ರೇಸಿಂಗ್‌ ಬೆಂಕಿ ಆಕಸ್ಮಿಕ; ಸಂತೋಷ್ ಪ್ರಾಣಾಪಾಯದಿಂದ ಪಾರು

By Nagaraja

ವರ್ಲ್ಡ್ ಕ್ರಾಸ್ ಕಂಟ್ರಿ Rally ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ದೇಶದ ಮೊದಲ ರೇಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನ ಸಿಎಸ್ ಸಂತೋಷ್, ಅಬುದಾಬಿಯಲ್ಲಿ ಸಾಗಿದ ಡೆಸಾರ್ಟ್ ರೇಸಿಂಗ್ ವೇಳೆ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎಪ್ರಿಲ್‌ ಆರಂಭದಲ್ಲಿ ಅಬುದಾಬಿ ಡೆಸಾರ್ಟ್ ಚಾಲೆಂಜ್ ರೇಸಿಂಗ್‌ನಲ್ಲಿ ಭಾಗವಹಿಸಲು ತೆರಳಿದ್ದ ಸಂತೋಷ್ ದೇಶದ ನಿರೀಕ್ಷೆಯಾಗಿದ್ದರು. ಆರು ದಿನಗಳ ಪರ್ಯಂತದ ಅಬುದಾಬಿ ಡೆಸಾರ್ಟ್ ರೇಸಿಂಗ್‌ನ ನಾಲ್ಕನೇ ದಿನದಲ್ಲಿ ಬಹುತೇಕ ದೂರ ಕ್ರಮಿಕರಿಸಿದ ಸಂದರ್ಭದಲ್ಲಿ ಸಂತೋಷ್ ಅವರ ಬೈಕ್‌ನಲ್ಲಿ ಹಠಾತ್ ಆಗಿ ಬೆಂಕಿ ಕಾಣಿಸಿಕೊಂಡಿತ್ತು.

ಸುಜುಕಿ 450ಎಫ್ ಸೂಪರ್ ಬೈಕ್‌ನಲ್ಲಿ ರೇಸಿಂಗ್ ಮುಂದುವರಿಸಿದ್ದ ಸಂತೋಷ್ 10ನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಒಟ್ಟು 266 ಕೀ.ಮೀ ದೂರದ ಪೈಕಿ ಇನ್ನೇನು 40 ಕೀ.ಮೀ ಮಾತ್ರ ಬಾಕಿ ಉಳಿದಿರುವುದಾಗ ಇಂತಹದೊಂದು ಅಪಘಾತ ಸಂಭವಿಸಿರುವುದು ನಿಜಕ್ಕೂ ಬೇಸರಕ್ಕೆ ಕಾರಣವಾಗಿದೆ.

ಮರಭೂಮಿಯ ವಿಪರೀತ ತಾಪಮಾನ ಹಾಗೂ ಎಂಜಿನ್ ಬಿಸಿಯಿಂದಾಗಿ ಇಂಧನಕ್ಕೆ ಬೆಂಕಿ ತಗಲಿತ್ತು. ಕ್ಷಣಾರ್ಧದಲ್ಲೇ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಪ್ರಸ್ತುತ ಪ್ರಾಣಾಪಾಯದಿಂದ ಪಾರಾಗಿರುವ ಸಂತೋಷ್ ಬೆಂಗಳೂರಿಗೆ ಮರಳಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಂಪೂರ್ಣವಾಗಿ ಗುಣಮುಖರಾಗಲು ಇನ್ನು ನಾಲ್ಕು ತಿಂಗಳ ವಿಶ್ರಾಂತಿಯ ಅಗತ್ಯವಿದೆ.

FIM World Cross Country Championship
FIM World Cross Country Championship
FIM World Cross Country Championship
FIM World Cross Country Championship
FIM World Cross Country Championship
FIM World Cross Country Championship
FIM World Cross Country Championship
FIM World Cross Country Championship

ವೀಡಿಯೋ ವೀಕ್ಷಿಸಿ

ವೀಡಿಯೋ ವೀಕ್ಷಿಸಿ

ವೀಡಿಯೋ ವೀಕ್ಷಿಸಿ

More from DriveSpark

Article Published On: Saturday, May 4, 2013, 11:08 [IST]
English summary
CS Santosh India's first ever World Cross Country championship participant, is back in Bangalore after his debut run in the deserts of Abu Dhabi was cut short by an accident that nearly cost him his life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+