ಹೋಂಡಾ ಕೆಲವು ಬೈಕ್‌ಗಳ ಪ್ರಯೋಗ ಮಾದರಿಯನ್ನು ಪ್ರದರ್ಶಿಸಿದ್ದು, ಇದು ಸದ್ಯದಲ್ಲೇ ಉತ್ಪಾದಕ ವರ್ಷನ್ ಪಡೆಯಲಿದೆ. ಈ ಪೈಕಿ ಸಿಬಿಆರ್400ಆರ್, ಸಿಬಿ400ಎಫ್ ಹಾಗೂ 400ಎಕ್ಸ್ ಪ್ರಮುಖವಾಗಿದೆ.

ಮೇಲೆ ಉಲ್ಲೇಖಿಸಿರುವ ಈ ಎಲ್ಲ ಮಾದರಿಗಳು ಜಪಾನ್‌ನಲ್ಲಿ ಉತ್ಪಾದನೆಯಾಗಲಿದೆ. ಹಾಗಿದ್ದರೂ ಈ 400 ಸಿರೀಸ್ ಬೈಕ್‌ಗಳು ನಿಕಟ ಭವಿಷ್ಯದಲ್ಲಿ ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಗೂ ಎಂಟ್ರಿ ಕೊಡುವ ಸಾಧ್ಯತೆಯಿದೆ.

ಈ ಎಲ್ಲ ಮಾದರಿಗಳು ಮುಂಬವರು ಒಸಾಕ ಹಾಗೂ ಟೊಕಿಯೋ ಮೋಟಾರ್ ಸೈಕಲ್ ಶೋದಲ್ಲಿ ಪ್ರದರ್ಶನವಾಗಲಿದೆ. ಒಸಾಕ ಮೋಟಾರ್‌ಸೈಕಲ್ ಶೋ ಮಾರ್ಚ್ 15ರಿಂದ 17 ಹಾಗೂ ಟೊಕಿಯೋ ಮೋಟಾರ್‌ಸೈಕಲ್ ಶೋ ಮಾರ್ಚ್ 22ರಿಂದ 25ರ ವರೆಗೆ ಸಾಗಲಿದೆ.

CBR400R

CBR400R

ಹೆಸರು ಸೂಚಿಸಿರುವಂತೆಯೇ ಈ 399ಸಿಸಿ ವಿ ವರ್ಷನ್ ಸ್ಪೋರ್ಟ್ಸ್ ಬೈಕ್ ಆಗಿರಲಿದ್ದು, 500 ಸಿರೀಸ್‌ನಂತೆ ಲಿಕ್ವಿಡ್ ಕೂಲ್ಡ್ ಡಿಒಎಚ್‌ಸಿ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿರಲಿದೆ.

CB400F

CB400F

ಸ್ಟ್ರೀಟ್ ಬೈಕ್ ಆಗಿರುವ ಸಿಬಿ400ಎಫ್ ಕೂಡಾ ಸಿಬಿಆರ್400ಆರ್‌ಗೆ ಸಮಾನವಾದ ಎಂಜಿನ್ ಹೊಂದಿರಲಿದೆ.

400X

400X

ಆದರೆ 400ಎಕ್ಸ್ ಬೈಕ್ ವಿಭಿನ್ನ ಎಂಜಿನ್ ಪಡೆಯಲಿದೆ. ಕ್ರಾಸೋವರ್ ಕಾನ್ಸೆಪ್ಟ್‌ನಿಂದ ತಲೆಯೆತ್ತಿದ್ದ ಸ್ಪೋರ್ಟ್ಸ್ ಟೂರ್ ಮಾದರಿ ಬೈಕ್ ಆಗಿರಲಿದೆ.

CTX700N

CTX700N

ಆರಾಮದಾಯಕ ತಂತ್ರಜ್ಞಾನ ಅನುಭವವನ್ನು ಈ ಕ್ರೂಸರ್ ಮಾದರಿ ಪ್ರತಿಪಾದಿಸಲಾಗಿದೆ.

CTX700

CTX700

CRF250L

CRF250L

Most Read Articles

Kannada
English summary
While Honda will showcase several prototype models at the shows it will also unveil a few production models, including three 399cc versions of its 500 series sports bikes. These bikes are the CBR400R, CB400F and 400X.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X