ಬಿಡುಗಡೆಗೂ ಮುನ್ನ ಹೊಸ ಜಿಕ್ಸರ್ ಬೆಂಗಳೂರಿನಲ್ಲಿ ಪ್ರತ್ಯಕ್ಷ..!
ಬೆಂಗಳೂರು ಸ್ಥಳೀಯ ಬಿಡುಗಡೆಗೆ ಇನ್ನೇನು ಎರಡು ದಿನಗಳು ಮಾತ್ರ ಬಾಕಿ ಉಳಿದಿರುವಂತೆಯೇ ಹೊಚ್ಚ ಹೊಸ ಸುಜುಕಿ ಜಿಕ್ಸರ್ 150 ಸಿಸಿ ಬೈಕ್ ನಗರದಲ್ಲಿ ಪ್ರತ್ಯಕ್ಷಗೊಂಡಿದೆ. ಈ ಎಕ್ಸ್‌ಕ್ಲೂಸಿವ್ ಚಿತ್ರಗಳನ್ನು ಡ್ರೈವ್‌ಸ್ಪಾರ್ಕ್ ನಿಮ್ಮ ಮುಂದಿಡುತ್ತಿದ್ದೇವೆ.
2014 ಸೆಪ್ಟೆಂಬರ್ 19 ಶುಕ್ರವಾರದಂದು ಬೆಂಗಳೂರಿನ ಹಾರ್ಡ್ ರಾಕ್ ಕೆಫೆಯಲ್ಲಿ (ಅನಿಲ್ ಕುಂಬ್ಳೆ ವೃತ್ತ ಸಮೀಪ) ಬೆಳಗ್ಗೆ 11.30ಕ್ಕೆ ಸರಿಯಾಗಿ ನಡೆಯುವ ಕಾರ್ಯಕ್ರಮದಲ್ಲಿ ಹೊಸ ಜಿಕ್ಸರ್ ನಗರಕ್ಕೆ ಅಧಿಕೃತ ಪ್ರವೇಶ ಪಡೆಯಲಿದೆ. ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿರುವ ಅತುಲ್ ಗುಪ್ತಾ ಅವರು ಇದನ್ನು ಉದ್ಘಾಟಿಸಲಿದ್ದಾರೆ.

ಅಂದ ಹಾಗೆ ಸೆಪ್ಟೆಂಬರ್ 9ರಂದು ಜಿಕ್ಸರ್ 150 ಸಿಸಿ ಬೈಕ್ ಭಾರತ ಪ್ರವೇಶ ಪಡೆದಿತ್ತು. ಇದರಲ್ಲಿ ಆಳವಡಿಸಲಾಗಿರುವ ಹೊಸತಾದ ಸುಜುಕಿ ಇಕೊ ನಿರ್ವಹಣೆ (ಎಸ್‌ಇಸಿ) ತಂತ್ರಜ್ಞಾನವು ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ.

150 ಸಿಸಿ ವಿಭಾಗದಲ್ಲಿ ಕಾಣಿಸಿಕೊಂಡರೂ 155 ಸಿಸಿ ಏರ್ ಕೂಲ್ಡ್ ಸಿಂಗಲ್ ಕಾರ್ಬ್ಯುರೇಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಜಿಕ್ಸರ್, 14.8 ಅಶ್ವಶಕ್ತಿ (14 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಫೈವ್ ಸ್ಪೀಡ್ ಗೇರ್ ಬಾಕ್ಸ್ ಸಹ ಇರಲಿದೆ.

ದೆಹಲಿ ಎಕ್ಸ್ ಶೋ ರೂಂ ದರ 72,199ಕ್ಕೆ ಎಂಟ್ರಿ ಕೊಟ್ಟಿರುವ ಸುಜುಕಿ ಜಿಕ್ಸರ್ ಬೆಂಗಳೂರು ಆನ್ ರೋಡ್ ಬೆಲೆ 85,500 ರು.ಗಳಷ್ಟು ಇರುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಶುಕ್ರವಾರವಷ್ಟೇ ಲಭ್ಯವಾಗಲಿದೆ.

