ಟಿವಿಎಸ್ ಗ್ರಾಫೈಟ್ ಕಾನ್ಸೆಪ್ಟ್ ಸ್ಕೂಟರ್ - ಎಷ್ಟು ಲೈಕ್?
2014 ಆಟೋ ಎಕ್ಸ್ ಪೋದಲ್ಲಿ ಅತಿ ಹೆಚ್ಚು ನಿರೀಕ್ಷೆ ಮೂಡಿಸಿರುವ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಟಿವಿಎಸ್ ಕೂಡಾ ಒಂದಾಗಿದೆ. ಸಾಮಾನ್ಯವಾಗಿ ದ್ವಿಚಕ್ರ ವಾಹನ ವಿಚಾರಕ್ಕೆ ಬಂದಾಗ ಹೀರೊ, ಹೋಂಡಾ ಹಾಗೂ ಬಜಾಜ್ ಹೆಸರುಗಳೇ ಮೊದಲು ಜ್ಞಾಪಕಕ್ಕೆ ಬರುತ್ತವೆ.
2014 ಆಟೋ ಎಕ್ಸ್ ಪೋ
ಆದರೆ ಇವೆಲ್ಲಕ್ಕಿಂತಲೂ ಮಿಗಿಲಾಗಿರುವ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಟಿವಿಎಸ್ ಅನ್ನು ಸಹ ಹಗುರವಾಗಿ ಪರಿಗಣಿಸುವಂತಿಲ್ಲ. ಯಾಕೆಂದರೆ ಅಪಾಚೆಗಳಂತಹ ಜನಪ್ರಿಯ ಆವೃತ್ತಿಗಳನ್ನು ಪರಿಚಯಿಸಿರುವ ಟಿವಿಎಸ್ ದೆಹಲಿಯಲ್ಲಿ ಮಗದೊಮ್ಮೆ ರಣಕಹಳೆ ಮೂಡಿಸಿದೆ.

ಅಪಾಚೆ ತಲಹದಿಯಲ್ಲಿ ಡ್ರೇಕನ್ 250 ಸಿಸಿ ಸ್ಪೋರ್ಟ್ಸ್ ಬೈಕ್ ಮೂಲಕ ತನ್ನ ಸಾಮರ್ಥ್ಯ ಪ್ರದರ್ಶಿಸಿರುವ ಟಿವಿಎಸ್ ಇದೀಗ ಗ್ರಾಫೈಟ್ ಸ್ಪೋರ್ಟಿ ಸ್ಕೂಟರ್ ಕಾನ್ಸೆಪ್ಟ್ ಪ್ರದರ್ಶಿಸಿದೆ.

ಹೆಸರಲ್ಲೇ ಸೂಚಿಸಿರುವ ಟಿವಿಎಸ್ ಗ್ರಾಫೈಟ್, ಆಕ್ರಮಣಕಾರಿ ಕ್ರೀಡಾ ವಿನ್ಯಾಸ ಪಡೆದುಕೊಂಡಿದೆ. ಇದರ ವಿನ್ಯಾಸವನ್ನು ಯುದ್ಧ ವಿಮಾನಗಳಿಂದ ಸ್ಫೂರ್ತಿ ಪಡೆದು ಹಾಗೂ ಟಿವಿಎಸ್ ರೇಸಿಂಗ್ ತಂಡದ ನೆರವಿನೊಂದಿಗೆ ರಚಿಸಲಾಗಿದೆ.

ಟಿವಿಎಸ್ ಗ್ರಾಫೈಟ್ ಸ್ಕೂಟರಿನ ಪ್ರಮುಖ ಆಕರ್ಷಣೆಯೆಂದರೆ ಇದರ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್ (ಕ್ಲಚ್ ರಹಿತ ಮ್ಯಾನುವಲ್ ಟ್ರಾನ್ಸ್‌ಮಿಷನ್). ಇದು ಪ್ಯಾಡಲ್ ಶಿಫ್ಟರ್‌ನಿಂದ ನಿರ್ವಹಿಸಲಿದೆ.

ಇನ್ನು ಮುಂದುಗಡೆ 30 ಎಂಎಂ ಟೆಲಿಸ್ಕಾಪಿಕ್ ಸಸ್ಷೆಷನ್ ಹಾಗೆಯೇ ಹಿಂದುಗಡೆ ಗ್ಯಾಸ್ ಚಾರ್ಜ್ಡ್ ಡ್ಯಾಂಪರ್ ಇರಲಿದೆ.

ಅಂದ ಹಾಗೆ ಟಿವಿಎಸ್ ಗ್ರಾಫೈಟ್‌ನಲ್ಲಿ 150 ಸಿಸಿ ಫೋರ್ ವಾಲ್ವೆ, ಎಸ್‌ಒಎಚ್‌ಸಿ ಎಂಜಿನ್ ಜತೆ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಆಳವಡಿಸಲಾಗಿದೆ.

ಈ ಕ್ರೀಡಾ ಸ್ಕೂಟರ್ ಮುಂದುವರಿದ ಪೋರ್ಸ್ಡ್ ಏರ್ ಕೂಲಿಂಗ್ ಸಿಸ್ಟಂ ಕೂಡಾ ಹೊಂದಿದೆ. ಇನ್ನುಳಿದಂತೆ ಡ್ಯುಯಲ್ ಚಾನೆಲ್ ಡೈನಾಮಿಕ್ ಎಬಿಎಸ್ ಸಿಸ್ಟಂ, ಎಂಜಿನ್ ಇಮೊಬಿಲೈಜರ್ ಮತ್ತು ಎಲೆಕ್ಟ್ರಾನಿಕ್ ಸ್ಮಾರ್ಟ್ ಸ್ಟಾರ್ಟ್ ಇಗ್ನಿಷನ್ ಕೀ ಸಹ ಹೊಂದಿದೆ.

ಇದಲ್ಲದೆ ಮುಂದುವರಿದ ಎಲ್‌ಇಡಿ ಪರದೆ ಕೂಡಾ ಹೊಂದಿದ್ದು, ಇದು ವಾಹನ, ಎಂಜಿನ್ ಹಾಗೂ ಚಾಲನೆ ಬಗ್ಗೆ ತಾಜಾ ಮಾಹಿತಿ ನೀಡಲಿದೆ. ಪ್ರಸ್ತುತ ಎಲ್‌ಇಡಿ ವ್ಯವಸ್ಥೆಯು ಇತರ ಡಿವೈಸ್‌ಗಳಿಗೆ ಸಂಪರ್ಕ ಸೇವೆಯನ್ನು ಒದಗಿಸಲಿದೆ.

ಒಟ್ಟಿನಲ್ಲಿ ದೆಹಲಿಯಲ್ಲಿ ಪ್ರದರ್ಶನ ಕಂಡ ಅತ್ಯಂತ ಆಕರ್ಷಕ ಸ್ಕೂಟರುಗಳಲ್ಲಿ ಟಿವಿಎಸ್ ಗ್ರಾಫೈಟ್ ಸಹ ಸ್ಥಾನ ಗಿಟ್ಟಿಸಿಕೊಂಡಿದೆ ಎಂದು ಹೇಳಿಕೊಂಡರೆ ತಪ್ಪಾಗಲಾರದು. ಹಾಗೆಯೇ ಯಾವುದೇ ಸಂದರ್ಭದಲ್ಲೂ ಇದರ ನಿರ್ಮಾಣ ವರ್ಷನ್ ಆರಂಭವಾದರೆ ಅಚ್ಚರಿಪಡಬೇಕಾಗಿಲ್ಲ.


Click it and Unblock the Notifications








