ದೇಶದ ಮೊದಲ ಸ್ಟ್ರೀಟ್ ಸ್ಪೋರ್ಟ್ಸ್ ಬೈಕ್ ಜಿಕ್ಸರ್ ಬೆಂಗಳೂರಿಗೆ ಎಂಟ್ರಿ
ದೇಶದ ಮೊದಲ ಸ್ಟ್ರೀಟ್ ಸ್ಪೋರ್ಟ್ಸ್ ಬೈಕ್ ಎಂದು ಬಿರುದಾಂಕಿತ ಸುಜುಕಿ ಜಿಕ್ಸರ್ 155 ಸಿಸಿ ಬೆಂಗಳೂರು ನಗರಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ. ಈ ಮೂಲಕ 150 ಸಿಸಿ ವಿಭಾಗದಲ್ಲಿ ಹೊಸ ಪೈಪೋಟಿಗೆ ವೇದಿಕೆ ಸಜ್ಜಾಗಲಿದೆ.
ಬೆಲೆ: ಎಕ್ಸ್ ಶೋ ರೂಂ ಬೆಂಗಳೂರು - 74,552 ರು.
ಈಗಾಗಲೇ ರಾಷ್ಟ್ರೀಯ ಬಿಡುಗಡೆ ಕಂಡಿರುವ ಸುಜುಕಿ ಜಿಕ್ಸರ್ ಸ್ಥಳೀಯ ಲಾಂಚ್ ಭಾಗವಾಗಿ ಬೆಂಗಳೂರಿನ ಅನಿಲ್ ಕುಂಬ್ಳೆ ವೃತ್ತ ಸಮೀಪದ ರಾಕ್ ಹಿಲ್ ಕೆಫೆ ಕೇಂದ್ರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಲಾಂಚ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಸುಜುಕಿ ಮೋಟಾರು ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಯನಿರ್ವಾಹಣೆಯ ಉಪಾಧ್ಯಕ್ಷರಾಗಿರುವ ಅತುಲ್ ಗುಪ್ತಾ, ಟಹೊಸ ಜಿಕ್ಸರ್ ಅತ್ಯುತ್ತಮ ನಿರ್ವಹಣೆ ಹ್ಯಾಂಡ್ಲಿಂಗ್ ಮತ್ತು ಸ್ಟೈಲಿಷ್ ಶೈಲಿಯನ್ನು ಹೊಂದಿದೆ ಎಂದಿದ್ದಾರೆ.

ಹೊಸ ಜಿಕ್ಸರ್ 155 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಫೈವ್ ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ. ಅಲ್ಲದೆ ಹೊಸತಾದ ಕಟ್ಟಿಂಗ್ ಎಡ್ಜ್ ಸುಜುಕಿ ಇಕೊ ನಿರ್ವಹಣೆ (ಎಸ್‌ಇಪಿ) ತಂತ್ರಜ್ಞಾನವು ಅತ್ಯುತ್ತಮ ನಿರ್ವಹಣೆ ಜೊತೆಗೆ ಗರಿಷ್ಠ ಇಂಧನ ಕ್ಷಮತೆ ನೀಡಲು ನೆರವಾಗಲಿದೆ.

ಕೆಲವು ವಿಶೇಷ ಗುಣಲಕ್ಷಣಗಳಾದ ಸ್ಪೋರ್ಟಿ ಡ್ಯುಯಲ್ ಮಫ್ಲರ್ ಹಾಗೂ ಸಮಕಾಲೀನ ಸ್ಟಾರ್ಟ್ ಫೋನ್‌ಗಳನ್ನು ಹೋಲುವ ಡಿಜಿಟಲ್ ಸ್ಪೀಡೋಮೀಟರ್ ಇದರಲ್ಲಿ ಆಳವಡಿಸಲಾಗಿದೆ.

ರೇಸಿಂಗ್ ಇತಿಹಾಸದಲ್ಲೇ ತನ್ನದೇ ಆದ ಛಾಪು ಮೂಡಿಸಿರುವ ಸುಜುಕಿಯ ವಿಭಾಗದ ಮೊಟೊ ಜಿಪಿ ಎಂಜಿನಿಯರ್‌ಗಳು ಹೊಸ ಜಿಕ್ಸರ್ ಅಭಿವೃದ್ಧಿಪಡಿಸುವುದರಲ್ಲಿ ನಿರ್ಣಾಯಕ ಪಾತ್ರ ವಾಹಿಸಿದ್ದಾರೆ. ಜಿಕ್ಸರ್ ಚಾಸೀಯನ್ನು ಐಕಾನಿಕ್ ಜಿಎಸ್‌ಎಕ್ಸ್-ಆರ್ ಅಭಿವೃದ್ಧಿಪಡಿಸಿರುವ ಎಂಜಿನಿಯರುಗಳು ರೂಪಿಸಿದ್ದಾರೆ.

155 ಸಿಸಿ ಏರ್ ಕೂಲ್ಡ್ ಸಿಂಗಲ್ ಕಾರ್ಬ್ಯುರೇಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಜಿಕ್ಸರ್, 14.8 ಅಶ್ವಶಕ್ತಿ (14 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಫೈವ್ ಸ್ಪೀಡ್ ಗೇರ್ ಬಾಕ್ಸ್ ಸಹ ಇರಲಿದೆ.