12 ಲೀಟರ್ ಇಂಧನ ಸಾಮರ್ಥ್ಯದ ಜೀಕ್ಸರ್ 135. ಕೆ.ಜಿ ತೂಕವನ್ನು ಹೊಂದಿದ್ದು, ಪ್ರತಿ ಲೀಟರ್‌ಗೆ 63.2 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ದೊಡ್ಡ ಚಕ್ರಗಳನ್ನು ಹೊಂದಿರುವ ಜಿಕ್ಸರ್, ಮುಂದುಗಡೆ ಡಿಸ್ಕ್ ಯುನಿಟ್ ಮತ್ತು ಹಿಂದುಗಡೆ ಡ್ರಮ್ ಬ್ರೇಕ್ ಪಡೆಯಲಿದೆ. ಅದೇ ರೀತಿ ಎರಡು ರಂಧ್ರಗಳ ವೃತ್ತಾಕಾರದ ಎಕ್ಸಾಸ್ಟ್ ಸಿಸ್ಟಂ ಬೈಕ್‌ಗೆ ಇನ್ನಷ್ಟು ಕ್ರೀಡಾತ್ಮಕ ಲುಕ್ ಪ್ರದಾನ ಮಾಡುತ್ತಿದೆ. ಇನ್ನು ಡಿಜಿಟಲ್ ಕ್ಲಸ್ಟರ್ ಬಗ್ಗೆ ಮಾತನಾಡುವುದಾದ್ದಲ್ಲಿ ಇದು ನೇರ ನಿಖರ ಮಾಹಿತಿಯನ್ನು ಸವಾರರಿಗೆ ಒದಗಿಸಲಿದೆ.

ಅಂದ ಹಾಗೆ ಹೊಸ ಜಿಕ್ಸರ್ ಐದು ಬಣ್ಣಗಳ ಆಯ್ಕೆಗಳನ್ನು ಗ್ರಾಹಕರಿಗೆ ನೀಡಲಿದೆ. ಮೆಟ್ಯಾಲಿಕ್ ಓರ್ಟ್ ಗ್ರೇ, ಕ್ಯಾಂಡಿ ಆಂಟರೆಸ್ ರೆಡ್, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್, ಮೆಟ್ಯಾಲಿಕ್ ಟ್ರೈಟಾನ್ ಬ್ಲೂ ಮತ್ತು ಪಿಯರ್ಲ್ ಮೈರೇಜ್ ವೈಟ್.

ಇದು ಯಮಹಾ ಎಫ್‌ಝಡ್ ಎಫ್ ವಿ2 0, ಹೀರೊ ಎಕ್ಸ್‌ಟ್ರೀಮ್ ಮತ್ತು ಹೋಂಡಾ ಸಿಬಿ ಟ್ರಿಗರ್‌ಗಳಂತಹ ಬೈಕ್‌ಗಳಿಗೆ ಜಿಕ್ಸರ್ ಪ್ರತಿಸ್ಪರ್ಧಿಯಾಗಿರಲಿದೆ.

ಎಂಜಿನ್
ವಿಧ: 4 ಸ್ಟ್ರೋಕ್, 1 ಸಿಲಿಂಡರ್, ಏರ್ ಕೂಲ್ಡ್,
ವಾಲ್ವ್ ಸಿಸ್ಟಂ: ಸಿಒಎಚ್‌ಸಿ, 2 ವಾಲ್ವ್,
ಸಿಸಿ: 154.9 ಸಿಸಿ
ಎಂಜಿನ್ ಔಟ್‌ಪುಟ್: 14.8 ಪಿಎಸ್ @ 8000 ಆರ್‌ಪಿಎಂ,
ಟಾರ್ಕ್: 14 ಎನ್‌ಎಂ @ 6000 ಆರ್‌ಪಿಎಂ
ಇಂಧನ ಸಿಸ್ಟಂ: ಕಾರ್ಬ್ಯೂರೇಟರ್,
ಸ್ಟಾರ್ಟರ್ ಸಿಸ್ಟಂ: ಎಲೆಕ್ಟ್ರಿಕ್
ಟ್ರಾನ್ಸ್‌ಮಿಷನ್ ವಿಧ: 5 ಸ್ಪೀಡ್, ಎಂಟಿ

ಆಯಾಮ
ವೀಲ್ಸ್: ಕಾಸ್ಟ್,
ಉದ್ದ: 2,050 ಎಂಎಂ,
ಅಗಲ: 785 ಎಂಎಂ
ಎತ್ತರ: 1,030 ಎಂಎಂ,
ವೀಲ್ ಬೇಸ್: 1,330 ಎಂಎಂ,
ಗ್ರೌಂಡ್ ಕ್ಲಿಯರನ್ಸ್: 160 ಎಂಎಂ,
ಸೀಟು ಎತ್ತರ: 780 ಎಂಎಂ
ಭಾರ: 135 ಕೆ.ಜಿ
ಇಂಧನ ಟ್ಯಾಂಕ್ ಸಾಮರ್ಥ್ಯ: 12 ಲೀಟರ್

ಇದೀಗ ಹೊಸ ಜಿಕ್ಸರ್ ಬಗ್ಗೆ ಇರುವ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ


Click it and Unblock the Notifications








