ಸುಜುಕಿಯಿಂದ ಸ್ಪೋರ್ಟ್ಸ್ ಬೈಕ್ ವಿಶೇಷ ಆವೃತ್ತಿ ಲಾಂಚ್
ಕಳಪೆ ಮಾರಾಟದಿಂದಾಗಿ ಉತ್ತಮ ಅಮೆರಿಕದಲ್ಲಿನ ತನ್ನ ಉತ್ಪಾದನೆಯಿಂದ ಸುಜುಕಿ ಫೋರ್ ವೀಲರ್ ಹಿಂದೆ ಸರಿದಿರಬಹುದು. ಆದರೆ ಟು ವೀಲರ್ ವಿಭಾಗದಲ್ಲಿ ಭರ್ಜರಿ ಮಾರಾಟ ಗಿಟ್ಟಿಸಿಕೊಂಡಿರುವ ಸುಜುಕಿ ಸೈಕಲ್ಸ್, ಅಮೆರಿಕದಲ್ಲಿ ತನ್ನ ಯಶಸ್ವಿ 50ನೇ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ.
ಇದರನ್ವಯ ಅಮೆರಿಕ ಮಾರುಕಟ್ಟೆಗಾಗಿ ವಿಶೇಷ GSX-R1000 SE ಸ್ಪೋರ್ಟ್ಸ್ ಬೈಕ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ಜಪಾನ್ ಮೂಲದ ಈ ದ್ವಿಚಕ್ರ ವಾಹನ ಸಂಸ್ಥೆ ನಿರ್ಧರಿಸಿದೆ. ಸುಜುಕಿ ಲಿಮಿಟೆಡ್ ಎಡಿಷನ್ ಜಿಎಸ್‌ಎಕ್ಸ್-ಆರ್1000 ಎಸ್‌ಇ ಪ್ರಮುಖವಾಗಿ ಅಮೆರಿಕದಲ್ಲಿ ಖರೀದಿಗೆ ಲಭ್ಯವಾಗುವುದಾದರೂ ಸದ್ಯದಲ್ಲೇ ಜಾಗತಿಕ ಮಾರಾಟಕ್ಕೂ ತಲುಪುವ ನಿರೀಕ್ಷೆಯಿದೆ.

ಸೀಮಿತ ಆವೃತ್ತಿ
ನೂತನ ಸುಜುಕಿ ಜಿಎಸ್‌ಎಕ್ಸ್-ಆರ್1000 ಎಸ್‌ಇ ವಿಶೇಷ ಆವೃತ್ತಿಯಲ್ಲಿ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳು ಕಂಡುಬರಲಿದೆ.

ನಿಮ್ಮ ಮಾಹಿತಿಗಾಗಿ, ಕೇವಲ ಸೀಮಿತ 100 ಮಾದರಿಗಳಷ್ಟೇ ಸುಜುಕಿಯಿಂದ ಬಿಡುಗಡೆಗೊಳ್ಳಲಿದೆ. ಈ ಪೈಕಿ 50 ಅಮೆರಿಕಕ್ಕೆ ಸೀಮಿತವಾಗಿರಲಿದೆ.

ಸ್ಟೈಲಿಷ್ ವಿನ್ಯಾಸ
ಮೊದಲ ನೋಟದಲ್ಲಿ ಸುಜುಕಿ ವಿಶೇಷ ಆವೃತ್ತಿಯ ಬೈಕ್ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ದರ ಮಾಹಿತಿ ಬಂದಿಲ್ಲ
ಹಾಗಿದ್ದರೂ ಇದುವರೆಗೆ ದರದ ಬಗ್ಗೆ ಯಾವುದೇ ಮಾಹಿತಿಗಳು ಹೊರಬಂದಿಲ್ಲ.

ಸುಜುಕಿ GSX-R1000 SE ವಿಶೇಷ ಆವೃತ್ತಿ


Click it and Unblock the Notifications








