ಬೆಲೆ ಹೆಚ್ಚಳವಿಲ್ಲ; 2014 ಟಿವಿಎಸ್ ವಿಗೊ ಬಿಡುಗಡೆ
ಸಾಮಾನ್ಯವಾಗಿ ಫೇಸ್‌ಲಿಫ್ಟ್ ಮಾದರಿಗಳು ಬಿಡುಗಡೆಯಾಗುವ ಬೆಲೆಯಲ್ಲೂ ನಿರ್ದಿಷ್ಟ ಪ್ರಮಾಣದ ಏರಿಕೆಯುಂಟಾಗುತ್ತದೆ. ಆದರೆ ಇವೆಲ್ಲಕ್ಕಿಂತಲೂ ಭಿನ್ನ ಎಂಬುದನ್ನು ಸಾಬೀತುಪಡಿಸಿರುವ ದೇಶದ ಮುಂಚೂಣಿಯ ದ್ವಿಚಕ್ರ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಟಿವಿಎಸ್, ಬೆಲೆಯಲ್ಲಿ ಯಾವುದೇ ಹೆಚ್ಚಳಕ್ಕೆ ಮುಂದಾಗದೆ ತನ್ನ ಜನಪ್ರಿಯ ವಿಗೊ ಸ್ಕೂಟರ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.
ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಹೊಸ ವಿಗೊ ಅವತಾರವನ್ನು ಪ್ರದರ್ಶಿಸಿದ್ದ ಟಿವಿಎಸ್, ತಾಜಾ ಹಾಗೂ ಹೆಚ್ಚು ಆಕರ್ಷಣೀಯ ವಿನ್ಯಾಸದತ್ತ ಮೊರೆ ಹೋಗಿದೆ. ಅಂದ ಹಾಗೆ 2014 ಟಿವಿಎಸ್ ವಿಗೊ ವಿಶಿಷ್ಟತೆಗಳೇನು? ವಿವರಗಳಿಗಾಗಿ ಫೋಟೊ ಸ್ಲೈಡರ್‌ನತ್ತ ಮುಂದುವರಿಯಿರಿ...

ಟಿವಿಎಸ್ ವಿಗೊ ಫೇಸ್‌ಲಿಫ್ಟ್ ವರ್ಷನ್ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ಇದರ ಕಪ್ಪು ಬಣ್ಣದ ಅಲಾಯ್ ವೀಲ್ ಹಾಗೂ ಯಾಂತ್ರಿಕ ಭಾಗಗಳು ಹೆಚ್ಚು ಕ್ರೀಡಾತ್ಮಕ ವಿನ್ಯಾಸ ಪ್ರದಾನ ಮಾಡಲಿದೆ.

ಜೂಪಿಟರ್‌ನಲ್ಲಿರುವ ಡಿಜಿಟಲ್ ಸ್ಪೀಡೋಮೀಟರ್, ಪರಿಷ್ಕೃತ ಸೀಟು ಹಾಗೂ ಎಕ್ಸಾಸ್ಟ್ ಔಟ್ಲೆಟ್ ನೂತನ ವಿಗೊ ಆವೃತ್ತಿಗೆ ಇನ್ನಷ್ಟು ಪ್ರೀಮಿಯಂ ಲುಕ್ ನೀಡಲಿದೆ.

ವಿನ್ಯಾಸ ಮಾತ್ರವಲ್ಲದೆ ನೂತನ ವಿಗೊ 110ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 8 ಅಶ್ವಶಕ್ತಿ (8 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಅಂದ ಹಾಗೆ ಸಂಸ್ಥೆಯ ಪ್ರಕಾರ 2014 ಟಿವಿಎಸ್ ವಿಗೊ ಪ್ರತಿ ಲೀಟರ್‌ಗೆ 62 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಈ ಎಲ್ಲ ವೈಶಿಷ್ಟ್ಯಗಳ ಹೊರತಾಗಿಯೂ ದರಗಳಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ. ಇದು ಡ್ರಮ್ ಬ್ರೇಕ್ ಜತೆ ರು. 48,857 ರು. ಹಾಗೆಯೇ ಡಿಸ್ಕ್ ಬ್ರೇಕ್ ಮುಂಬೈ ಎಕ್ಸ್ ಶೋ ರೂಂ ದರ 49,580 ರು.ಗಳಾಗಿರಲಿದೆ.

ವಿಶಿಷ್ಟತೆ
ಡ್ಯುಯಲ್ ಟೋನ್ ಕಲರ್,
ಗ್ರಾಫಿಕ್ಸ್,
ಕಪ್ಪು ಅಲಾಯ್ ವೀಲ್,
ಎಂಜಿನ್ ಘಟಕ,
ಪರಿಷ್ಕೃತ ಸೀಟು,

ವಿಶಿಷ್ಟತೆ
ಜೂಪಿಟರ್ ಎಕ್ಸಾಸ್ಟ್,
ಇಕೊನೊಮೀಟರ್,
ಬ್ರೇಕ್ ಲ್ಯಾಂಪ್,
ಎಲ್‌ಇಡಿ ಟೈಲ್ ಲ್ಯಾಂಪ್
ಡಿಜಿಟಲ್ ಸ್ಪೀಡೋಮೀಟರ್


Click it and Unblock the Notifications








