ಮಹೀಂದ್ರ ಪ್ಯಾಂಥರೊಗೆ 3 ಹೊಸ ವೆರಿಯಂಟ್ ಸೇರ್ಪಡೆ
ಜನವರಿ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದ ಮಹೀಂದ್ರ ಪ್ಯಾಂಥರೊಗೆ ಮೂರು ಹೆಚ್ಚುವರಿ ವೆರಿಯಂಟ್‌ಗಳ ಸೇರ್ಪಡೆಯಾಗಿದೆ. ಈ ಮೂಲಕ ಗ್ರಾಹಕರನ್ನು ಹೆಚ್ಚು ಆಕರ್ಷಿಸುವ ನಿರೀಕ್ಷೆಯನ್ನು ಮಹೀಂದ್ರ ಟು ವೀಲರ್ ಹೊಂದಿದೆ.
110ಸಿಸಿ ಬೈಕ್ ಆಗಿರುವ ಪ್ಯಾಂಥರೊಗೆ ಟಿ-2, ಟಿ-3 ಹಾಗೂ ಟಿ-4 ವೆರಿಯಂಟ್‌ಗಳ ಸೇರ್ಪಡೆಯಾಗಿದೆ. ಹಿಂದೆ ಈ ಪ್ರಯಾಣಿಕ ಬೈಕ್ ಬಿಡುಗಡೆಯಾದ ಸಂದರ್ಭದಲ್ಲಿ ಟಿ-1 ಎಂಬ ವೆರಿಯಂಟ್ ಮಾತ್ರ ಹೊಂದಿತ್ತು.
ಏನಿದೆ ಸ್ಪೆಷಲ್..?
ಇದೀಗ ನೂತನ ಆಯ್ಕೆಗಳು ಖರೀದಿಗಾರರಿಗೆ ಹೆಚ್ಚಿನ ಆಪ್ಷನ್ ಜತೆ ವಿವಿಧ ದರ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಇನ್ನು ಮಹೀಂದ್ರ ಪ್ರಕಾರ, ಪ್ಯಾಂಥರೊ ಪ್ರತಿ ಲೀಟರ್‌ಗೆ 79.5 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಅಂದ ಹಾಗೆ ನೂತನ ವೆರಿಯಂಟ್‌ಗಳಲ್ಲಿ ಅಂತದ್ದೇನಿದೆ ವಿಶೇಷ ಎಂಬುದನ್ನು ಫೋಟೊ ಫೀಚರ್ ಮೂಲಕ ನೋಡೋಣ..
ಇವನ್ನೂ ಓದಿ:

ಟಿ-2 ವೆರಿಯಂಟ್
-ಸೆಲ್ಪ್ ಸ್ಟಾರ್ಟ್
-ಅಲಾಯ್ ವೀಲ್ಸ್
-ಅನಾಲಾಗ್ ಇಸ್ಟ್ರುಮೆಂಟ್ ಕನ್ಸೋಲ್

ಟಿ-3 ವೆರಿಯಂಟ್
-ಕಿಕ್ ಸ್ಟಾರ್ಟ್
-ಅಲಾಯ್ ವೀಲ್ಸ್
-ಅನಾಲಾಗ್ ಕನ್ಸೋಲ್

ಟಿ-4 ವೆರಿಯಂಟ್
-ಕಿಕ್ ಸ್ಟಾರ್ಟ್
-ಸ್ಪೋಕ್ ವಿಲ್ಸ್
-ಅನಾಲಾಗ್ ಕನ್ಸೋಲ್

ದೇಶಿಯವಾಗಿ ವಿನ್ಯಾಸಗೊಳಿಸಲ್ಪಟ್ಟ ಎಂಸಿಐ-5 ಎಂಜಿನ್‌ನಿಂದ ಪ್ಯಾಂಥರೊ ನಿಯಂತ್ರಿಸಲ್ಪಟ್ಟಿದ್ದು, 8.6 ಪಿಎಸ್ ಪವರ್ (8.5 ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 165 ಎಂಎಂ ಗ್ರೌಂಡ್ ಕ್ಲಿಯರನ್ಸ್ ಹಾಗೂ 774 ಎಂಎಂ ಉದ್ದವನ್ನು ಹೊಂದಿದೆ.

ಮಹಿಂದ್ರ ಪ್ಯಾಂಥರೊ ನೂತನ ವೆರಿಯಂಟ್ ಎಕ್ಸ್ ಶೋ ರೂಂ ದರ ಇಂತಿದೆ
- ಟಿ-2 47,990 ರು.
- ಟಿ-3 45,690 ರು.
- ಟಿ-4 44,690 ರು.


Click it and Unblock the Notifications








