ನಿಮ್ಮ ಕಣ್ಮನ ಸೆಳೆಯಿತೇ ಲೋಟಸ್ ಬೈಕ್
ಸ್ಪೋರ್ಟ್ಸ್ ಕಾರು ತಯಾರಕ ಸಂಸ್ಥೆಯಾಗಿರುವ ಲೋಟಸ್ ಇತ್ತೀಚೆಗಷ್ಟೇ ಮೋಟಾರುಸೈಕಲ್ ಉತ್ಪಾದನೆಗೂ ಪ್ರವೇಶಿಸಲಿದೆ ಎಂಬುದನ್ನು ಘೋಷಿಸಿತ್ತು. ಇದರಂತೆ ಆಕರ್ಷಕ ನಿರ್ಮಾಣ ಸಿದ್ಧ ಸಿ-01 ಬೈಕ್ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದೆ.
ಪ್ರಸ್ತುತ ಕ್ರೂಸರ್ ಬೈಕ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಆಳವಡಿಸಲಾಗಿದೆ. ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಮೊದಲ ನೋಟದಲ್ಲೇ ಪ್ರತಿಯೊಬ್ಬರಲ್ಲೂ ಇದನ್ನೊಮ್ಮೆ ಓಡಿಸುವ ಆಸೆ ಹುಟ್ಟಿಸುತ್ತದೆ. ಲೋಟಸ್ ಡಿಸೈನ್ ಹೆಡ್ ಕಾಲಿನ್ ಚಾಂಪ್‌ಮ್ಯಾನ್ ಇದಕ್ಕೆ ವಿನ್ಯಾಸ ಮಾಡಲು ನೆರವಾಗಿದ್ದಾರೆ. ಅಂದ ಹಾಗೆ ನೈಜವಾಗಿಯೂ ಇದನ್ನು ಲೋಟಸ್ ತಯಾರಿಸಿರುವುದಲ್ಲ. ಬದಲಾಗಿ ಜರ್ಮನಿಯ ರೇಸಿಂಗ್ ಸಂಸ್ಥೆ ಕೊಡೆವಾ ಮತ್ತು ಟ್ಯೂನರ್ ಹೊಲ್ಜರ್ ಸಂಸ್ಥೆ ಲೋಟಸ್ ಪರವಾನಗಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ವಿನ್ಯಾಸ
ಫೋಕ್ಸ್‌ವ್ಯಾಗನ್, ಬುಗಾಟಿಗಳಂತಹ ಸಂಸ್ಥೆಗಳ ಜತೆ ಕೆಲಸ ಮಾಡಿರುವ ಡ್ಯಾನಿಯಲ್ ಸಿಮನ್ ನೂತನ ಸಿ-01 ವಿನ್ಯಾಸವನ್ನು ರಚಿಸಿದ್ದಾರೆ.

ದೈತ್ಯ ಗಾತ್ರ
ಲೋಟಸ್ ಸಿ-01 ಮೋಟಾರುಸೈಕಲ್‌ನಲ್ಲಿ ಕ್ರೂಸರ್ ವಿನ್ಯಾಸ ವಿಶೇಷತೆಯಾಗಿರಲಿದೆ. ಅಲ್ಲದೆ ಯಾವುದೇ ಕೋನದಿಂದ ವೀಕ್ಷಿಸಿದರೂ ದೈತ್ಯ ಗಾತ್ರ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಎಂಜಿನ್
ಇದರಲ್ಲಿ ಕೆಟಿಎಂನ 195 ಸಿಸಿ ವಿ ಟ್ವಿನ್ ಎಂಜಿನ್ ಆಳವಡಿಸಲಾಗಿದ್ದು, 200 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ವರ್ಣಗಳು
ಬ್ರಿಟಿಷ್ ರೇಸ್ ಬೈಕ್‌ಗಳನ್ನು ವರ್ಣಿಸುವ ಸಲುವಾಗಿದ ವಿವಿಧ ರೀತಿಯ ಬಣ್ಣಗಳ ಮಿಶ್ರಣವನ್ನು ಇಲ್ಲಿ ನೋಡಬಹುದಾಗಿದೆ.

ಇನ್ನು ಭಾರವನ್ನು ಕಡಿಮೆಗೊಳಿಸಲು ಹಗುರ ಭಾರದ ಪರಿಕರಗಳನ್ನು ಬಳಕೆ ಮಾಡಲಾಗಿದೆ.

ಹಾಗಿದ್ದರೂ ಇದುವರೆಗೆ ದರಗಳ ಬಗ್ಗೆ ಮಾಹಿತಿ ಬಂದಿಲ್ಲ. ಸಂಸ್ಥೆಯು ಈ ಬಗ್ಗೆ ಪೂರ್ಣ ಮಾಹಿತಿಯನ್ನು ಸದ್ಯದಲ್ಲೇ ಬಹಿರಂಗಪಡಿಸುವ ನಿರೀಕ್ಷೆಯಿದೆ.


Click it and Unblock the Notifications








