ಸುಜುಕಿ 'ಲೆಟ್ಸ್' ಸ್ಕೂಟರ್ ಬೆಂಗಳೂರಿನಲ್ಲಿ ಭರ್ಜರಿ ಲಾಂಚ್
ಜಗತ್ತಿನ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಸುಜುಕಿ ಮೋಟಾರ್ ಕಾರ್ಪೋರೇಷನ್ ಜಪಾನ್‌ನ ಅಂಗ ಸಂಸ್ಥೆ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಸ್‌ಎಂಐಸಿಎಲ್) ಇಂದು ಬೆಂಗಳೂರಿನಲ್ಲಿ ಅತ್ಯಾಕರ್ಷಕ 110 ಸಿಸಿ ಸ್ಕೂಟರ್ 'ಲೆಟ್ಸ್'ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಸುಜುಕಿ ವೇದಿಕೆಯಲ್ಲಿ ಸಲ್ಲು ಸಲ್ಲಾಪ
ಸುಜುಕಿಯ ಹೊಸ ಲೆಟ್ಸ್ ಸ್ಕೂಟರ್ ಎಲ್ಲ ಪ್ರಾದೇಶಿಕ ನಗರಗಳಲ್ಲೂ ಲಾಂಚ್ ಮಾಡಲಾಗುತ್ತಿದ್ದು, ಇದರಂತೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದೆ. ಕಡಿಮೆ ಬೆಲೆಯ ಸುಂದರ ಹಾಗೂ ಪ್ರಾಯೋಗಿಕತೆ ಲೆಟ್ಸ್ ಸ್ಕೂಟರ್ ಯುವ ಮನಸ್ಕರನ್ನು ಸೆಳೆಯುವಂತಿದೆ.

ಮೈಲೇಜ್
ಉತ್ತಮ ಪಿಕಪ್ ಹೊಂದಿರುವ ಸುಜುಕಿ ಲೆಟ್ಸ್ ಮೋಜು ಅರಸುವ ಗ್ರಾಹಕರಿಗೆ ಹೇಳಿ ಮಾಡಿಸಿದ ಸ್ಕೂಟರ್. ಇದು ಪ್ರತಿ ಲೀಟರ್‌ಗೆ 63 ಕೀ.ಮೀ. ಮೈಲೇಜ್ ನೀಡಲಿದೆ.

ಇದರಲ್ಲಿ ಸುಲಭ ಬಳಕೆಗೆ ಅನುಕೂಲವಾಗುವ ರೀತಿಯಲ್ಲಿ ಫ್ಲೋರ್ ಬೋರ್ಡ್ ಹೊಂದಿದೆ. ವೈವಿಧ್ಯತೆ ಹಾಗೂ ಅನುಕೂಲದೊಂದಿಗೆ ಇದು ಕೆಲಸಕ್ಕೂ ಮೋಜಿಗೂ ರೂಪಿಸಲಾದ ಸ್ಕೂಟರ್.

ಹೆಚ್ಚಿನ ಶಕ್ತಿ, ಅದ್ಭುದ ಪಿಕಪ್, ಆಕರ್ಷಕ ನೋಟ, ಸುಗಮ ಚಾಲನೆ ಹಾಗೂ ನಿರ್ವಹಣೆಯ ಲೆಟ್ಸ್, 98 ಕೆ.ಜಿ ತೂಕ ಹೊಂದಿದ್ದು ಸುಲಭವಾಗಿ ಪಾರ್ಕ್ ಮಾಡಬಹುದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ ಎಸ್‌ಎಂಐಎಲ್‌ನ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಶ್ರೀ ಅತುಲ್ ಗುಪ್ತ, ಲೆಟ್ಸ್ ಆಕರ್ಷಕ ಸ್ಕೂಟರ್ ಆಗಿದ್ದು, ನಗರ ಪ್ರದೇಶದ ಯುವ ಜನರನ್ನು ಸೆಳೆದುಕೊಳ್ಳಲಿದೆ. ಎಸ್‌ಇಪಿ ತಂತ್ರಜ್ಞಾನವನ್ನು ಒಳಗೊಂಡಿರುವ ಲೆಟ್ಸ್, ಶಕ್ತಿ ಹಾಗೂ ಸಾಮರ್ಥ್ಯದ ಜತೆ ರಾಜಿಯಾಗದೆ ಹೆಚ್ಚಿನ ಇಂಧನ ಕ್ಷಮತೆಯನ್ನು ಹೊಂದಿದೆ. ಅಲ್ಲದೆ ಕ್ರಾಂತಿಕಾರಿ ಎಸ್‌ಇಪಿ ಸುಜುಕಿ ಇಕೊ ಫರ್‌ಫಾರ್ಮಮೆನ್ಸ್ ಟೆಕ್ನಾಲಜಿ ದೇಶದ ಉದ್ಯಮದಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ ಎಂದಿದ್ದಾರೆ.

