ಅತಿ ಶೀಘ್ರದಲ್ಲೇ ಸುಜುಕಿ ಜಿಕ್ಸರ್ 150ಸಿಸಿ ಬೈಕ್ ಲಾಂಚ್
ದೇಶದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಸುಜುಕಿ ಇಂಡಿಯಾ ಸಂಸ್ಥೆಯು ಸದ್ಯದಲ್ಲೇ ಜಿಕ್ಸರ್ 150ಸಿಸಿ ಬೈಕನ್ನು ಲಾಂಚ್ ಮಾಡಲಿದೆ. ಇದರಂತೆ ಸಂಸ್ಥೆಯು ತಾಂತ್ರಿಕ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಜಿಕ್ಸರ್, ಜೂನ್ ತಿಂಗಳಲ್ಲಿ ಇಂಡೋನೇಷ್ಯಾ ಮಾರುಕಟ್ಟೆ ಪ್ರವೇಶಿಸಲಿದೆ. ತದಾ ಬಳಿಕ ಜುಲೈ ತಿಂಗಳಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷಿಯಿದೆ. ಸುಜುಕಿ ಪ್ರಮುಖ ಪ್ರಚಾರ ರಾಯಭಾರಿಯಾಗಿರುವ ಸಲ್ಮಾನ್ ಖಾನ್ ನೇತೃತ್ವದಲ್ಲಿ ಜಿಕ್ಸರ್ ದೇಶದ ದ್ವಿಚಕ್ರ ವಾಹನೋದ್ಯಮದಲ್ಲಿ ಹೊಸ ಆಶಾಕಿರಣಕ್ಕೆ ಕಾರಣವಾಗಿದೆ.

ಪವರ್
ನೂತನ ಜಿಕ್ಸರ್, 155 ಸಿಸಿ ಸಿಂಗಲ್ ಓವರ್ ಹೆಡ್ ಕ್ಯಾಮ್‌ಶಾಫ್ಟ್ (SOHC) ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 13.9 ಪಿಎಸ್ ಪವರ್ (13.4 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಫೈವ್ ಸ್ಪೀಡ್ ಗೇರ್ ಬಾಕ್ಸ್ ಕೂಡಾ ಲಭ್ಯವಿರಲಿದೆ.

ಎಂಜಿನ್
ಇದರಲ್ಲಿ ಲಿಕ್ವಿಡ್ ಕೂಲ್ಡ್ ಎಂಜಿನ್ ವ್ಯವಸ್ಥೆಯಿರುವುದಿಲ್ಲ. ಬದಲಾಗಿ ಸಾಂಪ್ರದಾಯಿಕ ಏರ್ ಕೂಲ್ಡ್ ಸಿಸ್ಟಂಗೆ ಮೊರೆ ಹೋಗಲಾಗಿದೆ. ಹಾಗೆಯೇ ಫ್ಯೂಯಲ್ ಇಂಜೆಕ್ಷನ್ ಬದಲು ಕಾರ್ಬ್ಯೂರೇಟರ್ (ಎಂಜಿನ್‌ಗಳಲ್ಲಿ ಪೆಟ್ರೋಲ್ ಹಬೆಯನ್ನು ವಾಯುವಿನೊಡನೆ ಸಮ್ಮಿಶ್ರಮಾಡುವ ಸಲಕರಣೆ) ಕಾಣಿಸಿಕೊಳ್ಳಲಿದೆ.

ಪ್ರತಿಸ್ಪರ್ಧಿ
ಆಕರ್ಷಕ ದೇಹ ವಿನ್ಯಾಸವನ್ನು ಹೊಂದಿರುವ ಸುಜುಕಿ ಜಿಕ್ಸರ್, ಹೋಂಡಾ ಟ್ರಿಗರ್, ಬಜಾಜ್ ಪಲ್ಸರ್ 150 ಹಾಗೂ ಯಮಹಾ ಎಫ್‌ಝಡ್16 ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಬೇಡಿಕೆ
ಸಮಕಾಲೀನ ಮಾರುಕಟ್ಟೆಯಲ್ಲಿ 150 ಸಿಸಿ ಬೈಕ್‌ಗಳು ಅತಿ ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿರುವುದರಿಂದ ಈ ಆಧುನಿಕ ವಿನ್ಯಾಸದ ಜಿಕ್ಸರ್ ಬಹುಬೇಗನೇ ಯುವ ಗ್ರಾಹಕರ ಮನ ಗೆಲ್ಲುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ವೈಶಿಷ್ಟ್ಯ
ಇನ್ನುಳಿದಂತೆ ಈ 150ಸಿಸಿ ಬಿಕ್ಸರ್ ಬೈಕ್‌ನಲ್ಲಿ ಆಲ್ ಡಿಜಿಟಲ್ ಇನ್ಸ್ಟ್ರಮೆಂಟ್ ಕನ್ಸೋಲ್ ಸೌಲಭ್ಯವಿರಲಿದೆ. ಹಾಗೆಯೇ ಆಕರ್ಷಕ ಇಂಧನ ಟ್ಯಾಂಕ್, ವಿಶೇಷ ಅಲಾಯ್ ವೀಲ್, ತ್ರಿಕೋನ ಎಕ್ಸಾಸ್ಟ್ ಜತೆಗೆ ಡ್ಯುಯಲ್ ಔಟ್ಲೆಟ್ ಪಡೆದುಕೊಳ್ಳಲಿದೆ.

ಸ್ಮರ್ಧಾತ್ಮಕ ದರ
ಆದರೆ ಇವೆಲ್ಲದಕ್ಕಿಂತಲೂ ಮಿಗಿಲಾಗಿ ಸ್ಮರ್ಧಾತ್ಮಕ ದರಗಳಲ್ಲಿ ಜಿಕ್ಸರ್ ಆವೃತ್ತಿಯನ್ನು ಪರಿಚಯಿಸಬೇಕಾಗಿರುವುದು ಅತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ನೀತಿ ಹೆಚ್ಚು ಪ್ರಾಧಾನ್ಯತೆ ಗಿಟ್ಟಿಸಿಕೊಳ್ಳಲಿದೆ.

ದರ ಮಾಹಿತಿ
ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಸುಜುಕಿ ಜಿಕ್ಸರ್ 77,000 ರು.ಗಳಿಂದ 80,000 ರು.ಗಳ ನಡುವಣ ದರಗಳ ಅಸುಪಾಸಿನಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.

ಲಾಂಚ್
ಅಂದ ಹಾಗೆ ಸುಜುಕಿ ಜಿಕ್ಸರ್ ಪ್ರಸಕ್ತ ಸಾಲಿನ ದ್ವಿತಿಯಾರ್ಧದಲ್ಲಿ ಅಂದರೆ ಜುಲೈ ವೇಳೆಗೆ ಮಾರುಕಟ್ಟೆಗೆ ಪ್ರವೇಶಿಸುವ ನಿರೀಕ್ಷೆಯಿದೆ.


Click it and Unblock the Notifications








