ಸುಜುಕಿ ಜಿಕ್ಸರ್ 150 ಸಿಸಿ ಬೈಕ್ ಬೆಲೆ, ವಿಶಿಷ್ಟತೆಗಳೇನು?

By Nagaraja

ಜಪಾನ್‌ನ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿ, ಕಳೆದ ಕೆಲವು ವರ್ಷಗಳಲ್ಲಿ ಭಾರತ ಮಾರುಕಟ್ಟೆಯಲ್ಲೂ ಗಮನಾರ್ಹ ಬೆಳವಣಿಗೆ ಸಾಧಿಸಿದೆ. ಪ್ರಸ್ತುತ ಸಂಸ್ಥೆಯು ದೇಶಕ್ಕೆ ಹೊಸತಾದ ಜಿಕ್ಸರ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿ ನಿಂತಿದೆ.

ಇದರಂತೆ ಜಿಕ್ಸರ್ ಬೆಲೆ ಹಾಗೂ ವಿಶಿಷ್ಟತೆಗಳ ಬಗ್ಗೆ ಮಹತ್ವಪೂರ್ಣ ಮಾಹಿತಿಗಳನ್ನು ಸಂಸ್ಥೆ ಹೊರಗೆಡವಿದೆ. ಈ ಹಿಂದೆ ಬಾಲಿವುಡ್ ನಟ ಹಾಗೂ ಸಂಸ್ಥೆಯ ಮುಖ್ಯ ಪ್ರಚಾರ ರಾಯಭಾರಿ ಸಲ್ಮಾನ್ ಖಾನ್ ಅವರಿಂದ ಭರ್ಜರಿಯಾಗಿ ಅನಾವರಣ ಕಂಡಿರುವ ಹೊಸ 150 ಸಿಸಿ ಜಿಕ್ಸರ್ ಬೈಕ್‌ ಬಿಡುಗಡೆ ಮುನ್ನ ಬೆಲೆ ಮಾಹಿತಿ ಹೊರಬಿಟ್ಟಿರುವುದು ಅಚ್ಚರಿ ಮೂಡಿಸಿದೆ. ಹೊಸ ಜಿಕ್ಸರ್ ಬೆಂಗಳೂರು ಆನ್ ರೋಡ್ ಬೆಲೆ 87074 ರು. ಆಗಿರಲಿದೆ. ವೈಶಿಷ್ಟ್ಯ ಜೊತೆಗೆ ಕರ್ನಾಟಕದ ಇತರ ನಗರಗಳ ಬೆಲೆ ಮಾಹಿತಿಗಾಗಿ ಚಿತ್ರ ಸಂಪುಟದತ್ತ ಮುಂದುವರಿಯಿರಿ...

ಸುಜುಕಿ ಜಿಕ್ಸರ್ 150 ಸಿಸಿ ಬೈಕ್ ಬೆಲೆ, ವಿಶಿಷ್ಟತೆಗಳೇನು?

ಹೊಸ ಜಿಕ್ಸರ್ 154.9 ಸಿಸಿ 4 ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 14.59 ಅಶ್ವಶಕ್ತಿ (14 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ದರ ಮಾಹಿತಿ (ಆನ್ ರೋಡ್ ಕರ್ನಾಟಕ)

ದರ ಮಾಹಿತಿ (ಆನ್ ರೋಡ್ ಕರ್ನಾಟಕ)

ಬೆಂಗಳೂರು ಹೊರತುಪಡಿಸಿ ಕರ್ನಾಟಕದ ಇತರೆಲ್ಲ ಭಾಗಗಳಲ್ಲಿ ಸಮಾನ ಬೆಲೆ ಇರಲಿದೆ.

ಬೆಂಗಳೂರು: 87074 ರು.

ಬೆಳಗಾವಿ, ರಾಯಚೂರು, ಬಿದರ್, ಬಿಜಾಪುರ, ಚಿತ್ರದುರ್ಗ, ದೇವನಗೆರೆ, ಗುಲ್ಬರ್ಗ, ಹಾಸನ, ಹುಬ್ಲಿ, ಮಂಗಳೂರು, ಮೈಸೂರು, ರಾಯಚೂರು, ಶಿಮೊಗ್ಗ ಮತ್ತು ತುಮಕೂರು: 87058 ರು.

ಸುಜುಕಿ ಜಿಕ್ಸರ್ 150 ಸಿಸಿ ಬೈಕ್ ಬೆಲೆ, ವಿಶಿಷ್ಟತೆಗಳೇನು?

ಹೊಸ ಜಿಕ್ಸರ್‌ನಲ್ಲಿ ಫ್ಲೂಯಲ್ ಇಂಜೆಕ್ಷನ್ ಬದಲು ಕಾರ್ಬ್ಯೂರೇಟರ್ ಇಂಧನ ವ್ಯವಸ್ಥೆಯಿರಲಿದೆ. ಇದರೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಲಗ್ಗತ್ತಿಸಲಾಗಿದೆ. ಇದರ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಅಂತೆಯೇ ಹಿಂದೆಯೇ ಡ್ರಮ್ ಬ್ರೇಕ್ ಸೌಲಭ್ಯವಿರಲಿದೆ.

