ಪ್ರಸಕ್ತ ಸಾಲಿನಲ್ಲೇ ಸುಜುಕಿ ನೂತನ ಬೈಕ್ ಆಗಮನ
ಸುಜುಕಿ ನೂತನ ವರ್ಷನ್ ಜಿಡಬ್ಲ್ಯು250ಎಸ್ ಈಗಾಗಲೇ 2013 ಶಾಂಘೈ ಆಟೋ ಶೋದಲ್ಲಿ ಪ್ರದರ್ಶನ ಕಂಡಿದೆ. ಪ್ರಸ್ತುತ ಬೈಕ್ ಸದ್ಯದಲ್ಲೇ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.
ಮೂಲಗಳ ಪ್ರಕಾರ ಜೂನ್ ತಿಂಗಳ ವೇಳೆಗೆ ಸುಜುಕಿ ಜಿಡಬ್ಲ್ಯು250 ಅಪ್‌ಗ್ರೇಡ್ ವರ್ಷನ್ ಭಾರತಕ್ಕೆ ಆಗಮಿಸಲಿದೆ. ಇದರ ದರ 1.8 ಲಕ್ಷ ರು. ಅಂದಾಜಿಸಲಾಗಿದೆ
ಇನಾಝುಮಾ (Inazuma) ಎಂದು ಅರಿಯಲ್ಪಡುವ ನೂತನ ಬೈಕ್ ಟೂರಿಂಗ್ ಹಾಗೂ ಉತ್ತಮ ಪ್ರಯಾಣಿಕ ಬೈಕ್ ಎಂದೆನಿಸಿಕೊಳ್ಳಲಿದೆ. ವಿನ್ಯಾಸದತ್ತ ಸುಜುಕಿ ಹೆಚ್ಚಿನ ಗಮನ ಕೇಂದ್ರಿಕರಿಸಿದ. ಹಾಗಿದ್ದರೆ ಬನ್ನಿ ಬೈಕ್ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸೋಣವೇ...

ದೀರ್ಘ ದೂರದ ಹೆದ್ದಾರಿ ಪಯಣಕ್ಕೆ ಸೂಕ್ತವಾಗುವ ರೀತಿಯಲ್ಲಿ ವಿಂಡ್‌ಶೀಲ್ಡ್ ರೂಪಿಸಲಾಗಿದೆ. ಹಾಗೆಯೇ ಸ್ಟೈಲಿಂಗ್‌ನಲ್ಲಿ ಬದಲಾವಣೆ ತರಲಾಗಿದೆ.

ಇನ್ನು ಆರಾಮದಾಯಕ ಪಯಣಕ್ಕಾಗಿ ಹ್ಯಾಂಡಲ್ ಕೂಡಾ ಹೊಂದಾಣಿಸಲಾಗಿದೆ.

ಮೊದಲ ನೋಟಕ್ಕೆ ಬೈಕ್ ಹೆಚ್ಚು ಆಕರ್ಷಕವಾಗಿ ಗೋಚರಿಸುತ್ತಿದೆ. ಕಲರ್ ವೆರಿಯಂಟ್ ಕೂಡಾ ಆಕರ್ಷಕವಾಗಿದೆ.

ಸುಜುಕಿ GW250S ಟ್ವಿನ್ ಸಿಲಿಂಡರ್ 248ಸಿಸಿ, ಲಿಕ್ವಿಡ್ ಕೂಲ್ಡ್ ಎಂಜಿನ್ ನಿಯಂತ್ರಿಸಲ್ಪಡುತ್ತಿದ್ದು 26 ಬಿಎಚ್‌ಪಿ (24.2 ಎನ್‌ಎಂ ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Suzuki GW250S

Suzuki GW250S

Suzuki GW250S

Suzuki GW250S



Click it and Unblock the Notifications