ದೆಹಲಿ ಎಕ್ಸ್ ಶೋ ರೂಂ ದರ 72,199ಕ್ಕೆ ಎಂಟ್ರಿ ಕೊಟ್ಟಿರುವ ಸುಜುಕಿ ಜಿಕ್ಸರ್ ಬೆಂಗಳೂರು ಆನ್ ರೋಡ್ ಬೆಲೆ 85,500 ರು.ಗಳಷ್ಟು ಇರುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಶುಕ್ರವಾರವಷ್ಟೇ ಲಭ್ಯವಾಗಲಿದೆ.

12 ಲೀಟರ್ ಇಂಧನ ಸಾಮರ್ಥ್ಯದ ಜೀಕ್ಸರ್ 135. ಕೆ.ಜಿ ತೂಕವನ್ನು ಹೊಂದಿದ್ದು, ಪ್ರತಿ ಲೀಟರ್‌ಗೆ 63.2 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ದೊಡ್ಡ ಚಕ್ರಗಳನ್ನು ಹೊಂದಿರುವ ಜಿಕ್ಸರ್, ಮುಂದುಗಡೆ ಡಿಸ್ಕ್ ಯುನಿಟ್ ಮತ್ತು ಹಿಂದುಗಡೆ ಡ್ರಮ್ ಬ್ರೇಕ್ ಪಡೆಯಲಿದೆ. ಅದೇ ರೀತಿ ಎರಡು ರಂಧ್ರಗಳ ವೃತ್ತಾಕಾರದ ಎಕ್ಸಾಸ್ಟ್ ಸಿಸ್ಟಂ ಬೈಕ್‌ಗೆ ಇನ್ನಷ್ಟು ಕ್ರೀಡಾತ್ಮಕ ಲುಕ್ ಪ್ರದಾನ ಮಾಡುತ್ತಿದೆ. ಇನ್ನು ಡಿಜಿಟಲ್ ಕ್ಲಸ್ಟರ್ ಬಗ್ಗೆ ಮಾತನಾಡುವುದಾದ್ದಲ್ಲಿ ಇದು ನೇರ ನಿಖರ ಮಾಹಿತಿಯನ್ನು ಸವಾರರಿಗೆ ಒದಗಿಸಲಿದೆ.

ಅಂದ ಹಾಗೆ ಹೊಸ ಜಿಕ್ಸರ್ ಐದು ಬಣ್ಣಗಳ ಆಯ್ಕೆಗಳನ್ನು ಗ್ರಾಹಕರಿಗೆ ನೀಡಲಿದೆ. ಮೆಟ್ಯಾಲಿಕ್ ಓರ್ಟ್ ಗ್ರೇ, ಕ್ಯಾಂಡಿ ಆಂಟರೆಸ್ ರೆಡ್, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್, ಮೆಟ್ಯಾಲಿಕ್ ಟ್ರೈಟಾನ್ ಬ್ಲೂ ಮತ್ತು ಪಿಯರ್ಲ್ ಮಿರೇಜ್ ವೈಟ್.

ಇದು ಯಮಹಾ ಎಫ್‌ಝಡ್ ಎಫ್ ವಿ2 0, ಹೀರೊ ಎಕ್ಸ್‌ಟ್ರೀಮ್ ಮತ್ತು ಹೋಂಡಾ ಸಿಬಿ ಟ್ರಿಗರ್‌ಗಳಂತಹ ಬೈಕ್‌ಗಳಿಗೆ ಜಿಕ್ಸರ್ ಪ್ರತಿಸ್ಪರ್ಧಿಯಾಗಿರಲಿದೆ.

ಎಂಜಿನ್
ವಿಧ: 4 ಸ್ಟ್ರೋಕ್, 1 ಸಿಲಿಂಡರ್, ಏರ್ ಕೂಲ್ಡ್,
ವಾಲ್ವ್ ಸಿಸ್ಟಂ: ಸಿಒಎಚ್‌ಸಿ, 2 ವಾಲ್ವ್,
ಸಿಸಿ: 154.9 ಸಿಸಿ
ಎಂಜಿನ್ ಔಟ್‌ಪುಟ್: 14.8 ಪಿಎಸ್ @ 8000 ಆರ್‌ಪಿಎಂ,
ಟಾರ್ಕ್: 14 ಎನ್‌ಎಂ @ 6000 ಆರ್‌ಪಿಎಂ
ಇಂಧನ ಸಿಸ್ಟಂ: ಕಾರ್ಬ್ಯೂರೇಟರ್,
ಸ್ಟಾರ್ಟರ್ ಸಿಸ್ಟಂ: ಎಲೆಕ್ಟ್ರಿಕ್
ಟ್ರಾನ್ಸ್‌ಮಿಷನ್ ವಿಧ: 5 ಸ್ಪೀಡ್, ಎಂಟಿ

ಆಯಾಮ
ವೀಲ್ಸ್: ಕಾಸ್ಟ್,
ಉದ್ದ: 2,050 ಎಂಎಂ,
ಅಗಲ: 785 ಎಂಎಂ
ಎತ್ತರ: 1,030 ಎಂಎಂ,
ವೀಲ್ ಬೇಸ್: 1,330 ಎಂಎಂ,
ಗ್ರೌಂಡ್ ಕ್ಲಿಯರನ್ಸ್: 160 ಎಂಎಂ,
ಸೀಟು ಎತ್ತರ: 780 ಎಂಎಂ
ಭಾರ: 135 ಕೆ.ಜಿ
ಇಂಧನ ಟ್ಯಾಂಕ್ ಸಾಮರ್ಥ್ಯ: 12 ಲೀಟರ್


Click it and Unblock the Notifications