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಲಿಮಿಟೆಡ್‌ನ ರಾಷ್ಟ್ರೀಯ ಮಾರುಕಟ್ಟೆ ಮುಖ್ಯಸ್ಥೆ ಶ್ರೀಮತಿ ಅನು ಅನಾಮಿಕ ಮಾತನಾಡುತ್ತಾ, ಪ್ರಾಕ್ಟಿಕಲ್, ಹಗುರ ಹಾಗೂ ವೇಗದಿಂದ ಕೂಡಿರುವ ಸುಜುಕಿ ಲೆಟ್ಸ್ ಇಂದಿನ ನಗರ ಯುವ ಜನರಿಗೆ ಹೇಳಿ ಮಾಡಿಸಿದೆ. ಇದು ವಿದ್ಯಾರ್ಥಿಗಳಿಗೆ, ದ್ವಿಚಕ್ರ ಚಾಲನೆ ಆರಂಭಿಸುವವರಿಗೆ, ಉದ್ಯೋಗಿಗಳಿಗೆ ಹಾಗೂ ಎಲ್ಲ ವರ್ಗದವರನ್ನೂ ಸುಜುಕಿ ಲೆಟ್ಸ್ ಗಮನ ಸೆಳೆಯುತ್ತದೆ ಎಂದಿದ್ದಾರೆ.

ವಾಹನ ಬಿಡುಗಡೆ ಸಂವಹನ ಕುರಿತು ಮಾತನಾಡಿದ ಅವರು ನಟಿ ಪರಿಣಿತಿ ಚೋಪ್ರಾ ಮೂಲಕ ಮಲ್ಟಿಮೀಡಿಯಾ ಲಾಂಚ್ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಯುವನಟಿ ಮೂಲಕ ಲೆಟ್ಸ್ ಸ್ವಾತಂತ್ರ್ಯ ಮತ್ತು ಸಾಹಸ ಮನೋಭಾವವನ್ನು ಗ್ರಾಹಕರಿಗೆ ತಿಳಿಹೇಳಲಾಗುವುದು ಎಂದರು.

ಶೈಲಿ
ಸಂಸ್ಥೆಯ ಪ್ರಕಾರ ಯುರೋಪಿಯನ್ ಕಾರುಗಳಿಂದ ಸ್ಪೂರ್ತಿ ಪಡೆದು ವಿನ್ಯಾಸ ರಚಿಸಲಾಗಿದೆ. ಹಾಗೆಯೇ ಹೋಂಡಾ ಡಿಯೋಗೆ ನೇರ ಪ್ರತಿಸ್ಪರ್ಧಿಯಾಗಿರಲಿದೆ.

ಎಂಜಿನ್
ಇದರಲ್ಲಿ 112.8 ಸಿಸಿ, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಸ್‌ಒಎಚ್‌ಸಿ, 2 ವಾಲ್ವೆ ಎಂಜಿನ್ ಆಳವಡಿಸಲಾಗಿದ್ದು, 8.7 ಅಶ್ವಶಕ್ತಿ (9 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಲೆಟ್ಸ್ ಬೆಂಗಳೂರಿನಲ್ಲಿ ಐದು ಬಣ್ಣಗಳಲ್ಲಿ ಲಭ್ಯವಿದೆ. ಪರ್ಲ್‌ಮಿರಾ ಕೆಂಪು, ಮೆಟ್ಯಾಲಿಕ್ ಟೈಟಾನ್ ನೀಲಿ, ಪರ್ಲ್‌ಮಿರೇಜ್ ಶ್ವೇತ, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಮತ್ತು ಮೆಟ್ಯಾಲಿಕ್ ಸೋನಿಕ್ ಸಿಲ್ವರ್ ಬಣ್ಣಗಳಲ್ಲಿ ಲಭ್ಯ.

ಬೆಲೆ
ಬೆಂಗಳೂರು ಎಕ್ಸ್ ಶೋ ರೂಂ - 45,384 ರು.


Click it and Unblock the Notifications








