ಪಿಯಾಜಿಯೊ ತೈಫೂನ್ 150 ಬಿಡುಗಡೆಗೆ ರೆಡಿ
ಇತ್ತೀಚೆಗಷ್ಟೇ ಪ್ರೀಮಿಯಂ ಜೀವನಶೈಲಿ ಸ್ಕೂಟರ್ ಆದ ವೆಸ್ಪಾ ಎಲ್‌ಎಕ್ಸ್ 125 ಬಿಡುಗಡೆಗೊಳಿಸಿದ್ದ ಇಟಲಿಯ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಪಿಯಾಜಿಯೊ ಭಾರತಕ್ಕೆ ಮತ್ತೊಂದು ಆಕರ್ಷಕ ಸ್ಕೂಟರನ್ನು ಸದ್ಯದಲ್ಲೇ ಪರಿಚಯಿಸಲಿದೆ.
ನಾವು ಈ ಹಿಂದೆಯೇ ಪಿಯಾಜಿಯೊ ಫ್ಲೈ ಭಾರತಕ್ಕೆ ಆಗಮಿಸುವ ಬಗ್ಗೆ ವರದಿ ಮಾಡಿದ್ದೆವು. ಆದರೆ ಇದೀಗ ಲಭ್ಯವಿರುವ ಮಾಹಿತಿ ಪ್ರಕಾರ ಅತಿ ಶೀಘ್ರದಲ್ಲಿ ಭಾರತ ಮಾರುಕಟ್ಟೆಯನ್ನು ತೈಫೂನ್ ಸ್ಕೂಟರ್ ಲಗ್ಗೆಯಿಡಲಿದೆ.
ಸಾಮಾನ್ಯ ಕಾರು ಖರೀದಿ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ವೆಸ್ಪಾ ಕ್ಲಾಸಿಕ್ ಎಂಟ್ರಿ ಕೊಟ್ಟಿದ್ದರೆ ತೈಫೂನ್ 150ಸಿಸಿ ಸ್ಕೂಟರ್ ಪುರುಷರನ್ನು ಆಕರ್ಷಿಸುವ ಪ್ರಯತ್ನ ಮಾಡಲಿದೆ.
125ಸಿಸಿ ತೈಫೂನ್ ಸ್ಕೂಟರ್ ಈಗಾಗಲೇ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಆದರೆ ದೇಶದಲ್ಲಿ 125ಸಿಸಿ ಬಿಡುಗಡೆಗೊಳಿಸಿದರೆ ಅದು ವೆಸ್ಪಾ ಎಲ್‌ಎಕ್ಸ್ 125 ಸಿಸಿಗೆ ಹಿನ್ನಡೆಯಾಗುವ ಹಿನ್ನಲೆಯಾಗುವ ಹಿನ್ನಲೆಯಲ್ಲಿ 150 ಸಿಸಿ ಎಂಜಿನ್ ಪ್ರಯೋಗಿಸಲು ಕಂಪನಿ ನಿರ್ಧರಿಸಿದೆ.

ಪಿಯಾಜಿಯೊ ತೈಫೂನ್
ಮಲ್ಟಿ ಪಾಯಿಂಟ್ ಫ್ಯೂಯಲ್ ಇಂಜೆಕ್ಷನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ದೇಶದ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಿಯಾಜಿಯೊ ತೈಫೂನ್ ಪಾತ್ರವಾಗಲಿದೆ.

ಪಿಯಾಜಿಯೊ ತೈಫೂನ್
ಪಿಯಾಜಿಯೊ ತೈಫೂನ್ 150ಸಿಸಿ ಎಂಜಿನ್ 11.4 ಬಿಎಚ್‌ಪಿ ಪೀಕ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಪವರ್‌ಫುಲ್ ಸ್ಕೂಟರ್ ಎನಿಸಿಕೊಳ್ಳಲಿದೆ.

ಪಿಯಾಜಿಯೊ ತೈಫೂನ್
ಫವರ್‌ಫುಲ್ ಎಂಜಿನ್ ಹೊಂದಿದ್ದರೆ ಹೆಚ್ಚು ಮೈಲೇಜ್ ನಿರೀಕ್ಷಿಸುವಂತಿಲ್ಲ. ಅಂದರೆ ಪಿಯಾಜಿಯೊ ತೈಫೂನ್ ಪ್ರತಿ ಲೀಟರ್‌ಗೆ 32 ಕೀ.ಮೀ ಮೈಲೇಜ್ ನೀಡಲಿದೆ.

ಪಿಯಾಜಿಯೊ ತೈಫೂನ್
ಪಿಯಾಜಿಯೊ ಆತ್ಯಾಕರ್ಷಕ ಫೀಚರ್‌ಗಳನ್ನು ಹೊಂದಿರಲಿದ್ದು, ಗರಿಷ್ಠ ಸೀಟ್ ಸ್ಟೋರೇಜ್ ಜಾಗವನ್ನು ಹೊಂದಿರಲಿದೆ.

ಪಿಯಾಜಿಯೊ ತೈಫೂನ್
ಇದರ ಪವರ್‌ಫುಲ್ ಎಂಜಿನ್ ಜತೆಗೆ ಪಿಯಾಜಿಯೊ ತೈಫೂನ್ ಗಂಟೆಗೆ ಗರಿಷ್ಠ 100 ಕೀ.ಮೀ ವೇಗತೆ ಪಡೆದುಕೊಳ್ಳಲಿದೆ. ಸುರಕ್ಷತೆಗೂ ಹೆಚ್ಚು ಪ್ರಾಧ್ಯಾನ್ಯತೆ ಕೊಡಲಾಗಿದ್ದು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿನ್ನಡೆಯಲ್ಲಿ ಡ್ರಮ್ ಬ್ರೇಕ್ ಆಳವಡಿಸಲಾಗಿದೆ.

ಪಿಯಾಜಿಯೊ ತೈಫೂನ್
ಪಿಯಾಜಿಯೊ ತೈಫೂನ್ ಸೆವೆನ್ ಲೀಟರ್ ಫ್ಯೂಯಲ್ ಟ್ಯಾಂಕ್ ಹೊಂದಿದೆ. ಮೈಲೇಜ್ 30 ಅಸುಪಾಸಿನಲ್ಲಿದ್ದರೂ 200 ಕೀ. ಮೀ. ರೇಂಜ್ ನೀಡಲಿದೆ.

ಪಿಯಾಜಿಯೊ ತೈಫೂನ್
ವೆಸ್ಪಾ ಎಲ್‌ಎಕ್ಸ್ ಬಳಿಕ ಪಿಯಾಜಿಯೊದಿಂದ ದೇಶದಲ್ಲಿ ಅನಾವರಣಗೊಳ್ಳಲಿರುವ ಎರಡನೇ ಬೈಕ್ ಇದಾಗಿದೆ. ಇದೀಗ ಲಭ್ಯವಿರುವ ಮಾಹಿತಿ ಪ್ರಕಾರ ಇದರ ದರ 85,000 ರು. ಅಸುಪಾಸಿನಲ್ಲಿರಲಿದೆ.


Click it and Unblock the Notifications








