ಕಡಿಮೆ ಬೆಲೆಯ 4X4 ಆಫ್‌ರೋಡ್ ವಾಹನ ಹುಡುಕುತ್ತಿದ್ದೀರಾ?: ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌!

ವಾಹನ ಪ್ರೇಮಿಗಳಿಗಂತೂ ಸಾಧಾರಣವಾಗಿ ಓಡಿಸುವ ಕಾರುಗಳಿಗಿಂತ ಹೆಚ್ಚು ಪವರ್‌ ಮತ್ತು ಪರ್ಫಾಮೆನ್ಸ್‌ ನೀಡುವ ಆಫ್‌ರೋಡ್ ವಾಹನಗಳೇ ಹೆಚ್ಚು ಅಚ್ಚು ಮೆಚ್ಚು. ನಮ್ಮಲ್ಲಿ ಹಲವರು ಪರ್ಫಾಮೆನ್ಸ್‌ಗಿಂತ ಮೈಲೇಜ್‌ಗೆ ಆದ್ಯತೆ ನೀಡುತ್ತಾರಾದರೂ, ವಾಹನದ ಪರ್ಫಾಮೆನ್ಸ್‌ ನೋಡಿ ಕೊಳ್ಳುವವರೂ ಇದ್ದಾರೆ. ಅವುಗಳಲ್ಲಿ ಥಾರ್‌, ಜಿಮ್ನಿ ಮುಂತಾದ ಕಾರುಗಳು ಪ್ರಮುಖವಾದವು.

ಇಂದಿನ ಈ ಲೇಖನದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಪೋರ್‌ವ್ಹೀಲ್‌ 4X4 (4X4 Offroad) ವಾಹನಗಳು ಯಾವುದೆಂದು ನೋಡೋಣ. ಪ್ರಮುಖ ವಾಹನಗಳನ್ನು ನಾವು ಈ ಪಟ್ಟಿಗೆ ಪ್ರಮುಖ ಕಂಪನಿಗಳ ಕಾರುಗಳನ್ನು ಸೇರಿಸಿದ್ದು, ಈ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೂ ಓದಿ ಮತ್ತು ಆಪ್ತರ ಜೊತೆ ಹಂಚಿಕೊಳ್ಳಿ.

Most Affordable 4X4 Offroad Vehicles In India Mahindra Thar Jimny Scorpio N And More

1. ಮಾರುತಿ ಸುಜುಕಿ ಜಿಮ್ನಿ: ಭಾರತದಲ್ಲಿ ಸದ್ಯಕ್ಕೆ ಸಿಗುತ್ತಿರುವ ಕಡಿಮೆ ಬೆಲೆಯ 4X4 ಆಫ್‌ರೋಡ್‌ (4X4 Offroad) ವಾಹನಗಳಲ್ಲಿ ಇದು ಪ್ರಮುಖವಾದವು. ಇದು ಐಡಲ್ ಸ್ಟಾರ್ಟ್/ ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5L ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6000 rpmನಲ್ಲಿ 104.8 Ps ಗರಿಷ್ಠ ಪವರ್ ಹಾಗೂ 4000 rpmನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 12.74 ಲಕ್ಷದಿಂದ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

2. ಮಹೀಂದ್ರಾ ಥಾರ್‌: ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಪ್ರಸಿದ್ದವಾಗಿರುವ ಆಫ್‌ರೋಡ್‌ ವಾಹನ ಎಂದರೆ ತಪ್ಪಾಗಲಾರದು. ಮಹೀದ್ರಾ ಥಾರ್‌ ಬಗ್ಗೆ ನೊಡುವುದಾದರೆ ೩ ಡೋರ್ ಮಹೀಂದ್ರಾ ಥಾರ್ ರೂ.10.98 ಲಕ್ಷದಿಂದ ರೂ.16.94 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.

