ಲೋಟಸ್ ಎಲಿಸ್ ಎಂಟ್ರಿ ಲೆವೆಲ್ ಟ್ರ್ಯಾಕ್ ಕಾರ್
ಪ್ರಸಕ್ತ ವಾರದಲ್ಲೇ ಜರ್ಮಿಂಗ್‌ಹ್ಯಾಮ್‌ನಲ್ಲಿ ಸಾಗಲಿರುವ ಆಟೋಸ್ಪೋರ್ಟ್ ಶೋದಲ್ಲಿ ಲೋಟಸ್ ಎಲಿಸ್ ಎಸ್ ಕಪ್ ಆರ್ ಎಂಟ್ರಿ ಲೆವೆಲ್ ಟ್ರ್ಯಾಕ್ ಕಾರು ಪ್ರದರ್ಶನವಾಗಲಿದೆ. ಇದು ಟ್ರ್ಯಾಕ್ ಬಳಕೆಗೆ ಮಾತ್ರ ಸೀಮಿತವಾಗಿರಲಿದೆ.
ಇದರಲ್ಲಿ ಸೂಪರ್ ಚಾರ್ಜ್ಡ್ ಎಲಿಸ್ ಎಸ್ ಮಿಡ್ 1.8 ಲೀಟರ್ ಎಂಜಿನ್ ಆಳವಡಿಸಲಾಗಿದೆ. ಹಾಗೆಯೇ ಮೋಟಾರುಸ್ಪೋರ್ಟ್ ಕೇಂದ್ರಿಕೃತ ಎಂಜಿನ್ ಕಂಟ್ರೋಲ್ ಮೊಡ್ಯೂಲ್ ಬಳಕೆ ಮಾಡಲಾಗಿದೆ.

ಲೋಟಸ್ ಎಲಿಸ್ ನಿರ್ವಹಣೆಗೆ ಹೆಚ್ಚಿನ ಗಮನ ಕೊಡಲಾಗಿದ್ದು, ರೇಸ್ ಕಿಟ್‌ನೊಂದಿಗೆ ಆಗಮನವಾಗಲಿದೆ. ಹಾಗೆಯೇ ಕೇವಲ 924 ಕೆ.ಜಿ ತೂಕವನ್ನಷ್ಟೇ ಹೊಂದಿರಲಿದೆ. ಇದು ಹಗುರ ಭಾರದ ಸಂಕೇತ ನೀಡಲಿದೆ.
ಈ ಬಗ್ಗೆ ಉಲ್ಲೇಖಿಸಿರುವ ಸಂಸ್ಥೆಯು, ಇದು ಪರಿಪೂರ್ಣ ಎಂಟ್ರಿ ಲೆವೆಲ್ ಟ್ರ್ಯಾಕ್ ಕಾರೆನಿಸಿಕೊಳ್ಳಲಿದೆ. ನೀವು ರೇಸ್ ಪ್ರಿಯರಾಗಿರಬಹುದು ಅಥವಾ ರೇಸಿಂಗ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಬಯಸುತ್ತಿರಬಹುದು. ಅಂತವರಿಗೆ ಇಂದೊಂದು ಉತ್ತಮ ಆಯ್ಕೆಯಾಗಿರಲಿದೆ ಎಂದಿದೆ.
ಅಂದ ಹಾಗೆ ಬ್ರಿಟನ್‌ನಲ್ಲಿ ಲೋಟಸ್ ಎಳಿಸ್ ಆಸ್ ಕಪ್ ಆರ್ ದರ 39,125 ಪೌಂಡ್‌ಗಳಾಗಿದೆ. ಇದನ್ನು ಭಾರತೀಯ ರುಪಾಯಿ ಮೌಲ್ಯಕ್ಕೆ ವರ್ಗಾಯಿಸಿದಾಗ 40 ಲಕ್ಷ ರು.ಗಳಷ್ಟು ದುಬಾರಿಯಾಗಿದೆ.


Click it and Unblock the Notifications








