ಸುಜುಕಿ ಸೂಪರ್ ಬೈಕ್‌ನ ಹೆಮ್ಮೆಯ ಮಾಲಿಕ ಸಲ್ಮಾನ್
ಸದ್ಯ ಹಾಟ್ ಹಾಟ್ ವಿಷಯಗಳಿಗಾಗಿ ಸುದ್ದಿ ಗಿಟ್ಟಿಸಿಕೊಳ್ಳುತ್ತಿರುವ ಬಾಲಿವುಡ್‌ನ ಎವರ್ ಗ್ರೀನ್ ಬ್ಯಾಚುಲರ್ ನಟ ಸಲ್ಮಾನ್ ಖಾನ್, ಈ ನಡುವೆ ಮಗದೊಂದು ಸುಜುಕಿ ಬೈಕನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ತಮ್ಮ ಅಚ್ಚುಮೆಚ್ಚಿನ ಸುಜುಕಿ ಬೈಕ್‌ಗಳ ಬಗ್ಗೆ ಅತೀವ ಕ್ರೇಜ್ ಹೊಂದಿರುವ ಸಲ್ಮಾನ್, ಸುಜುಕಿ ಜಿಎಸ್‌ಎಕ್ಸ್-ಆರ್1000ಝಡ್ ಸೀಮಿತ ಆವೃತ್ತಿಯ ಬೈಕನ್ನು ತಮ್ಮ ದಾಗಿಸಿದ್ದಾರೆ.
ಸಲ್ಮಾನ್ ಖಾನ್ ವಿಶೇಷ ಪುಟಕ್ಕೆ ಭೇಟಿ ಕೊಡಿರಿ
ಇದೇ ಸಂದರ್ಭದಲ್ಲಿ ಸುಜುಕಿ ಬೈಕ್ ಮಾಲಿಕರ ಎಕ್ಸ್‌ಕ್ಲೂಸಿವ್ 'ಸುಜುಕಿ ಬೈಕಿಂಗ್ ಲಾರ್ಡ್ಸ್' ಕ್ಲಬ್‌ನ್ನು ಸಲ್ಮಾನ್ ಉದ್ಘಾಟಿಸಿದ್ದರು. ಹೆಚ್ಚಿನ ವಿವರ ಹಾಗೂ ಆಕರ್ಷಕ ಚಿತ್ರಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಜಪಾನ್‌ನ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ಸುಜುಕಿಯ ಬೈಕ್‌ಗಳ ಬ್ರಾಂಡ್ ಅಂಬಾಸಿಡರ್ ಕೂಡಾ ಆಗಿರುವ ಸಲ್ಮಾನ್ ಈ ಸಂದರ್ಭದಲ್ಲಿ ಪ್ರತಿಕ್ರಿಯಿಸುತ್ತಾ, ಸುಜುಕಿ ಸೂಪರ್ ಬೈಕ್‌ಗಳು ಯಾವತ್ತೂ ಶ್ರೇಷ್ಠ ತಂತ್ರಗಾರಿಕೆಯನ್ನು ಹೊಂದಿದ್ದು, ಗರಿಷ್ಠ ಶಕ್ತಿ, ನಿರ್ವಹಣೆ, ಚಾಲನಾ ಗುಣಮಟ್ಟತೆ ಮತ್ತು ಹ್ಯಾಂಡ್ಲಿಂಗ್ ಪ್ರದಾನ ಮಾಡುತ್ತಿದೆ ಎಂದಿದ್ದಾರೆ.

ಮಾತು ಮುಂದುವರಿಸಿದ ಸಲ್ಮಾನ್, ಈ ಎಕ್ಸ್‌ಕ್ಲೂಸಿವ್ ಜಿಎಸ್‌ಎಕ್ಸ್-ಆರ್100ಝಡ್, ಸುಜುಕಿಯೆಂಬ ಸೂಪರ್ ಬೈಕ್‌ಗಳ ಕಿರೀಟದಲ್ಲಿ ರತ್ನವಾಗಿರಲಿದೆ ಎಂದು ಹೊಗಳಿದ್ದಾರೆ. ಈ ಬೈಕನ್ನು ತಮ್ಮದಾಗಿಸುವುದು ಪ್ರತಿಯೊಬ ಬೈಕರ್‌ನ ಸೌಲಭ್ಯವಾಗಿದೆ. ಇಲ್ಲಿ ಎಂಜಿನಿಯರ್‌ಗಳ ಕೌಶಲ್ಯ ರೈಡರುಗಳ ಅತ್ಯುತ್ಸುಕತೆಯಾಗಿ ಪರಿವರ್ತನೆಯಾಗುತ್ತದೆ ಎಂದಿದ್ದಾರೆ.

ಪ್ರಸ್ತುತ ಸುಜುಕಿ ಸೂಪರ್ ಬೈಕ್‌ನಲ್ಲಿ ದೀರ್ಘ ಪ್ರಯಾಣವನ್ನು ಎದುರು ನೋಡುತ್ತಿರುವ ತಾನು, ಸ್ವಾತಂತ್ರ್ಯದ ಅನುಭವ ಹಾಗೂ ಸಂತೋಷದ ಭಾಸವಾಗುತ್ತಿದೆ ಎಂದಿದ್ದಾರೆ.

ಜಾಗತಿಕವಾಗಿ ಜಿಎಸ್‌ಎಕ್ಸ್-ಆರ್ ಸೂಪರ್ ಬೈಕ್ ಉತ್ಪಾದನೆಯ 10 ಲಕ್ಷ ಮೈಲುಗಲ್ಲು ಯಶಸ್ಸಿನ ಹಿನ್ನಲೆಯಲ್ಲಿ ಸೀಮಿತ ಆವೃತ್ತಿಯ ಜಿಎಸ್‌ಎಕ್ಸ್-ಆರ್1000ಝಡ್ ಉತ್ಪಾದಿಸಲಾಗುತ್ತಿದೆ. ಇತಿಹಾಸದತ್ತ ಗಮನ ಹಾಯಿಸಿದರೆ 1985ನೇ ಇಸವಿಯಲ್ಲಿ ಮೊದಲ ಜಿಎಸ್‌ಎಕ್ಸ್-ಆರ್ ಜಾಗತಿಕವಾಗಿ ಪರಿಚಯಿಸಲಾಗಿತ್ತು.

ಅಂದ ಹಾಗೆ ಸಲ್ಮಾನ್ ಬಳಿ ಈಗಾಗಲೇ ಸುಜುಕಿ ಹಯಾಬುಸ ಮತ್ತು ಇನ್ಟ್ರುಡರ್ ಎಂ1800 ಕ್ರೂಸರ್ ಬೈಕ್‌ಗಳಿವೆ. ಈ ಪಟ್ಟಿಗೆ ಇನ್ನೊಂದು ಆಕರ್ಷಕ ಬೈಕ್ ಸೇರ್ಪಡೆಯಾಗಿದೆ.


Click it and Unblock the Notifications








