ಮಹೀಂದ್ರ ಸೆಂಚುರೊ ಅಗ್ಗದ ವೆರಿಯಂಟ್ ಲಾಂಚ್

By Nagaraja

ಸೆಂಚರೊ ಪ್ರಯಾಣಿಕ ಬೈಕ್ ಭರ್ಜರಿ ಯಶಸ್ಸಿನಿಂದ ಪುಳಕಿತಗೊಂಡಿರುವ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ನೂತನ ಸೆಂಚುರೊ ಎನ್1 ವೆರಿಯಂಟ್ ಲಾಂಚ್ ಮಾಡಿದೆ.

ಹೊಸತಾಗಿ ವೀಕ್ಷಣೆ ಮಾಡುವವರು ಇದ್ಯಾವುದು ಹೊಸ ಗಾಡಿ ಎಂದು ಸಂದೇಹಪಟ್ಟುಕೊಳ್ಳಬಹುದು. ಅಂಥವರ ಮಾಹಿತಿಗಾಗಿ, ಸೆಂಚುರೊ ಎನ್1 ಮಹೀಂದ್ರದಿಂದ ಬಿಡುಗಡೆಯಾಗಿರುವ ಹೊಸ ವೆರಿಯಂಟ್ ಆಗಿದ್ದು ಇದು, ಸಾಮಾನ್ಯ ಸೆಂಚುರೊ ಆವೃತ್ತಿಗಿಂತಲೂ ಅಗ್ಗವಾಗಿರಲಿದೆ. ಪ್ರಮುಖವಾಗಿಯೂ ದೇಶದ ಗ್ರಾಹಕರ ಬೇಡಿಕೆಯನ್ನು ಪರಿಗಣಿಸಿ ಸೆಂಚುರೊ ಎನ್1 ಬಿಡುಗಡೆಗೊಳಿಸಲಾಗಿದೆ.

ಮಹೀಂದ್ರ ಸೆಂಚುರೊ ಅಗ್ಗದ ಎನ್1 ವೆರಿಯಂಟ್ ಲಾಂಚ್

ಅಂದ ಹಾಗೆ ಮಹೀಂದ್ರ ಸೆಂಚುರೊ ಎನ್1 ಮುಂಬೈ ಎಕ್ಸ್ ಶೋ ರೂಂ ದರ 46,574 ರು.ಗಳಾಗಿವೆ. ಅಂದರೆ ಇದು ಸಾಮಾನ್ಯ ಸೆಂಚುರೊ ಆವೃತ್ತಿಗಿಂತಲೂ 2000 ರು.ಗಳಷ್ಟು ಅಗ್ಗವಾಗಿರಲಿದೆ.

ಮಹೀಂದ್ರ ಸೆಂಚುರೊ ಅಗ್ಗದ ಎನ್1 ವೆರಿಯಂಟ್ ಲಾಂಚ್

ಸಹಜವಾಗಿಯೇ ದರ ಅಗ್ಗವಾಗುವಾಗ ಇದರ ವೈಶಿಷ್ಟ್ಯತೆಗಳಲ್ಲೂ ಕೊಂಚ ಹಿನ್ನಡೆ ಸಂಭವಿಸಲಿದೆ. ಇದು ಬಾಡಿ ಗ್ರಾಫಿಕ್ಸ್ ಮತ್ತು ಸಂಪೂರ್ಣ ಡಿಜಿಟಲ್ ಕನ್ಸೋಲ್ ಕೊರತೆಯನ್ನು ಅನುಭವಿಸಲಿದೆ. ಇದನ್ನು ಅನಾಲಾಗ್ ಸ್ಪೀಡೋಮೀಟರ್ ಬದಲಾಯಿಸಿಕೊಳ್ಳಲಿದೆ. ಇದರ ಹೊರತುಪಡಿಸಿ ಇತರೆಲ್ಲ ಫೀಚರುಗಳು ಸಮಾನವಾಗಿರಲಿದೆ.