ಸುಜುಕಿ ಜಿಕ್ಸರ್ 150 ಸಿಸಿ ಬೈಕ್ ಬೆಲೆ, ವಿಶಿಷ್ಟತೆಗಳೇನು?

ಐದು ಅತ್ಯಾಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಜಿಕ್ಸರ್ ಆಗಮನವಾಗಲಿದೆ. ಅವುಗಳೆಂದರೆ ಮೆಟ್ಯಾಲಿಕ್ ಓರ್ಟ್ ಗ್ರೇ, ಮೆಟ್ಯಾಲಿಕ್ ಟ್ರೈಟಾನ್ ಬ್ಲೂ, ಕ್ಯಾಂಡಿ ಆಂಟ್ರೇಸ್ ರೆಡ್, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಮತ್ತು ಪಿಯರ್ಸ್ ಮೈರೇಜ್ ವೈಟ್ ಆಗಿದೆ. ಒಟ್ಟಿನಲ್ಲಿ ಸುಜುಕಿ ಜಿಕ್ಸರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನೀವೂ ಈ ಅತ್ಯಾಕರ್ಷಕ ಬೈಕ್ ಬುಕ್ ಮಾಡಿಕೊಳ್ಳಲು ಬಯಸುವುದಾದ್ದಲ್ಲಿ ಇಲ್ಲಿ ಭೇಟಿ ಕೊಡಿರಿ.

ಎಂಜಿನ್

ಎಂಜಿನ್

ವಿಧ: 4 ಸ್ಟ್ರೋಕ್, 1 ಸಿಲಿಂಡರ್, ಏರ್ ಕೂಲ್ಡ್,

ವಾಲ್ವ್ ಸಿಸ್ಟಂ: ಸಿಒಎಚ್‌ಸಿ, 2 ವಾಲ್ವ್,

ಸಿಸಿ: 154.9 ಸಿಸಿ

ಎಂಜಿನ್ ಔಟ್‌ಪುಟ್: 14.8 ಪಿಎಸ್ @ 8000 ಆರ್‌ಪಿಎಂ,

ಟಾರ್ಕ್: 14 ಎನ್‌ಎಂ @ 6000 ಆರ್‌ಪಿಎಂ

ಇಂಧನ ಸಿಸ್ಟಂ: ಕಾರ್ಬ್ಯೂರೇಟರ್,

ಸ್ಟಾರ್ಟರ್ ಸಿಸ್ಟಂ: ಎಲೆಕ್ಟ್ರಿಕ್

ಟ್ರಾನ್ಸ್‌ಮಿಷನ್ ವಿಧ: 5 ಸ್ಪೀಡ್, ಎಂಟಿ

ಬ್ರೇಕ್

ಬ್ರೇಕ್

ಮುಂಭಾಗ: ಸಿಂಗಲ್ ಡಿಸ್ಕ್,

ಹಿಂಭಾಗ: ಡ್ರಮ್

ಆಯಾಮ

ಆಯಾಮ

ವೀಲ್ಸ್: ಕಾಸ್ಟ್,

ಉದ್ದ: 2,050 ಎಂಎಂ,

ಅಗಲ: 785 ಎಂಎಂ

ಎತ್ತರ: 1,030 ಎಂಎಂ,

ವೀಲ್ ಬೇಸ್: 1,330 ಎಂಎಂ,

ಗ್ರೌಂಡ್ ಕ್ಲಿಯರನ್ಸ್: 160 ಎಂಎಂ,

ಸೀಟು ಎತ್ತರ: 780 ಎಂಎಂ

ಭಾರ: 135 ಕೆ.ಜಿ

ಇಂಧನ ಟ್ಯಾಂಕ್ ಸಾಮರ್ಥ್ಯ: 12 ಲೀಟರ್

ಸಸ್ಪೆಷನ್

ಸಸ್ಪೆಷನ್

ಮುಂಭಾಗ: ಟೆಲಿಸ್ಕಾಪಿಕ್

ರಿಯರ್: ಸ್ವಿಂಗ್ ಆರ್ಮ್, ಮೊನೊ ಸಸ್ಪೆಷನ್

ಚಕ್ರ ವಿಧ

ಚಕ್ರ ವಿಧ

ಮುಂಭಾಗ: 100/80-17-ಟ್ಯೂಬ್‌ಲೆಸ್,

ಹಿಂಭಾಗ: 140/60R-17-ಟ್ಯೂಬ್‌ಲೆಸ್

ಎಲೆಕ್ಟ್ರಿಕಲ್

ಎಲೆಕ್ಟ್ರಿಕಲ್

ಬ್ಯಾಟರಿ: 12V

ಹೆಡ್‌ಲೈಟ್: 12V 35/35W

ಟೈಲ್ ಲೈಟ್: ಎಲ್‌ಇಡಿ

More from DriveSpark

Article Published On: Saturday, August 23, 2014, 15:38 [IST]
English summary
Japanese automobile giant Suzuki has not been doing exceptionally well with its motorcycles in India. They have recently launched its scooter the Let's, along with a price reduction of its quarter-litre offering the Inazuma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+