50 ಸಾವಿರಕ್ಕೆ ಬರಲಿದೆ ಹ್ಯೊಸಂಗ್ ಅಗ್ಗದ ಬೈಕ್
ಇದನ್ನು ನಿಮ್ಮಿಂದ ಊಹಿಸಲಸಾಧ್ಯ. ನಮ್ಮಿಂದಲೂ ಈ ವಿಷಯವನ್ನು ನಂಬಲಾಗುತ್ತಿಲ್ಲ. ದೇಶದ ಪ್ರತಿಷ್ಠಿತ ಆಟೋ ಉತ್ತೇಜಕ ವೆಬ್‌ಸೈಟ್ ಪ್ರಕಾರ, ಜಗತ್ತಿನ ಶ್ರೇಷ್ಠ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಹ್ಯೊಸಂಗ್, ದೇಶಕ್ಕಾಗಿ ಅತಿ ಅಗ್ಗದ ಬೈಕ್‌ಗಳನ್ನು ತಯಾರಿಸಲಿದೆ.
ಹೌದು, ಡಿಎಸ್‌ಕೆ ಮೊಟೊವೀಲ್ಸ್ ಜತೆ ಪಾಲುದಾರಿಕೆ ಹೊಂದಿರುವ ಹ್ಯೊಸಂಗ್, ದೇಶದ 125 ಸಿಸಿ ಪ್ರಯಾಣಿಕ ವಿಭಾಗಕ್ಕೆ ಕಾಲಿಡಲಿದೆಯಂತೆ! ಈ ಮೂಲಕ 50ರಿಂದ 60 ಸಾವಿರ ರು.ಗಳ ಅಸುಪಾಸಿನಲ್ಲಿ ಬೈಕ್ ಲಾಂಚ್ ಮಾಡಲಿದೆ.

ಅಂದ ಹಾಗೆ ಈ ಕನಸು ಸದ್ಯಕ್ಕಂತೂ ನನಸಾಗುವುದಿಲ್ಲ. ಇದಕ್ಕಾಗಿ 2015-16ರ ಅವಧಿಯವ ವರಗೆ ಕಾಯಬೇಕಾಗಿದೆ.

200 ಕೋಟಿ ರುಪಾಯಿ ಹೂಡಿಕೆಯಲ್ಲಿ ಹೊಸ ಘಟಕ ನಿರ್ಮಾಣವಾಗಲಿದೆ. ಇಲ್ಲಿ 125 ಸಿಸಿ ಎಂಜಿನ್ ಅಭಿವೃದ್ಧಿಯಾಗಲಿದ್ದು, ಬಳಿಕ 2015-16ರಲ್ಲಿ ಮಾರುಕಟ್ಟೆ ಪ್ರವೇಶ ಪಡೆಯಲಿದೆ.

ಭಾರತಕ್ಕೆ 125ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಪರಿಚಯವಾಗಲಿದೆ. ಹಾಗೆಯೇ ಸ್ಮರ್ಧಾತ್ಮಕ ದರಗಳಲ್ಲಿ ಬುಡಗೆಯಾಗಲಿದೆ.

ಬಲ್ಲ ಮೂಲಗಳ ಪ್ರಕಾರ 50ರಿಂದ 60 ಸಾವಿರ ರು.ಗಳ ಅಸುಪಾಸಿನಲ್ಲಿ ಹ್ಯೂಸಂಗ್ 125 ಸಿಸಿ ಪ್ರಯಾಣಿಕ ಬೈಕ್‌ಗಳು ಮಾರುಕಟ್ಟೆ ಪ್ರವೇಶಿಸಲಿದೆ.

ಒಟ್ಟಿನಲ್ಲಿ ಸಣ್ಣ ಸಿಸಿ ಬೈಕ್‌ಗಳಿಗೆ ಅತಿ ಹೆಚ್ಚು ಬೇಡಿಕೆಯಿರುವ ಭಾರತ ಮಾರುಕಟ್ಟೆಯಲ್ಲಿ ಹ್ಯೂಸಂಗ್ ಕನಸು ನನಸಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








