ಧೋನಿ ಡಬಲ್ ಧಮಾಕಾ; ರೇಸಿಂಗ್‌ನಲ್ಲೂ ಕಮಾಲ್

ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಸಾಗುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಸಾಧನೆ ಮಾಡಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ.

ಇದೀಗ ಕ್ರಿಕೆಟ್ ಮಾತ್ರವಲ್ಲದೆ ರೇಸಿಂಗ್ ಜಗತ್ತಿನಲ್ಲೂ ಮಹಿ ಸುದ್ದಿ ಮಾಡುತ್ತಿದ್ದಾರೆ. ಭಾರತದ ಮೊತ್ತ ಮೊದಲ ಸೂಪರ್ ಬೈಕ್ ತಂಡ ಹುಟ್ಟು ಹಾಕಿದ್ದ ಧೋನಿ ಅವರ 'ಮಹಿ ರೇಸಿಂಗ್ ಟೀಮ್ ಇಂಡಿಯಾ' ತಂಡವೀಗ ವಿಶ್ವ ಸೂಪರ್ ಸ್ಪೋರ್ಟ್ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಗೆಲುವು ದಾಖಲಿಸುವ ಮೂಲಕ ಗಮನ ಸೆಳೆದಿದೆ.

ಈ ಮೂಲಕ ಕ್ರಿಕೆಟ್‌ನಲ್ಲಿ ದ್ವಿಶತಕ ಸಂಭ್ರಮದಲ್ಲಿರುವ ಮಹಿಗೆ ಡಬಲ್ ಧಮಾಕಾ ಸಿಕ್ಕಂತಾಗಿದೆ. ಮಹಿ ರೇಸಿಂಗ್ ತಂಡದ ಚಾಲಕ ಟರ್ಕಿಯ ಕೆನಾನ್ ಸೊಫೌಲು, ಪ್ರಸಕ್ತ ಅವಧಿಯ ಮೊದಲ ರೇಸ್ ಗೆಲ್ಲುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಇದು ಖಂಡಿತವಾಗಿಯೂ ವಿಶ್ವ ರೇಸಿಂಗ್‌ನಲ್ಲಿ ಗುರುತಿಸಿಕೊಳ್ಳಲು ಮಹಿ ರೇಸಿಂಗ್ ತಂಡಕ್ಕೆ ನೆರವಾಗಲಿದೆ.

MS Dhoni's Superbike team wins opening race

15 ಸುತ್ತುಗಳ ಈ ಚಾಂಪಿಯನ್‌ಶಿಪ್‌ನಲ್ಲಿ ಮೂರು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಸೊಫೌಲು ಎರಡನೇಯವರಾಗಿ ರೇಸ್ ಆರಂಭಿಸಿದ್ದರು. ಆದರೆ ತಮ್ಮ ಕವಾಸಕಿ ಝಡ್‌ಎಕ್ಸ್-6ಆರ್ ಸೂಪರ್ ಬೈಕ್‌ನಲ್ಲಿ ಅತಿ ವೇಗವನ್ನು ಪ್ರದರ್ಶಿಸುವ ಮೂಲಕ ತಮ್ಮ ನಿಕಟ ಸ್ಪರ್ಧಿಯಾದ ಲೋವಾಸ್‌ಗಿಂತ 1.899 ಸೆಕೆಂಡುಗಳಷ್ಟು ಬೇಗನೇ ಗುರಿ ಕ್ರಮಿಕರಿಸುವಲ್ಲಿ ಯಶಸ್ವಿಯಾಗಿದ್ದರು.

MS Dhoni's Superbike team wins opening race

ನನ್ನಿಂದ ಪರಿಪೂರ್ಣತೆಯ ರೇಸಿಂಗ್ ಪ್ರದರ್ಶಿಸುವಲ್ಲಿ ಸಾಧ್ಯವಾಗಿದೆ. ನನ್ನ ಹಾಗೂ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿಕೊಂಡಿರುವುದು ಸಂತಸಕ್ಕೆ ಕಾರಣವಾಗಿದೆ ಎಂದು ಸೊಫೌಲು ತಿಳಿಸಿದ್ದಾರೆ.

MS Dhoni's Superbike team wins opening race

ಮಹಿ ರೇಸಿಂಗ್ ತಂಡದ ಮತ್ತೊಬ್ಬ ಚಾಲಕರಾಗಿರುವ ಫ್ರಾನ್ಸ್‌ನ ಫ್ಯಾಬಿಯನ್ ಫೋರೆಟ್ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದರು.

ಫಲಿತಾಂಶ: (ಟಾಪ್ 4 ರೈಡರ್ಸ್)

ಫಲಿತಾಂಶ: (ಟಾಪ್ 4 ರೈಡರ್ಸ್)

1. ಕೆ ಸೊಫೌಲು (ಮಹಿ ರೇಸಿಂಗ್ ಟೀಮ್ ಇಂಡಿಯಾ)

2. ಸ್ಯಾಮ್ ಲೋವ್ಸ್ (ಯಕ್‌‍ನಿಕ್ ಮೋಟಾರ್ ಸ್ಪೋರ್ಟ್)

3. ಮೈಕಲ್ ವಿಡಿ ಮಾರ್ಕ್ (ಪಾಟ ಹೋಂಡಾ ವರ್ಲ್ಡ್ ಸೂಪರ್ ಸ್ಪೋರ್ಟ್)

4. ಫ್ಯಾಬಿಯನ್ ಫೋರೆಟ್ (ಮಹಿ ರೇಸಿಂಗ್ ಟೀಮ್ ಇಂಡಿಯಾ)

ಮಹಿ ರೇಸಿಂಗ್ ಟೀಮ್ ಇಂಡಿಯಾ

ಮಹಿ ರೇಸಿಂಗ್ ಟೀಮ್ ಇಂಡಿಯಾ

ಮಹಿ ರೇಸಿಂಗ್ ಟೀಮ್ ಇಂಡಿಯಾ

ಮಹಿ ರೇಸಿಂಗ್ ಟೀಮ್ ಇಂಡಿಯಾ

ಮಹಿ ರೇಸಿಂಗ್ ಟೀಮ್ ಇಂಡಿಯಾ

ಮಹಿ ರೇಸಿಂಗ್ ಟೀಮ್ ಇಂಡಿಯಾ

ಮಹಿ ರೇಸಿಂಗ್ ಟೀಮ್ ಇಂಡಿಯಾ

ಮಹಿ ರೇಸಿಂಗ್ ಟೀಮ್ ಇಂಡಿಯಾ

ಮಹಿ ರೇಸಿಂಗ್ ಟೀಮ್ ಇಂಡಿಯಾ

ಮಹಿ ರೇಸಿಂಗ್ ಟೀಮ್ ಇಂಡಿಯಾ

ಮಹಿ ರೇಸಿಂಗ್ ಟೀಮ್ ಇಂಡಿಯಾ

ಮಹಿ ರೇಸಿಂಗ್ ಟೀಮ್ ಇಂಡಿಯಾ

More from DriveSpark

Article Published On: Monday, February 25, 2013, 15:02 [IST]
English summary
India's first World Superbike team, Mahi Racing, began its World Supersport Championship campaign with a bang when its lead rider Kenan Sofuoglu of Turkey comfortably won the first race of the season.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+