2014ರಲ್ಲಿ ಲಾಂಚ್ ಆಗಲಿರುವ ಟಾಪ್ 5 ಬೈಕ್‌ಗಳು

By Nagaraja

ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋದತ್ತ ಆಟೋ ವಿಶ್ಲೇಷಕರು ಬಹಳ ಕುತೂಹಲದಿಂದ ನಿಗಾ ವಹಿಸುತ್ತಿದ್ದರು. ಇಲ್ಲಿ ಅನೇಕ ನೂತನ ಬೈಕ್‌ಗಳು ಅನಾವರಣಗೊಂಡಿದ್ದು ಸದ್ಯದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.

2014 ಆಟೋ ಎಕ್ಸ್ ಪೋ

ಇದರಂತೆ ಪಟ್ಟಿ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗಲು ಸಾಧ್ಯತೆಯಿರುವ ಟಾಪ್ 5 ಬೈಕ್‌ಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಇಲ್ಲಿ 200ರಿಂದ 500 ಸಿಸಿ ಬೈಕ್‌ಗಳನ್ನು ಕೊಡಲಾಗಿದೆ.

ಬಜಾಜ್ ಪಲ್ಸರ್ 400 ಎಸ್‌ಎಸ್

ಬಜಾಜ್ ಪಲ್ಸರ್ 400 ಎಸ್‌ಎಸ್

ಹೌದು, ಬಹುನಿರೀಕ್ಷಿತ ಪಲ್ಸರ್ 400 ಎಸ್‌ಎಸ್ ಇದೇ ಸಾಲಿನಲ್ಲಿ ಆಗಮನವಾಗುವ ಸಾಧ್ಯತೆ ಹೆಚ್ಚಿದೆ. ದೇಶದ ನಂ.1 ಸ್ಪೋರ್ಟ್ಸ್ ಬೈಕ್ ಪಲ್ಸರ್‌ನಿಂದ ಆಗಮನವಾಗಲಿರುವ ಗರಿಷ್ಠ ನಿರ್ವಹಣೆಯ ಬೈಕ್ ಆಗಿರಲಿದೆ.

ಬಜಾಜ್ ಪಲ್ಸರ್ 400 ಎಸ್‌ಎಸ್

ಬಜಾಜ್ ಪಲ್ಸರ್ 400 ಎಸ್‌ಎಸ್

ಸ್ಮರ್ದಾತ್ಮಕ ದರ ಸೇರಿದಂತೆ ಸ್ಪೋರ್ಟಿ ವಿನ್ಯಾಸ ಕಲ್ಪಿಸಿಕೊಡುವುದು ಸಂಸ್ಥೆಯ ಯೋಜನೆಯಾಗಿದೆ. ಇದು 2014ನೇ ಸಾಲಿನ ದ್ವಿತಿಯಾರ್ಧದಲ್ಲಿ ಬಿಡುಗಡೆಯಾಗುವ ಸಂಭವವಿದೆ.

ಹ್ಯೊಸಂಗ್ ಜಿಡಿ 250ಎನ್

ಹ್ಯೊಸಂಗ್ ಜಿಡಿ 250ಎನ್

ಈಗಾಗಲೇ 250 ಸಿಸಿ ವಿಭಾಗದಲ್ಲಿ ಎರಡು ಮಾದರಿಗಳನ್ನು ಪರಿಚಯಿಸಿರುವ ಹ್ಯೊಸಂಗ್ ಮೊದಲ ಬಾರಿಗೆ ಸಿಂಗಲ್ ಸಿಲಿಂಡರ್ ಎಂಜಿನ್ ಪ್ರದರ್ಶಿಸಲಿದೆ. ಪ್ರಮುಖವಾಗಿಯೂ ಭಾರತ ಮಾರುಕಟ್ಟೆ ಗುರಿಯಾಗಿರಿಸಿಕೊಂಡು ಹ್ಯೊಸಂಗ್ ನೂತನ ಬೈಕ್ ತಯಾರಾಗಲಿದೆ.

 ಮಹೀಂದ್ರ ಮೊಜೊ

ಮಹೀಂದ್ರ ಮೊಜೊ

ಅಂತೂ ಇಂತೂ ಕೊನೆಗೂ ಮಹೀಂದ್ರ ಮೊಜೊ 300ಸಿಸಿ ಬೈಕ್ ಮಾರುಕಟ್ಟೆ ಪ್ರವೇಶಿಸಲು ಸನ್ನದ್ಧವಾಗಿ ನಿಂತಿದೆ.

ಮಹೀಂದ್ರ ಮೊಜೊ

ಮಹೀಂದ್ರ ಮೊಜೊ

ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಮಹೀಂದ್ರ ಮೊಜೊ ಡ್ಯುಯಲ್ ಎಕ್ಸ್‌ಹಾಸ್ಟ್‌ಗಳನ್ನು ಪಡೆದುಕೊಂಡಿದೆ.

ಹರ್ಲಿ ಸ್ಟ್ರೀಟ್ 500

ಹರ್ಲಿ ಸ್ಟ್ರೀಟ್ 500

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಹರ್ಲಿ ಅತ್ಯಂತ ಕಡಿಮೆ 500 ಸಿಸಿ ಬೈಕ್ ಸ್ಮರ್ಧಾತ್ಮಕ ದರಗಳಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸಲಿದೆ.

ಹರ್ಲಿ ಸ್ಟ್ರೀಟ್ 500

ಹರ್ಲಿ ಸ್ಟ್ರೀಟ್ 500

ರಾಯಲ್ ಎನ್‌ಫೀಲ್ಡ್ ಆವೃತ್ತಿಗಳಿಗೆ ನೇರ ಪ್ರತಿಸ್ಪರ್ಧೆ ಒಡ್ಡಲಿರುವ ಹರ್ಲಿ ಪ್ರಮುಖವಾಗಿಯೂ ದೇಶದ ಯುವ ಗ್ರಾಹಕರನ್ನು ಟಾರ್ಗೆಟ್ ಮಾಡುತ್ತಿದೆ.

ಕೆಟಿಎಂ ಆರ್‌ಸಿ390

ಕೆಟಿಎಂ ಆರ್‌ಸಿ390

ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬಂತೆ ಕೆಟಿಎಂ ಆರ್‌ಸಿ390, ಹೆಚ್ಚು ಕ್ರೀಡಾತ್ಮಕ ಲುಕ್ ಪಡೆದುಕೊಳ್ಳಲಿದೆ. ಪ್ರಸ್ತುತ ಬೈಕ್ ಪ್ರಸಕ್ತ ಸಾಲಿನಲ್ಲೇ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

More from DriveSpark

Article Published On: Tuesday, February 25, 2014, 6:31 [IST]
English summary
The 2014 Auto Expo is done with and expectations of the consumer have risen tremendously. We list for you, the top 5 bikes below, which are expected to launch in the coming year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+