2013ರಲ್ಲಿ ದೇಶಕ್ಕೆ ಎಂಟ್ರಿ ಕೊಡಲಿರುವ 6 ಬಹುನಿರೀಕ್ಷಿತ ಬೈಕ್‌ಗಳು!
2013ನೇ ಇಸವಿ ದೇಶದ ಬೈಕ್ ಪ್ರಿಯರ ಪಾಲಿಗೆ ಅತ್ಯಂತ ಹೆಚ್ಚು ಶುಭಸುದ್ದಿ ಕೊಡುವ ವರ್ಷವಾಗಿರಲಿದೆ. ಯಾಕೆಂದರೆ ಈಗಾಗಲೇ ಖ್ಯಾತ ಕಂಪನಿಯ ಬೈಕ್‌ಗಳು ದೇಶಕ್ಕೆ ಲಗ್ಗೆಯಿಡಲು ಸಜ್ಜಾಗಿ ನಿಂತಿದೆ.
ದೇಶದ ಪ್ರಯಾಣಿಕ ವಿಭಾಗದಲ್ಲಿ ದ್ವಿಚಕ್ರ ವಾಹನಗಳಿಗೆ ಭಾರಿ ಬೇಡಿಕೆಯಿರುವುದೇ ಇದರ ಹಿಂದಿರುವ ಪ್ರಮುಖ ಕಾರಣವಾಗಿದೆ. ಮಧ್ಯಮ ವರ್ಗದ ಜನರು ಕಚೇರಿ ಮುಂತಾದ ಕಡೆಗಳಿಗೆ ತೆರಳಲು ದ್ವಿಚಕ್ರ ವಾಹನಗಳನ್ನೇ ಹೆಚ್ಚು ಹರಸಿಕೊಳ್ಳುತ್ತಾರೆ.
ಇನ್ನು ಯುವ ಗ್ರಾಹಕರು ಸಹ ಬೈಕ್‌ಗಳಿಗೆ ಮಾರು ಹೋಗುತ್ತಾರೆ. ಸ್ನೇಹಿತರ ಜತೆಗೂಡಿ ಜಾಲಿ ರೈಡ್ ಹೊಡೆಯುವುದು ಅವರ ಹವ್ಯಾಸವಾಗಿರುತ್ತದೆ. ಹಾಗಿರುವಾಗ ಬೆಳೆದು ಬರುತ್ತಿರುವ ದೇಶದ ಮಾರುಕಟ್ಟೆಯನ್ನು ವಾಹನ ಉತ್ಪಾದಕ ಸಂಸ್ಥೆ ನಿಕಟವಾಗಿ ನಿಗಾವಹಿಸುತ್ತಿದೆ. ಹಾಗಿದ್ದರೆ ಬನ್ನಿ ಪ್ರಸಕ್ತ ಸಾಲಿನಲ್ಲಿ ಇಡಿ ದೇಶವೇ ಎದುರು ನೋಡುತ್ತಿರುವ ಆರು ಅಂತಹ ಬೈಕ್‌ಗಳು ಯಾವುವು ಎಂಬುದನ್ನು ತಿಳಿಯುವ ಕುತೂಹಲ ನಿಮ್ಮಲ್ಲಿಲ್ಲವೇ?

ಮುಂದಿನ ಪುಟ ತಿರುವುತ್ತಾ 2013ನೇ ಸಾಲಿನಲ್ಲಿ ದೇಶಕ್ಕೆ ಆಗಮನವಾಗಲಿರುವ ಆರು ಬಹುನಿರೀಕ್ಷಿತ ಬೈಕ್‌ಗಳ ಬಗ್ಗೆ ತಿಳಿದುಕೊಳ್ಳಿರಿ...

Bajaj Pulsar 375
ದೇಶದ ನಂ.1 ಸ್ಪೋರ್ಟ್ಸ್ ಬೈಕೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಜಾಜ್ ಪಲ್ಸರ್ ಹೊಸ ರೂಪ ಪಲ್ಸರ್ 375 ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.

KTM Duke 390
ಇನ್ನು ಕೆಟಿಎಂ ಡ್ಯೂಕ್ ಪ್ರಸಕ್ತ ತಿಂಗಳಲ್ಲೇ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಸಂಪೂರ್ಣ ವಿವರಗಾಗಿ ಇಲ್ಲಿ ಕ್ಲಿಕ್ಕಿಸಿರಿ...

Harley Davidson 500
ಇಡೀ ಜಗತ್ತಿನಲ್ಲೇ ಹೆಚ್ಚು ಜನಮನ್ನಣೆಗೆ ಪಾತ್ರವಾಗಿರುವ ಹರ್ಲಿ ಡೇವಿಡ್ಸನ್ ಈ ಬಾರಿ ಕಡಿಮೆ ಸಿಸಿ ಎಂಜಿನ್ ಸಾಮರ್ಥ್ಯವುಳ್ಳ ಬೈಕ್ ಪರಿಚಯಿಸಲಿದೆ. ಮೂಲಗಳ ಪ್ರಕಾರ ಹರ್ಲಿ ಡೇವಿಡ್ಸನ್ 500 ಸಿಸಿ ಬೈಕ್ ಭಾರತಕ್ಕೆ ಲಗ್ಗೆಯಿಡಲಿದ್ದು, ಇತರ ಹರ್ಲಿ ಬೈಕ್‌ಗಳಿಗೆ ಹೋಲಿಸಿದರೆ ದರ ಕೂಡಾ ಅಗ್ಗವಾಗಿರಲಿದೆ.

Honda CB400
ಭಾರತದಲ್ಲೇ ಈಗಾಗಲೇ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಹೋಂಡಾ, ಮುಂದಿನ ದಿನಗಳಲ್ಲಿ ಸಿಬಿ ಸರಪಣಿಯಲ್ಲಿ ಹೊಸದಾದ 400 ಸಿಸಿ ಬೈಕ್ ಬಿಡುಗಡೆ ಮಾಡಲಾಗಿದೆ.

Royal Enfield Continetal GT
ಬುಲೆಟ್‌ಗಳ ರಾಜ ರಾಯಲ್ ಎನ್‌ಫೀಲ್ಡ್ ದೇಶದಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳ ದ್ವಿಚಕ್ರ ವಾಹನವಾಗಿದೆ. ಪ್ರಸ್ತುತ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕೂಡಾ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿದೆ.

Yamaha R250
ಆರ್ ಸಿರೀಸ್‌ನಲ್ಲಿ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿದ್ದ ಯಮಹಾ ಇದೀಗ ಆರ್250 ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಮೂಲಗಳ ಪ್ರಕಾರ ಯಮಹಾ ಆರ್250 ಕೂಡಾ ಇದೇ ವರ್ಷ ಮಾರುಕಟ್ಟೆ ಪ್ರವೇಶ ಪಡೆಯಲಿದೆ.

ಇದೀಗ ಭಾರತಕ್ಕೆ ಆಗಮನವಾಗಲಿರುವ ಯಮಹಾ, ಬಜಾಜ್, ಹರ್ಲಿ ಡೇವಿಡ್ಸನ್, ಹೋಂಡಾ, ಕೆಟಿಎಂ ಹಾಗೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