ಮಹೀಂದ್ರ ಸೆಂಚುರೊ ಅಗ್ಗದ ಎನ್1 ವೆರಿಯಂಟ್ ಲಾಂಚ್

ಇನ್ನುಳಿದಂತೆ ಸೆಂಚುರೊ ಎನ್1 110 ಸಿಸಿ ಎಂಸಿಐ 5 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಭಾರತ ವಾಹನ ಅಧ್ಯಯನ ಸಂಸ್ಥೆ ಪ್ರಕಾರ ಪ್ರತಿ ಲೀಟರ್‌ಗೆ 85.4 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಮಹೀಂದ್ರ ಸೆಂಚುರೊ ಅಗ್ಗದ ಎನ್1 ವೆರಿಯಂಟ್ ಲಾಂಚ್

ಕಾರಿನಲ್ಲಿ ಲಭ್ಯವಾಗುವಂತಹ ಫೀಚರ್‌ಗಳು ನೂತನ ಸೆಂಚರೊವನ್ನು ತನ್ನ ಇತರ ನಿಕಟ ಸ್ಪರ್ಧಿಗಳಿಗಿಂತ ಭಿನ್ನವಾಗಿಸಿದೆ. ಇದು ಆಂಟಿ ಥೆಫ್ಟ್ ಅಲಾರಾಂ, ಫೈಂಡ್ ಮಿ ಲ್ಯಾಂಪ್, ಗೈಡ್ ಲ್ಯಾಂಪ್, ಪ್ಲಿಪ್ ಕೀ ಮತ್ತು 5 ಹಂತಗಳಲ್ಲಿ ಹೊಂದಾಣಿಸಬಹುದಾದ ರಿಯರ್ ಸಸ್ಫೆಷನ್‌ಗಳಂತಹ ಅತ್ಯಾಧುನಿಕ ಫೀಚರುಗಳನ್ನು ಒಳಗೊಂಡಿವೆ.

ಮಹೀಂದ್ರ ಸೆಂಚುರೊ ಅಗ್ಗದ ಎನ್1 ವೆರಿಯಂಟ್ ಲಾಂಚ್

ಅಂತೆಯೇ ಸೆಂಚುರೊ ಬಿಡುಗಡೆಯಾದ ಬೆನ್ನಲ್ಲೇ ಮಹೀಂದ್ರ ನಿರೀಕ್ಷೆಗೂ ಮೀರಿ ಭಾರಿ ಬೇಡಿಕೆ ವ್ಯಕ್ತವಾಗಿದ್ದವು. ಅಲ್ಲದೆ ಕಳೆದ ಆರು ತಿಂಗಳೊಳಗೆ ಒಂದು ಲಕ್ಷಕ್ಕೂ ಹೆಚ್ಚು ಯುನಿಟ್ ಸೇಲ್ ಮಾಡುವಲ್ಲಿ ಸಂಸ್ಥೆ ಯಶಸ್ವಿಯಾಗಿತ್ತು.

ಮಹೀಂದ್ರ ಸೆಂಚುರೊ ಅಗ್ಗದ ಎನ್1 ವೆರಿಯಂಟ್ ಲಾಂಚ್

ಅಷ್ಟೇ ಅಲ್ಲದೆ ಅನೇಕ ಮೂಲಗಳಿಂದ 'ವರ್ಷದ ಬೈಕ್' ಪ್ರಶಸ್ತಿ ಬಾಚಿಕೊಳ್ಳುವಲ್ಲಿ ಸೆಂಚುರೊ ಯಶಸ್ವಿಯಾಗಿದೆ. ಈ ಎಲ್ಲದರ ಮೂಲಕ ಮಾರುಕಟ್ಟೆಗೆ ಭರ್ಜರಿ ರಿ ಎಂಟ್ರಿ ಕೊಡುವಲ್ಲಿ ಮಹೀಂದ್ರ ಯಶಸ್ವಿಯಾಗಿದೆ.

More from DriveSpark

Article Published On: Saturday, January 25, 2014, 15:31 [IST]
English summary
Following the massive success of the Centuro commuter motorcycle Mahindra today launched the Centuro N1. The N1 is nothing but a variant of the regular Centuro that costs slightly less.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+