ವೆಸ್ಪಾದಿಂದ ಇನ್ನೊಂದು ಕ್ಲಾಸಿಕ್ ಸ್ಕೂಟರ್ ಲಾಂಚ್
ಭಾರತಕ್ಕೆ ಪ್ರವೇಶ ಪಡೆದ ಒಂದು ವರ್ಷದೊಳಗೆ ಭಾರಿ ಯಶಸ್ಸು ಕಂಡಿರುವ ಇಟಲಿ ಮೂಲದ ಪಿಯಾಜಿಯೊ ದ್ವಿಚಕ್ರ ವಾಹನ ಉತ್ಪಾದಕ ಕಂಪನಿಯು, ದೇಶಕ್ಕೆ ಇನ್ನೊಂದು ನೂತನ ವೆಸ್ಪಾ ಕ್ಲಾಸಿಕ್ ಮಾಡೆಲನ್ನು ಪರಿಚಯಿಸಿದೆ.
ಕೆಲವು ದಿನಗಳ ಹಿಂದೆಯಷ್ಟೇ ವೆಸ್ಪಾ ಪ್ರೀಮಿಯಂ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಬಂದಿದ್ದವು. ಇದನ್ನು ಖಚಿತಪಡಿಸಿರುವ ಪಿಯೊಜಿಯೊ, ನೂತನ ವೆಸ್ಪಾ ವಿಎಕ್ಸ್ 125 ವೆರಿಯಂಟ್ ಬಿಡುಗಡೆಗೊಳಿಸಿದೆ.
ನಿಮ್ಮ ಮಾಹಿತಿಗಾಗಿ ವೆಸ್ಪಾ ನೂತನ ಮಾದರಿಯ ದೆಹಲಿ ಎಕ್ಸ್ ಶೋ ರೂಂ ದರ 71,380 ರು.ಗಳಾಗಿವೆ. ಈ ಮೂಲಕ ಪ್ರೀಮಿಯಂ ವಿಭಾಗದಲ್ಲಿ ಪ್ರಾಬಲ್ಯ ಇನ್ನಷ್ಟು ಮುಂದುವರಿಸುವ ಇರಾದೆಯನ್ನು ಕಂಪನಿ ಹೊಂದಿದೆ. ವೆಸ್ಪಾ ಹೊಸ ಸ್ಕೂಟರ್ ವೈಶಿಷ್ಟ್ಯ ತಿಳಿದುಕೊಳ್ಳಲು ಪೋಟೊ ಫೀಚರ್ ತಿರುವಿರಿ...

ವೆಸ್ಪಾ ಮೊದಲ ಎಲ್‌ಎಕ್ಸ್ ವೆರಿಯಂಟ್ ಕಳೆದ ವರ್ಷ ಬಿಡುಗಡೆಗೊಂಡಿತ್ತು. ಅಲ್ಲದೆ ಕೇವಲ ಒಂದು ವರ್ಷದೊಳಗೆ 52,000 ಯುನಿಟ್ ಮಾರಾಟ ಗಿಟ್ಟಿಸಿಕೂಳ್ಳುವ ಮೂಲಕ ವೆಸ್ಪಾ ಭರ್ಜರಿ ಯಶಸ್ಸು ಸಾಧಿಸಿತ್ತು.

ಮೊದಲ ಮಾದರಿಯ ಆಗಾಧ ಯಶಸ್ಸಿನ ಬಳಿಕವೀಗ ತನ್ನ ರೇಂಜ್ ಸ್ಕೂಟರ್‌ಗಳನ್ನು ವಿಸ್ತರಿಸಲು ವೆಸ್ಪಾ ನಿರ್ಧರಿಸಿದೆ.

ಇದೇ ಸಂದರ್ಭದಲ್ಲಿ ಕಂಪನಿಯ ಯೋಜನೆಯನ್ನು ಬಹಿರಂಗಪಡಿಸಿರುವ ಪಿಯಾಜಿಯೊ ವೆಹಿಕಲ್ಸ್ ಇಂಡಿಯಾ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ರವಿ ಚೋಪ್ರಾ, ವರ್ಷಾಂತ್ಯದಲ್ಲಿ ಮತ್ತೊಂದು ಕ್ಲಾಸಿಕ್ ವೆಸ್ಪಾ ಮಾದರಿ ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದಾರೆ.

ಪ್ರಸ್ತುತ ಕಂಪನಿಯು ಪ್ರೀಮಿಯಂ ಸ್ಕೂಟರ್ ಸೆಗ್ಮೆಂಟ್‌ನಲ್ಲಿ ಗಮನ ಕೇಂದ್ರಿತವಾಗಿದೆ. ಸದ್ಯಕ್ಕೆ ಪ್ರಯಾಣಿಕ ಸೆಗ್ಮೆಂಟಿಗೆ ಕಾಲಿರಿಸುವ ಯಾವುದೇ ಯೋಜನೆಗಳಿಲ್ಲ ಎಂಬುದನ್ನು ಸಹ ಚೋಪ್ರಾ ಖಚಿತಪಡಿಸಿದರು.

ನೂತನ ವೆಸ್ಪಾ ವಿಕ್ಸ್ ಮಾಡೆಲ್ 125 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಪ್ರಮುಖವಾಗಿ ಭಾರತ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ.

ಇದು 200ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಹಾಗೂ ಟ್ಯೂಬ್‌ಲೆಸ್ ಟೈರ್‌ಗಳಂತಹ ಆಕರ್ಷಕ ಫೀಚರ್‌ಗಳನ್ನು ಒಳಗೊಂಡಿದೆ.

ಎರಡು ನೂತನ ಕಲರ್ ವೆರಿಯಂಟ್
Vibrante Rosa (dual tone red and pink)

ಟ್ಯೂಬ್‌ಲೆಸ್ ಎಂಆರ್‌ಎಫ್ ಜಾಪ್ಪರ್ ಟೈರ್

ಹೊಸತಾದ ಸ್ಪೀಡೋಮೀಟರ್ ಡೈಯಲ್ ಡಿಸೈನ್

ನೂತನ ವೆಸ್ಪಾ 125 ಸಿಸಿ 4 ಸ್ಟ್ರೋಕ್ 3 ವಾಲ್ವೆ ಎಂಜಿನ್‌ನಿಂದ ನಿಂಯತ್ರಿಸಲ್ಪಡುತ್ತಿದ್ದು, 10 ಪಿಎಸ್ ಪವರ್ (11ಎನ್‌ಎಂ ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ನೂತನ ವೆಸ್ಪಾ ವಿಎಕ್ಸ್ 125 ವೆರಿಯಂಟ್ ಎಂಟು ಲೀಟರ್ ಇಂಧನ ಟ್ಯಾಂಕ್ ಹೊಂದಿದೆ.

ಕಂಪನಿಯ ಪ್ರಕಾರ ವೆಸ್ಪಾ ವಿಎಕ್ಸ್ 125 ಪ್ರತಿ ಲೀಟರ್‌ಗೆ 60 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ಅಂದರೆ ಒಮ್ಮೆ ಫುಲ್ ಟ್ಯಾಂಕ್ ತುಂಬಿಸಿದರೆ ಸುಮಾರು 400 ಕೀ.ಮೀ. ದೂರದ ತನಕ ಚಲಿಸಬಹುದಾಗಿದೆ.

ನೂತನ ವೆಸ್ಪಾ ವಿಎಕ್ಸ್ ದೆಹಲಿ ಎಕ್ಸ್ ಶೋ ರೂಂ ದರ 71,380 ರು.ಗಳಾಗಿವೆ.

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