Most Affordable 4X4 Offroad Vehicles In India Mahindra Thar Jimny Scorpio N And More

ಇದು 3 ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, 1.5 - ಲೀಟರ್ ಡೀಸೆಲ್, 2.2 - ಲೀಟರ್ ಡೀಸೆಲ್ ಹಾಗೂ 2.0 - ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್. ಜೊತೆಗೆ 6 - ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

3. ಮಹೀಂದ್ರಾ ಸ್ಕಾರ್ಪಿಯೋ ಎನ್: ಹಲವಾರು ವರ್ಷಗಳಿಂದ ಮಾರುಕಟ್ಟೆಯಲ್ಲಿ ಸ್ಕಾರ್ಪಿಯೋ ಇಲ್ಲ ಎಂಬ ಕೊರತೆಯನ್ನು ಮಹೀಂದ್ರಾ, ಹೊಸ ಮಹೀಂದ್ರಾ ಸ್ಕಾರ್ಪಿಯೋ ಎನ್ ಅನ್ನು ಲಾಂಚ್‌ ಮಾಡುವ ಮೂಲಕ ನೀಗಿಸಿತ್ತು. ಮಹೀಂದ್ರಾ ಸ್ಕಾರ್ಪಿಯೋ ಎನ್ ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 2.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 200 bhp ಗರಿಷ್ಠ ಪವರ್ ಹಾಗೂ 380 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Most Affordable 4X4 Offroad Vehicles In India Mahindra Thar Jimny Scorpio N And More

4. ಫೋರ್ಸ್‌ ಗೂರ್ಖಾ: ನಮ್ಮ ನಿಮ್ಮ ನಡುವೆ ಈ ಹೊಸ ಪೋರ್ಸ್‌ ಗೂರ್ಖಾ ಹೆಚ್ಚಾಗಿ ಕಂಡು ಬರುವುದಿಲ್ಲವಾದರೂ, ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಆಫ್‌ರೊಡ್‌ ವಾಹನವೊಂದು ಬೇಕು ಎಂದು ನೋಡುವವರಿಗೆ ಇದೊಂದು ಉತ್ತಮ ಆಯ್ಕೆ ಎಂದೇ ಹೇಳಬಹುದು. ಇದಕ್ಕೆ ಪ್ರಮುಖ ಕಾರಣ ಈ ಕಾರಿನ ಪರ್ಫಾಮೆನ್ಸ್ ಮತ್ತು ಕಾರ್ಯಕ್ಷಮತೆ.

ಹೊಸ ಗೂರ್ಖಾ ಮಾದರಿಯು ನ್ಯೂ ಜನರೇಷನ್ ಆಫ್-ರೋಡ್ ಪ್ರಿಯರನ್ನು ಸೆಳೆಯಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 2.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ. 2.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಮಾದರಿಯು 90 ಬಿಎಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿದ್ದು, ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 4X4 ಡ್ರೈವ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ.

Most Affordable 4X4 Offroad Vehicles In India Mahindra Thar Jimny Scorpio N And More

5. ಇಸುಸು ವಿ ಕ್ರಾಸ್ ಡಿ ಮ್ಯಾಕ್ಸ್: ಭಾರತೀಯ ಮಾರುಕಟ್ಟೆಯಲ್ಲಿ ಲೈಪ್‌ಸ್ಟೈಲ್‌ ಪಿಕ್‌ಅಪ್‌ ಟ್ರಕ್‌ನ ಸೆಗ್ಮೆಂಟ್‌ನಲ್ಲಿ ಅತೀ ಹೆಚ್ಚು ಪ್ರಸಿದ್ದವಾಗಿರುಬ ಕಾರು ಇದೆಂದರೆ ತಪ್ಪಾಗಲಾರದು. ಈ ಕಾರು ಫೋರ್‌ಸಿಲಿಂಡರ್‌ನಲ್ಲಿ ಲಭ್ಯವಿದ್ದು ಎರಡು ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. 1.9-liter ಡೀಸೆಲ್‌ ಎಂಜಿನ್‌ ಮತ್ತು 3.0-liter ಡೀಸೆಲ್‌ ಎಂಜಿನ್‌ನಲ್ಲಿ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, March 3, 2024, 15:00 [IST]
English summary
Most affordable 4x4 offroad vehicles in india mahindra thar jimny scorpio n and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+